ವಿಜ್ಞಾನ ಮತ್ತು ತಂತ್ರಜ್ಞಾನ ಭಾರತ ದೇಶದ ಶಕ್ತಿ : ಪ್ರಧಾನಿ ಮೋದಿ

12:31 PM, Friday, January 3rd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

modi

ಬೆಂಗಳೂರು : ಭಾರತದ ಅಭಿವೃದ್ಧಿ ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ನೇರವಾಗಿ ಅವಲಂಬಿಸಿದೆ. ಸ್ವಚ್ಛ ಭಾರತದಿಂದ ಆಯುಷ್ಮಾನ್ ಭಾರತದವರೆಗೂ ವಿಜ್ಞಾನದ ಪಾತ್ರ ಬಹುಮುಖ್ಯವಾದದ್ದು. ಇದೇ ಕಾರಣಕ್ಕೆ ದೇಶದ ಪ್ರತಿಯೊಬ್ಬ ಸಾಮಾನ್ಯ ನಾಗರಿಕನಿಗೂ ತಂತ್ರಜ್ಞಾನ ಸುಲಭ ಹಾಗೂ ಅಗ್ಗವಾಗಿ ದೊರಕುವಂತೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಜನರಿಗೆ ಹೊಸ ವರ್ಷದ ಶುಭಾಶಯ ತಿಳಿಸಿದರು. ಹೊಸ ವರ್ಷದಲ್ಲಿ ನನ್ನ ಮೊದಲ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯುತ್ತಿರೋದು ಖುಷಿ ತಂದಿದೆ. ಬೆಂಗಳೂರು ಮೊದಲು ಗಾರ್ಡನ್ ಸಿಟಿ ಆಗಿತ್ತು. ಆದರೆ ಈಗ ಸ್ಟಾರ್ಟ್ಅಪ್ಗಳ ನಗರವಾಗಿ ಬದಲಾಗಿದೆ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನ ಭಾರತ ದೇಶದ ಶಕ್ತಿ. ಭಾರತದ ಅಭಿವೃದ್ದಿ ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ದೇಶಕ್ಕಾಗಿ ಏನಾದರು ಮಾಡಬೇಕೆಂದು ವಿಜ್ಞಾನಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊಸ ಆವಿಷ್ಕಾರಕ್ಕೆ ಪೇಟೆಂಟ್ ದೊರಕುತ್ತದೆ. ಪೇಟೆಂಟ್ ಸಿಕ್ಕರೆ ನಾವು ಅದನ್ನು ಉತ್ಪಾದಿಸಬಹುದು. ಉತ್ಪಾದನೆ ಮಾಡಿದರೆ ದೇಶದ ಜನತೆಗೆ ನೆರವಾಗುತ್ತದೆ. ಹೀಗಾಗಿ ಸ್ವಾಮ್ಯ, ಉತ್ಪಾದನೆ, ಏಳಿಗೆ (ಪೇಟೆಂಟ್, ಪ್ರಡ್ಯೂಸ್, ಪ್ರಾಸ್ಪರಸ್) ಈ ಮೂರು ನಮ್ಮ ಮಂತ್ರವಾಗಿರಬೇಕು ಎಂದು ಮೋದಿ ಹೇಳಿದ್ದಾರೆ.

ಜನರಿಗೆ ಕಡಿಮೆ ವೆಚ್ಚದಲ್ಲಿ ಔಷಧಿ ಪೂರೈಕೆ ಮಾಡುವಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಆಗಬೇಕು. ನವ ಭಾರತವನ್ನ ವಿಜ್ಞಾನದ ಮೂಲಕ ಜೋಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಹೊಸ ಆವಿಷ್ಕಾರ ಕ್ಷೇತ್ರದಲ್ಲಿ ದೇಶ ಗಣನೀಯ ಸಾಧನೆ ಮಾಡಿದೆ. ದೇಶದ ಆರು ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ನೆರವು ನೀಡಲಾಗಿದೆ. ದೇಶದ ಬಡ ಕುಟುಂಬಗಳಿಗೆ ಶೌಚಾಲಯ, ವಿದ್ಯುತ್ ಸಂಪರ್ಕ ಕಲ್ಪಿಸಲು ತಂತ್ರಜ್ಞಾನದ ನೆರವು ಅಪಾರವಾಗಿದೆ. ತಂತ್ರಜ್ಞಾನದ ನೆರವಿನಿಂದ ಕಾಲಮಿತಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲು ಅನುಕೂಲವಾಗಿದೆ. ಡಿಜಿಟಲ್ ಟೆಕ್ನಾಲಜಿ, ಮೊಬೈಲ್ ಬ್ಯಾಂಕಿಂಗ್ ವ್ಯಾಪಕವಾಗಿ ವಿಸ್ತಾರವಾಗಿದೆ. ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ತಂತ್ರಜ್ಞಾನ ಹೆಚ್ಚಿನ ಬಳಕೆಯಾಗಬೇಕಿದೆ ಎಂದು ತಿಳಿಸಿದರು.

ಐದು ವರ್ಷಗಳಲ್ಲಿ ಭಾರತ ವಿಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ. ಸ್ವಚ್ಛ ಭಾರತ ಅಭಿಯಾನದಿಂದ‌ ಎಲ್ಲ ಯೋಜನೆಗಳ ಅನುಷ್ಠಾನವಾಗಿದೆ. ಯಾವುದೇ ಯೋಜನೆ ಪರಿಣಾಮಕಾರಿಯಾಗಿ ಆಗಬೇಕಾದರೆ ತಂತ್ರಜ್ಞಾನ ಮುಖ್ಯ.‌ ನಿನ್ನೆಯು ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಮಾಡಿದೆ. ಇದೆಲ್ಲ ಹೇಗೆ ಜನರನ್ನು ತಲುಪಿದೆ ಅಂದರೆ ಎಲ್ಲದಕ್ಕೂ ಕಾರಣ ಟೆಕ್ನಾಲಜಿ ಉಪಯೋಗದಿಂದ ಸಾಧ್ಯವಾಗಿದೆ ಎಂದರು.

ಇನ್ನು ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿರ್ಬಂಧ‌ ಮಾಡಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣೆಗೆ‌‌ ಹೊಸ ತಂತ್ರಜ್ಞಾನ ಅವಶ್ಯಕತೆ ಇದೆ. ಇದರಿಂದ ಪರಿಸರವೂ ಉಳಿಯುತ್ತದೆ, ಮಣ್ಣಿನ ಆರೋಗ್ಯವೂ ಚೆನ್ನಾಗಿರುತ್ತದೆ.. 2022ರ ಒಳಗಾಗಿ ನಾವು ಕಚ್ಚಾತೈಲ‌ ಆಮದು ಶೇ10 ರಷ್ಟು ಕಡಿಮೆ‌ ಮಾಡಬೇಕಿದೆ ಎಂದರು.

ಇನ್ನು ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿರ್ಬಂಧ‌ ಮಾಡಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣೆಗೆ‌‌ ಹೊಸ ತಂತ್ರಜ್ಞಾನ ಅವಶ್ಯಕತೆ ಇದೆ. ಇದರಿಂದ ಪರಿಸರವೂ ಉಳಿಯುತ್ತದೆ, ಮಣ್ಣಿನ ಆರೋಗ್ಯವೂ ಚೆನ್ನಾಗಿರುತ್ತದೆ.. 2022ರ ಒಳಗಾಗಿ ನಾವು ಕಚ್ಚಾತೈಲ‌ ಆಮದು ಶೇ10 ರಷ್ಟು ಕಡಿಮೆ‌ ಮಾಡಬೇಕಿದೆ ಎಂದರು.

ಮುಖ್ಯವಾಗಿ ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಬೇಕಿದೆ. ಇದರಿಂದ 5 ಟ್ರಿಲಿಯನ್‌ ಆರ್ಥಿಕತೆ ತಲುಪಬಹುದು.‌ ಮೇಕ್ ಇನ್‌ಇಂಡಿಯಾ ಮೆಡಿಕಲ್‌ ಕ್ಷೇತ್ರದಲ್ಲಿ ಆಗಬೇಕಿದೆ.‌ ಹೆಲ್ತ್ ಈಸ್ ರಿಯಲ್‌ ವೆಲ್ತ್ ಅಂತ ಗಾಂಧೀಜಿ ಹೇಳಿದ್ದರು.‌ ಬಯೋ‌ ಮೆಡಿಕಲ್ ಸಂಶೋಧನೆ ಕಡೆ‌ ಗಮನ ಹರಿಸಬೇಕಿದೆ.. 2024ರ‌ ಒಳಗಾಗಿ ಟಿಬಿ ವ್ಯಾಕ್ಸಿನೇಷನ್‌ ಪೂರೈಕೆಯಲ್ಲಿ ಭಾರತ ಜಗತ್ತಿಗೆ ಲೀಡರ್ ಆಗಲಿದೆ ಎಂದು ತಿಳಿಸಿದರು.

ಡಿಜಿಟಲ್ ಟೆಕ್ನಾಲಜಿಯಿಂದ ಮಧ್ಯವರ್ತಿ ಇಲ್ಲದೇ ವಸ್ತುಗಳನ್ನು ಮಾರಾಟ‌ ಮಾಡಬಹುದು. ಆನ್ ಲೈನ್ ಮೂಲಕ ಎಲ್ಲ ವ್ಯವಹಾರ ಸಾಧ್ಯವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಈ ದಶಕದಲ್ಲಿ ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಬೇಕು. ಕೃಷಿಯಲ್ಲೂ ತಂತ್ರಜ್ಞಾನ ಅಳವಡಿಕೆ ಮಾಡಲಾಗುತ್ತದೆ. ಇದಕ್ಕಾಗಿ ‘ಜಲ್‌ ಜೀವನ್ ಮಿಷನ್’ ಆರಂಭ ಮಾಡಿದ್ದೇವೆ. ನೀರನ್ನು ಮರು ಬಳಕೆ ಮಾಡಲು ತಂತ್ರಜ್ಞಾನ ಅವಶ್ಯ. ಮನೆಯಿಂದ ಬಳಕೆಯಾಗಿ ವ್ಯರ್ಥವಾಗುವ ನೀರಿನ‌ ಸದ್ಭಳಕೆ ಹೇಗೆ ಮಾಡಿಕೊಳ್ಳುವುದು, ಕೃಷಿಗೆ ಆ ನೀರನ್ನು ಬಳಕೆ ಮಾಡಿಕೊಳ್ಳಬೇಕು. ಆಗ ನೀರು ಉಳಿಸಿದಂತಾಗುತ್ತದೆ ಅಂತ ಸಲಹೆ ನೀಡಿದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English