ಮಂಗಳೂರು: ಟೋಲ್ ನಲ್ಲಿ ಇನ್ನು ಸುಂಕ ಕೊಡಬೇಕಾಗಿಲ್ಲ, ನಳಿನ್ ಭರವಸೆ

5:34 PM, Thursday, January 2nd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

bjp Protestಮಂಗಳೂರು: ನಿಗದಿತ ಸಮಯದಲ್ಲಿ ಪಂಪ್ವೆಲ್ ಫ್ಲೈ ಓವರ್ ಕಾಮಗಾರಿ ಪೂರ್ತಿಯಾಗದ ಹಿನ್ನೆಲೆಯಲ್ಲಿ ಸಂಸದ ನಳಿನ್ ಸೂಚನೆಯಂತೆ ತಲಪಾಡಿ ಟೋಲ್ ಗೇಟ್ ಬಂದ್ ಮಾಡಿ ಬಿಜೆಪಿ ಕಾರ್ಯಕರ್ತರು ಬಿಸಿ ಮುಟ್ಟಿಸಿದ್ದಾರೆ. ಕೇರಳ ಗಡಿಭಾಗದ ತಲಪಾಡಿ ಟೋಲ್ ಗೇಟ್ ನಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಶಾಸಕ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಸಹಿತ ಪಕ್ಷದ ಮುಖಂಡರು ನವಯುಗ ಮತ್ತು ಟೋಲ್ ಗೇಟ್ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ್ರು. ಬಳಿಕ ಶಾಸಕರು ನೀವಾಗಿಯೇ ಬಂದ್ ಮಾಡಿದ್ರೆ ಉತ್ತಮ, ಇಲ್ಲವಾದರೆ ನಾವೇ ಬಂದ್ ಮಾಡ್ತೇವೆ ಅಂತ ಎಚ್ಚರಿಕೆ ನೀಡಿದ್ರು.

ಸಂಸದ ನಳಿನ್ ಕೊಟ್ಟಿದ್ದ ಸೂಚನೆಯಂತೆ ಇಂದು ಪಂಪ್ವೆಲ್ ಫ್ಲೈಓವರ್ ಉದ್ಘಾಟನೆಯಾಗಬೇಕಿತ್ತು. ಆದ್ರೆ ನವಯುಗ ಸಂಸ್ಥೆ ಬೇಜವಾಬ್ದಾರಿಯಿಂದ ಕಾಮಗಾರಿ ಮುಗಿದಿಲ್ಲ. ಹೀಗಾಗಿ ನಿನ್ನೆ ಡಿಸಿ ಕಚೇರಿಯಲ್ಲಿ ಸಭೆ ನಡೆಸಿದ ವೇಳೆ ಸಂಸದರು ಟೋಲ್ ಗೇಟ್ ಬಂದ್ ಗೆ ಸೂಚನೆ ನೀಡಿದ್ರು. ಸುಮಾರು 2010ರಿಂದ ಪಂಪ್ ವೆಲ್ ಫ್ಲೈ ಓವರ್ ಕಾಮಗಾರಿ ನಡೆಯುತ್ತಿದೆ. ಅಷ್ಟೇ ಅಲ್ಲ ಸಂಸದ ನಳಿನ್ ‌ಕುಮಾರ್ ಕಟೀಲ್ ಮುಜುಗರಕ್ಕೂ ಈ ಫ್ಲೈ ಓವರ್ ಕಾರಣವಾಗಿತ್ತು. ಇದೀಗ ಇಂದು ಸಂಜೆ 6 ಗಂಟೆಯವರೆಗೆ ತಲಪಾಡಿ ಟೋಲ್ ಗೇಟ್ ಬಂದ್ ಆಗಲಿದೆ. ಬಿಜೆಪಿ ಕಾರ್ಯಕರ್ತರು ಅಡ್ಡಿ ಮಾಡಿದ ಹಿನ್ನೆಲೆ ಟೋಲ್ ಸಂಗ್ರಹವನ್ನ ಸ್ಥಗಿತ ಕೂಡ ಮಾಡಿದ್ದಾರೆ. ಹಾಗಾಗಿ ನವಯುಗ ಸಂಸ್ಥೆಗೆ ಪ್ರತಿಭಟನೆ ಬಗ್ಗೆ ಟೋಲ್ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ.

bjp Protestಸಂಜೆ 6 ಗಂಟೆವರೆಗೆ ಟೋಲ್ ಸ್ಥಗಿತಗೊಳಿಸಲು ಬಿಜೆಪಿ ಸೂಚನೆ ನೀಡಿದೆ. ಇಲ್ಲದೇ ಇದ್ದಲ್ಲಿ ಬಲವಂತವಾಗಿ ಬಂದ್ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಟೋಲ್ ಗೇಟ್ ಸಂಜೆ 6ರವರೆಗೆ ಬಂದ್ ಆಗಲಿದೆ. ಇನ್ನು ಜ.31ರ ಒಳಗೆ ಪಂಪ್ ವೆಲ್ ಫ್ಲೈ ಓವರ್ ಮುಗಿಯದೇ ಇದ್ದರೆ ಟೋಲ್ ಸಂಪೂರ್ಣ ಬಂದ್ ‌ಮಾಡುವ ಎಚ್ಚರಿಕೆಯನ್ನು ಕೂಡ ಬಿಜೆಪಿ ಶಾಸಕರು ನೀಡಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲೂ ನಳಿನ್ ಕುಮಾರ ಕಟೀಲು ನೀವು ಟೋಲ್ ಗಳಲ್ಲಿ ಸುಂಕ ಕೊಡಬೇಡಿ ನಾನೆ ಜವಾಬ್ದಾರಿ ಅಂದಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English