ಎಲ್​ಪಿಜಿ ಬಳಕೆದಾರರಿಗೆ ಹೊಸ ವರ್ಷದ ಆರಂಭದಲ್ಲೇ ದರ ಏರಿಕೆ

2:10 PM, Wednesday, January 1st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

LPG

ನವದೆಹಲಿ : ಜನವರಿ 1ರಿಂದಲೇ ಜಾರಿಗೆ ಬರುವಂತೆ ದೇಶಾದ್ಯಂತ ಸಬ್ಸಿಡಿ ರಹಿತ ಎಲ್ಪಿಜಿ ಅಥವಾ ಅಡುಗೆ ಅನಿಲ ದರ ಏರಿಕೆಯಾಗಿದ್ದು, ಒಂದೇ ತಿಂಗಳ ಅಂತರದಲ್ಲಿ ಐದನೇ ಬಾರಿಗೆ ಹೆಚ್ಚಳವಾಗುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಮುಂಬೈನಲ್ಲಿ ಪ್ರತಿ ಸಿಲಿಂಡರ್ಗೆ 19 ಮತ್ತು 19.5 ರೂ. ಏರಿಕೆ ಕಂಡಿದ್ದು, ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ಗೆ ದೆಹಲಿಯಲ್ಲಿ 714 ರೂ. ಮತ್ತು ಮುಂಬೈನಲ್ಲಿ 684.50 ರೂ. ಇರುವುದಾಗಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ತಿಳಿಸಿದೆ. ಆದರೆ, ಡಿಸೆಂಬರ್ ತಿಂಗಳಿನಲ್ಲಿ ದೆಹಲಿಯಲ್ಲಿ 695 ಮತ್ತು ಮುಂಬೈನಲ್ಲಿ 665 ರೂ. ಇತ್ತು.

ಕೋಲ್ಕತದಲ್ಲಿ 21.5 ರೂ ಏರಿಕೆ ಕಾಣುವ ಮೂಲಕ ಪ್ರತಿ ಸಿಲಿಂಡರ್ಗೆ 747 ರೂ. ಮತ್ತು ಚೆನ್ನೈನಲ್ಲಿ 20 ರೂ. ಹೆಚ್ಚಳವಾಗುವುದರೊಂದಿಗೆ 734 ರೂ. ಆಗಿದೆ.

ಸರಾಸರಿ ಅಂತಾರಾಷ್ಟ್ರೀಯ ಮಾನದಂಡದ ಎಲ್‌ಪಿಜಿ ಬೆಲೆಗಳಲ್ಲಿನ ಬದಲಾವಣೆ ಮತ್ತು ವಿದೇಶಿ ವಿನಿಮಯ ದರಗಳು ಸಬ್ಸಿಡಿಯ ಪ್ರಮಾಣವನ್ನು ನಿರ್ಧರಿಸುತ್ತವೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English