ಮಂಗಳೂರು: ದಿವಂಗತ ಇಂದಿರಾಗಾಂದಿಯವರ ಪುಣ್ಯತಿಥಿಯ ಸ್ಮರಣಾರ್ಥ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ಪುರಭವನದಲ್ಲಿ ಇಂದು ನಡೆಯಿತು. ಈ ಕಾರ್ಯಕ್ರಮಕ್ಕೆ ದಕ್ಷಿಣ ಭಾರತ ಸೇವಾದಳ ಉಸ್ತುವಾರಿ ವಿನಯ್ ಕುಮಾರ್ ಸೊರಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂಧಿರಾಗಾಂಧಿಯವರು ಮಹಾತ್ಮಗಾಂಧಿಯವರ ಬಡತನ ನಿರ್ಮೂಲನೆಯ ಕನಸನ್ನು ನನಸಾಗಿಸಲು ಸಾಕಷ್ಟು ಶ್ರಮಿಸಿದರು. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟರು ಅವರ ಪುಣ್ಯತಿಥಿಯ ಈ ದಿನವನ್ನು ಜನ ಸೇವೆಗೆ ಮುಡಿಪಾಗಿಡಬೇಕು ಎಂದು ಕರೆನೀಡಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿಯಾದ ಜನಾರ್ದನ ಪೂಜಾರಿಯವರು ಇಂದಿನ ದಿನಗಳಲ್ಲಿ ಯುವಕರಲ್ಲಿ ಶಿಸ್ತು ಕಡಿಮೆಯಾಗುತ್ತಿದೆ. ಬಾಹ್ಯವಾಗಿ ಸಮವಸ್ತ್ರ ತೊಡುವುದರಿಂದ ಶಿಸ್ತು ಬರುವುದಿಲ್ಲ, ಸೇವಾದಳವು ಜನರಲ್ಲಿ ದೇಶಪ್ರೇಮವನ್ನು ಮೂಡಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ, ನಾಗರೀಕರು ದೇಶದ ಸಂಸ್ಕೃತಿ ರಕ್ಷಣೆಗಾಗಿ ಯಾವ ತ್ಯಾಗಕ್ಕಾದರು ಸಿದ್ದರಿರಬೇಕು ಯುವಕರಲ್ಲಿ ದೇಶಪ್ರೇಮ ಮೂಡಿಸಲು ಸೇವಾದಳ ಸ್ಥಾಪನೆಯಾಗಿದೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಐವನ್ ಡಿಸೋಜ,ಶಾಸಕ ಯು.ಟಿ ಖಾದರ್, ಕೆಪಿಸಿಸಿ ಕಾರ್ಯದರ್ಶಿ ಜಿ.ಎ.ಬಾವಾ, ರಾಜ್ಯ ವಿಧಾನ ಸಭೆಯ ವಿರೋಧಪಕ್ಷದ ಮುಖ್ಯ ಸಚೇತಕ ಅಭಯ ಚಂದ್ರ ಜೈನ್, ಮೇಯರ್ ಗುಲ್ಜಾರ್ ಬಾನು ,ಕೆ.ಪಿ.ಎಸ್.ಸಿ.ಡಿ ಉಸ್ತುವಾರಿ ಡಾ.ಪ್ರಮೋದ್ ಕುಮಾರ್ ಪಾಂಡೆ, ಅಶ್ವಿನ್ ಕುಮಾರ್ ರೈ, ಪಿ.ವಿ.ಮೋಹನ್, ರಾಜ್ಯ ಮುಖ್ಯ ಸಂಘಟಕ ಭೀಮಾಶಂಕರ್ ವಿ.ಎಚ್ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English