ಸಿಎಫ್ಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪರವರಲ್ಲಿ ಮನವಿ ಸಲ್ಲಿಸಿದ ಎಬಿವಿಪಿ

4:18 PM, Wednesday, December 25th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

ABVP

ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವತಿಯಿಂದ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಗಲಭೆಗಳಲ್ಲಿ ಸಿ.ಎಫ್.ಐ ಮತ್ತು ಪಿ.ಎಫ್.ಐ ಸಂಘಟನೆಗಳು ರಾಷ್ಟ್ರೀಯತೆಯೊಂದಿಗೆ ತೊಡಗುತ್ತಿರುವಂತಹ ಹಲವಾರು ನಿದರ್ಶಗಳ ಆಧಾರದ ಮೇಲೆ ಈ ಸಂಘಟನೆಗಳನ್ನು ನಿಷೇಧಿಸಿ ಸಂಘಟನೆಯ ಪ್ರಮುಖರ ಮೇಲೆ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಮಂಗಳೂರಿನ ಸರ್ಕಿಟ್‌ಹೌಸ್ ನಲ್ಲಿ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪರವರು ಈ ವಿಷಯದ ಕುರಿತಂತೆ ಗಮನವನ್ನು ಹರಿಸುವ ಬಗ್ಗೆ ಗೃಹ ಸಚಿವರಾದ ಎಸ್.ಆರ್ ಬೊಮ್ಮಾಯಿಯವರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ್ ಸಂದೇಶ್, ನಗರ ಕಾರ್ಯದರ್ಶಿ ಮಣಿಕಂಠ ಕಳಸ, ಸಹಕಾರ್ಯದರ್ಶಿ ಅಕ್ಷಯ್, ಶ್ರೇಯಸ್, ಸಾಗರ್ ಹಾಗೂ ಹಿರಿಯ ಕಾರ್ಯಕರ್ತರಾದ ಶೀತಲ್ ಜವಾಬ್ದಾರಿಯುತ ಕಾರ್ಯಕರ್ತರಾದ ರೋಹಿತ್, ವಚನ್, ಆದಿತ್ಯ, ಶ್ರೀವರ್, ಜಿತೇಶ್, ಗುರು ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English