ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾದಿಂದ ನವೆಂಬರ್ 3 ರಂದು ಜನ ಜಾಗೃತಿ ಸಭೆ

12:53 PM, Friday, November 2nd, 2012
Share
1 Star2 Stars3 Stars4 Stars5 Stars
(5 rating, 1 votes)
Loading...

SIO Rally in Mangaloreಮಂಗಳೂರು: ನಿನ್ನೆ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ .ಐ.ಓ. ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ತೌಸೀಫ್ ಅಹಮ್ಮದ್ ರವರು ನವೆಂಬರ್ 3 ರಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾದಿಂದ ಮಂಗಳೂರಿನಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ವಿದ್ಯಾರ್ಥಿ ಸಮುದಾಯಗಳೊಂದಿಗೆ ನಗರದ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ವಿದ್ಯಾರ್ಥಿ ಜಾಥಾ ಹಾಗೂ ಜನ ಜಾಗೃತಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜು ಕ್ಯಾಂಪಸ್ ಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿರುವ ಗುಂಪುಗಾರಿಕೆ, ದ್ವೇಷ ಮನೋಭಾವ, ಕೋಮುವಾದ, ಅನೈತಿಕತೆ ಮೊದಲಾದವುಗಳನ್ನು ನಿವಾರಿಸಲು ಹೋರಾಡುವಂತೆ ವಿದ್ಯಾರ್ಥಿ ಸಮುದಾಯಕ್ಕೆ ಕರೆ ಕೊಡುವ ಸಲುವಾಗಿ ಈ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಲ್ಲಿ ಕೋಮುಭಾವನೆ ಹಾಗೂ ಗುಂಪು ಘರ್ಷಣೆಯಂತಹ ಪ್ರವೃತ್ತಿಗಳು ಹೆಚ್ಚಾಗುತ್ತಿದೆ. ಇದರಿಂದ ಮುಂದೆ ದೇಶಕ್ಕೆ ಅಪಾಯ ಬಂದೊದಗಬಹುದು ಆ ಕಾರಣದಿಂದ ಕ್ಯಾಂಪಸ್ ಗಳು ರಾಜಕೀಯ ಪಕ್ಷಗಳ ಅಧಿಕೃತ ಕಚೇರಿಗಳನ್ನು ತಡೆಯುವುದು, ಕ್ಯಾಂಪಸ್ ಶುಚೀಕರಣ, ವಿದ್ಯಾರ್ಥಿ ಬಾಂಧವ್ಯ, ರಚನಾತ್ಮಕ ಚಟುವಟಿಕೆಗಳಿಗೆ ಪ್ರೋತ್ಸಾಹ, ಸೃಜನಶೀಲ ವಿದ್ಯಾರ್ಥಿ ಸಮುದಾಯವನ್ನು ಸೃಷ್ಟಿಸುವ ದೃಷ್ಟಿಯಿಂದ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಈ ಜಾಥಾ ಹಾಗೂ ಸಭೆಯನ್ನು ನಡೆಸಲಾಗುತ್ತಿದೆ.

ಫಾ.ರೋನಿ ಪ್ರಭು ಈ ಸಭೆಯ ಉದ್ಘಾಟನೆಯನ್ನು ಮಾಡಲಿದ್ದು, ಎಸ್ .ಐ.ಓ. ರಾಷ್ಟ್ರೀಯ ಅಧ್ಯಕ್ಷ ಮಹಮ್ಮದ್ ಅಜರುದ್ದೀನ್, ಶಾಂತಿ ಪ್ರಕಾಶನ ವ್ಯವಸ್ಥಾಪಕ ಮಹಮ್ಮದ್ ಕುಂಞ,ಎಸ್.ಐ.ಓ ರಾಜ್ಯಾಧ್ಯಕ್ಷ ಅಶ್ಪಾಕ್ ಅಹಮದ್ ಶರೀಫ್, ಮಂಗಳೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯ ಹರೀಶ್ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಸ್.ಐ. ಒ. ಜಿಲ್ಲಾ ಸಂಚಾಲಕ ಅಬ್ದುಲ್ ಕಬೀರ್, ಮಂಗಳೂರು ಅಧ್ಯಕ್ಷ ಸರ್ಫರಾಜ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English