ಸಿಎಂ ಕಾರ್ಯದರ್ಶಿ ವಾಹನ ಡಿಕ್ಕಿ : ಆಟೋ ಚಾಲಕನಿಗೆ ಗಾಯ

2:40 PM, Tuesday, December 31st, 2019
Share
1 Star2 Stars3 Stars4 Stars5 Stars
(5 rating, 1 votes)
Loading...

accident

ಬೆಂಗಳೂರು : ಸಿಎಂ ಯಡಿಯೂರಪ್ಪನವರ ಕಾರ್ಯದರ್ಶಿ ವಾಹನ ಅಪಘಾತಕ್ಕೀಡಾಗಿರುವ ಘಟನೆ ಇಲ್ಲಿನ ಯಶವಂತಪುರದ ಬಳಿ ನಡೆದಿದೆ.

ತಮ್ಮ ನಿವಾಸವಿರುವ ಡಾಲರ್ಸ್ ಕಾಲೋನಿಯಿಂದ ತುಮಕೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಸಿಎಂ ಕಾರ್ಯದರ್ಶಿ ಸೆಲ್ವಕುಮಾರ್ ಬಳಸುತ್ತಿದ್ದ Ka 01, G 6661 ನಂಬರ್ ಪ್ಲೇಟ್ ಹೊಂದಿದ್ದ ಇನ್ನೋವಾ ಕಾರು ಅಪಘಾತಕ್ಕೀಡಾಗಿದೆ. ಆದರೆ ಘಟನೆ ವೇಳೆ ಸೆಲ್ವಕುಮಾರ್ ಸಿಎಂ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಇದೆ.

ಯಶವಂತಪುರದ ಬಳಿ ಅತಿ ವೇಗವಾಗಿ ಬಂದ‌ ಇನ್ನೋವಾ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಕ್ಯಾಂಟರ್ ಹಾಗೂ ಆಟೋಗೆ ಗುದ್ದಿದ್ದು, ಆಟೋ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಕಾರಿನ ಎದುರುಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English