ಮಡಿಕೇರಿ : ಕಿರಗಂದೂರು, ಚೌಡ್ಲು ಶಾಂತಳ್ಳಿ, ಹಾನಗಲ್ಲು ಬೆಟ್ಟದಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಒಟ್ಟು 15.55ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಭೂಮಿಪೂಜೆ ನೆರವೇರಿಸಿದ್ದಾರೆ.
ಬಳಿಕ ಮಾತನಾಡಿದ ಶಾಸಕರು ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಸದ್ಬಬಳಕೆ ಮಾಡಿಕೊಳ್ಳಬೇಕು ಎಂದರು. ಜಿ.ಪಂ.ಸದಸ್ಯರಾದ ಲೋಕೇಶ್ವರಿ ಗೋಪಾಲ್ ಹಾಜರಿದ್ದರು.
ಹೆಬ್ಬಾಲೆ, ಕೂಡಿಗೆ ಕೂಡುಮಂಗಳೂರು ಹಾಗೂ ಕುಶಾಲನಗರ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು8 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಗುದ್ದಲಿ ಪೂಜೆ ನೆರೆವೇರಿಸಿದರು. ಜಿ.ಪಂ.ಸದಸ್ಯರಾದ ಮಂಜುಳಾ ಇತರರು ಇದ್ದರು.
Click this button or press Ctrl+G to toggle between Kannada and English