ಮಂಗಳೂರು : ದೇಶಾದ್ಯಂತ ಸಿಎಎ ಕಾನೂನಿನ ಬಗ್ಗೆ ಗಲಭೆ ನಡೆಸುವ ಮತ್ತು ದಂಗೆ ನಡೆಸುವವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇತ್ತೀಚೆಗೆ ಹೈದರಾಬಾದ್ ನಡೆದ ಪಶುವೈದ್ಯಯ ಅತ್ಯಾಚಾರ ಮತ್ತು ಹತ್ಯೆಯಂತಹ ದುರ್ಘಟನೆಗಳು ನಡೆಯದಂತೆ ಶಾಲೆಗಳಲ್ಲಿ ನೈತಿಕ ಶಿಕ್ಷಣ ಮತ್ತು ಹೆಣ್ಣುಮಕ್ಕಳಿಗೆ ಅತ್ಮ ರಕ್ಷಣೆಯ ತರಬೇತಿಗಳನ್ನು ನೀಡಬೇಕು.
ಆಂಧ್ರಪ್ರದೇಶದ ಶಾಲೆಗಳಲ್ಲಿ ಒಂದನೇ ತರಗತಿಯಿಂದ 6ನೇ ತರಗತಿ ವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು.
ಅಲ್ಲದೆ ಮುಂಬರುವ ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆಯ ನೆಪದಲ್ಲಿ ಕಾನೂನು ಮತ್ತು ವ್ಯವಸ್ಥೆಯನ್ನು ಕೈಗೆ ತೆಗೆದುಕೊಳ್ಳುವವರ ಮೇಲೆ ಮತ್ತು ಸಮಾಜದ ಸ್ವಾಸ್ತವವನ್ನು ಕೆಡಿಸುವವರ ಮೇಲೆ ಕಾನೂನು ಕ್ರಮ ಜರಗಿಸ ಬೇಕು ಎಂದು ಮನವಿಯನ್ನು ಇಂದು ಇಂದು ದಿನಾಂಕ 26 .12 .2019 ಗುರುವಾರ ಮಂಗಳೂರಿನ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಇವರಿಗೆ ನೀಡಲಾಯಿತು ಮತ್ತು ಮಂಗಳೂರು ನಗರದ ಪೊಲೀಸ್ ಆಯುಕ್ತರಿಗೆ ನೀಡಲಾಯಿತು ಮನವಿಯನ್ನು ನೀಡುವ ಸಂದರ್ಭದಲ್ಲಿ ಸಂದರ್ಭದಲ್ಲಿ ಧರ್ಮಾಭಿಮಾನಿಗಳಾದ ಶ್ರೀ ಶಶಿಧರ್ ಬಾಳಿಗಾ ಶ್ರೀ ಸುರೇಶ ಅತ್ತಾವರ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಚಂದ್ರ ಮೊಗೇರ ಮತ್ತು ಇತರ ಸಾಧಕರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English