ಮಂಗಳೂರು : ಬಿ.ಎಸ್.ಎನ್.ಎಲ್. ಮೊಬೈಲ್ ಗ್ರಾಹಕ ಕೇಂದ್ರ ಸ್ಥಳಾಂತರ

4:34 PM, Friday, December 27th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

moble-seve

ಮಂಗಳೂರು : ಹಲವು ವರ್ಷಗಳಿಂದ ಮಂಗಳೂರು ಆರ್.ಟಿ.ಓ. ಸರ್ಕಲ್ ಸಮೀಪ ಖಾಸಗೀ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿದ್ದ ಬಿ.ಎಸ್.ಎನ್.ಎಲ್. ಮೊಬೈಲ್ ಗ್ರಾಹಕರ ಸೇವಾ ಕೇಂದ್ರವನ್ನು ಸ್ಥಳಾಂತರಿಸಲಾಗಿದೆ.

ಇಲ್ಲಿ ತ್ವರಿತವಾಗಿ ಸೇವೆ ದೊರಕುತ್ತಿದ್ದುದರಿಂದ ಪ್ರತಿನಿತ್ಯ ಹೆಚ್ಚಿನ‌ ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಿದ್ದರು. ಜಿಲ್ಲೆಯಲ್ಲೇ ಅತ್ಯಧಿಕ ಗ್ರಾಹಕರು ಭೇಟಿ ನೀಡುತ್ತಿದ್ದ ಬಿ.ಎಸ್.ಎನ್.ಎಲ್. ಸೇವಾ ಕೇಂದ್ರವಾಗಿತ್ತು. ಇಲ್ಲಿನ ಅಧಿಕಾರಿ, ಸಿಬ್ಬಂದಿಗಳೂ ಉತ್ತಮ ಸೇವೆ ನೀಡುತ್ತಿದ್ದರು.

ಜನನಿಬಿಢ ಪ್ರದೇಶದಲ್ಲೇ ಈ ಕೇಂದ್ರ ಇದ್ದುದರಿಂದ‌ ಸಾರ್ವಜನಿಕರಿಗೂ ಇಲ್ಲಿಗೆ ಹೋಗಿ ಬರಲು ತುಂಬಾ ಅನುಕೂಲವಾಗಿತ್ತು.
‌ ಇದೀಗ ಈ‌ ಕೇಂದ್ರವನ್ನು ಇಲ್ಲಿಂದ ಸ್ವಲ್ಪ‌ ದೂರದಲ್ಲಿರುವ ಟೆಲಿಕಾಂ ಹೌಸ್ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English