ಪ್ಲಾಸ್ಟಿಕ್‌ ನಿಷೇಧ ಜಿಲ್ಲಾಡಳಿತದ ನಿರ್ಧಾರಕ್ಕೆ ಬದ್ಧ : ಡಾ.ಹರೀಶ್ ಕುಮಾರ್

1:24 PM, Thursday, November 1st, 2012
Share
1 Star2 Stars3 Stars4 Stars5 Stars
(5 rating, 1 votes)
Loading...

MCC Commissionerಮಂಗಳೂರು: ಮಂಗಳೂರು ನಗರದಾದ್ಯಂತ ಪ್ಲಾಸ್ಟಿಕ್‌ ನಿಷೇಧಕ್ಕೆ ನ. 1ರಿಂದ ನಿರ್ಧರಿಸಲಾಗಿದೆ. ಈ ಸಂಬಂಧ ಮುಂದಿನ ಒಂದು ತಿಂಗಳ ಕಾಲಾವಕಾಶ ನೀಡಲಾಗುವುದು. ಬಳಿಕ ಹಾಲಿನ ತೊಟ್ಟೆ ಸೇರಿದಂತೆ ಪ್ಲಾಸ್ಟಿಕ್‌ ಎಸೆಯುವುದು ಕಂಡುಬಂದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮನೆ ಮನೆಯಿಂದ ಇಂತಹ ಪ್ಲಾಸ್ಟಿಕ್‌ಗಳನ್ನು ಸಂಗ್ರಹಿಸುವ ಸಂಬಂಧ ಕ್ರಮ ಕೈಗೊಳ್ಳಲಾಗುವುದು. ಈ ನೆಲೆಯಲ್ಲಿ ಜಿಲ್ಲಾಡಳಿತ ಕೈಗೊಳ್ಳುವ ನಿರ್ಧಾರಕ್ಕೆ ಮಂಗಳೂರು ಮಹಾನಗರ ಪಾಲಿಕೆ ಬದ್ಧ ಬದ್ಧವಾಗಿದೆ ಎಂದು ಮಂಗಳಾ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಆಯುಕ್ತ ಡಾ| ಹರೀಶ್‌ ಕುಮಾರ್ ತಿಳಿಸಿದರು. ಮೇಯರ್ ಗುಲ್ಜಾರ್ ಬಾನುರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಹೆದ್ದಾರಿ ವಿಸ್ತರಣೆಯಲ್ಲಿ ಮತ್ತು ಪಂಪ್ ವೆಲ್ ವೃತ್ತದ ಬಳಿ ಸರ್ವೀಸ್ ಬಸ್ ನಿಲ್ದಾಣ ಕಾಮಗಾರಿ ಯಾವ ಹಂತಕ್ಕೆ ತಲುಪಿದೆ, ಇಲಾಖೆಗಳ ನಡುವೆ ಹೊಂದಾಣಿಕೆಯಿಲ್ಲದ ಕಾರಣ ಈ ರೀತಿಯಾಗುತ್ತಿದೆ ಎಂದು ಶಂಕರ್‌ ಭಟ್‌ ಪ್ರಶ್ನಿಸಿದರು ಇದಕ್ಕೆ ಉತ್ತರಿಸಿದ ಆಯುಕ್ತ ಹರೀಶ್ ಕುಮಾರ್, ಹೆದ್ದಾರಿ ವಿಸ್ತರಣೆಯಿಂದಾಗಿ ಹೊಸ ಬಸ್ ನಿಲ್ದಾಣದ ಬಳಿ ಅಂಡರ್ ಪಾಸ್ ಅನಿವಾರ್ಯ. ಇದಕ್ಕೆ 10 ಕೋಟಿಯಷ್ಟು ವೆಚ್ಚ ತಗಲುವ ಸಾಧ್ಯತೆಯಿದೆ. ಹೆದ್ದಾರಿ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿ ಪಡಿತರ ಸಮಸ್ಯೆಗಳು ಹಲವು ಇವೆ. ಇದನ್ನು ಪರಿಹರಿಸಲು ಪಾಲಿಕೆ ಮುಂದಾಗಬೇಕು ಮತ್ತು ಅದನ್ನು ಸರಿಪಡಿಸಬೇಕು ಎಂದು ಕಾಂಗ್ರೆಸ್‌ ಸದಸ್ಯ ಹರಿನಾಥ್‌ ಪ್ರಸ್ತಾವಿಸಿ ಮೇಯರ್ ಪೀಠದ ಮುಂಭಾಗದಲ್ಲಿ ಧರಣಿ ಕುಳಿತರು. ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿ, ಇದು ಜಿಲ್ಲಾಡಳಿತಕ್ಕೆ ಸಂಬಂಧಿಸಿದ ವಿಷಯ ಎಂದರು. ಈ ವೇಳೆ ಪ್ರೇಮನಾಥ ಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಮೇಯರ್‌ ಅವರನ್ನು ಪ್ರಶ್ನಿಸಿ, ಜಿಲ್ಲಾಡಳಿತದ ಈ ವಿಷಯವನ್ನು ನಿಮಗೆ ಪರಿಹರಿಸಲು ಸಾಧ್ಯವಾ ಎಂದು ಪ್ರಶ್ನಿಸಿ ಮಾತಿನ ಚಕಮಕಿ ನಡೆಸಿದರು. ಈ ವೇಳೆ ಗದ್ದಲ ನಿಯಂತ್ರಿಸಲಾಗದೆ ಮೇಯರ್ ಮದ್ಯಂತರ ವಿರಾಮ ಘೋಷಿಸಿದರು.

ಕೊನೆಗೆ ಸಭೆ ಯಥಾಸ್ಥಿತಿಗೆ ಬರಲು 15 ನಿಮಿಷ ಬೇಕಾಯಿತು. ಮತ್ತೆ ಸಭೆ ಸೇರಿದಾಗ ಅನುದಾನ ಹಂಚಿಕೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲಾಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English