ನವದೆಹಲಿ : 1999ರ ಕಾರ್ಗಿಲ್ ಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿದ ಮಿಗ್ 27 ಯುದ್ಧ ವಿಮಾನ ಇತಿಹಾಸ ಪುಟ ಸೇರಲು ಸಜ್ಜಾಗಿದೆ. ಕಳೆದ ಮೂರು ದಶಕಗಳಿಂದ ಭಾರತೀಯ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಈ ಯುದ್ಧವಿಮಾನ ಇಂದು ಕೊನೆಯ ಹಾರಾಟ ನಡೆಸಿತು.
ಭಾರತೀಯ ವಾಯು ಸೇನೆಯ ಬೆನ್ನೆಲುಬಾಗಿದ್ದ ಈ ಯುದ್ಧ ವಿಮಾನ ಕಡೆಯದಾಗಿ ಜೋಧ್ಪುರ್ ಏರ್ಬೇಸ್ನಲ್ಲಿ ಹಾರಾಟ ನಡೆಸಿತು. ದೇಶದ ಯುದ್ಧ ಮತ್ತು ಶಾಂತಿ ಸಮಯದಲ್ಲಿ ಅಪಾರ ಸೇವೆ ಸಲ್ಲಿಸಿರುವ ಈ ಯುದ್ಧವಿಮಾನ ಕಾರ್ಗಿಲ್ ಸಮಯದಲ್ಲಿ ಶತ್ರು ದೇಶದ ವಿರುದ್ಧ ಹೋರಾಟ ನಡೆಸುವಲ್ಲಿ ಪ್ರಮುಖವಾಗಿತ್ತು.
ಕಾರ್ಗಿಲ್ ಯುದ್ಧ ಮಾತ್ರವಲ್ಲದೇ ಆಪರೇಷನ್ ಪಾರಾಕ್ರಮದಲ್ಲಿಯೂ ವಿಮಾನ ಹಾರಾಟ ನಡೆಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಿಗ್ ಯುದ್ಧ ವಿಮಾನದಲ್ಲಿ ಅಪ್ಗ್ರೆಡೇಡ್ ವರ್ಷನ್ ಆದ ಮಿಗ್ 21, ಮಿಗ್ 29 ಬಂದ ಬಳಿಕ ಈ ಯುದ್ಧ ವಿಮಾನ ತೆರೆಮರೆಗೆ ಸರಿಯಿತು.
ವಿಶ್ವದ ಯಾವುದೇ ದೇಶದಲ್ಲಿ ಮಿಗ್-27 ಯುದ್ಧ ವಿಮಾನ ಬಳಕೆಯಲ್ಲಿಲ್ಲ. ಜೋಧ್ ಪುರದ ವಾಯು ಪಡೆ ನೆಲೆಯಲ್ಲಿ ಮಿಗ್ 27 ಯುದ್ಧ ವಿಮಾನ ಕೊನೆ ಹಾರಾಟ ನಡೆಸಿದ್ದು, ಈ ವಿಮಾನ ಇತಿಹಾಸದ ಪುಟ ಸೇರಲಿದೆ.
Click this button or press Ctrl+G to toggle between Kannada and English