ಅಡಿಕೆ ಕೊಯ್ಲು ಮತ್ತು ಬೋರ್ಡೊ ದ್ರಾವಣ ಸಿಂಪಡಣೆಗೆ ಹೈಟೆಕ್‌ ದೋಂಟಿ : ಧರ್ಮಸ್ಥಳದಲ್ಲಿ ಪ್ರಾತ್ಯಕ್ಷಿಕೆ

5:07 PM, Friday, January 3rd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

dharmastala

ಉಜಿರೆ : ಅಡಿಕೆ ಕೊಯ್ಲು ಮತ್ತು ಬೋರ್ಡೊ ದ್ರಾವಣ ಸಿಂಪಡಣೆಗೆ ಅಮೇರಿಕಾದಲ್ಲಿರುವ ಹಾಸನ ಮೂಲದ ಎಂಜಿನಿಯರ್ ಬಾಲ ಸುಬ್ರಹ್ಮಣ್ಯ ಸುಧಾರಿತ ಹೈಟೆಕ್‌ ದೋಂಟಿ ಸಂಶೋಧನೆ ಮಾಡಿದ್ದು ಅವರು ಶುಕ್ರವಾರ ಧರ್ಮಸ್ಥಳದಲ್ಲಿರುವ ಹರ್ಪಾಡಿ ತೋಟದಲ್ಲಿ ಪ್ರಾತ್ಯಕ್ಷಿಕೆಯೊಂದಿಗೆ ಸವಿವರ ಮಾಹಿತಿ ನೀಡಿದರು.

ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಈ ವರೆಗೆ ಲಭ್ಯ ಇರುವ ಕೊಯ್ಲು ದೋಂಟಿಗಳಿಂದ ಇದು ವಿಭಿನ್ನವಾಗಿದ್ದು, ಯಾವುದೇ ಇಂಧನ ಅಥವಾ ವಿದ್ಯುತ್ ಬಳಸದೆ ಸುಲಭದಲ್ಲಿಉಪಯೋಗಿಸಬಹುದು.

ಕ್ಯಾಂಪ್ಕೋದ ಅಡಿಕೆ ಸಂಶೋಧನಾ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ದೋಂಟಿ ಬಳಕೆಗೆ ಸೂಕ್ತ ಪ್ರೋತ್ಸಾಹ ನೀಡಲು ಪ್ರಯತ್ನಿಸಲಾಗುವುದು. ರೈತರಗೆಇದು ವರದಾನವಾಗಿದೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತ ಪಡಿಸಿ ಅಭಿನಂದಿಸಿದರು.

dharmastala

ದೋಂಟಿ ಸಂಶೋಧಕಹಾಗೂ ಎಂಜಿನಿಯರ್ ಬಾಲಸುಬ್ರಹ್ಮಣ್ಯ ಮಾತನಾಡಿ, ಮಲೆನಾಡು ಪ್ರದೇಶದ ತೋಟಗಳಲ್ಲಿ ಈಗಾಗಲೆ ಇಪ್ಪತ್ತಕ್ಕೂ ಹೆಚ್ಚು ಇಂತಹ ದೋಂಟಿಗಳು ಬಳಕೆಯಲ್ಲಿವೆ. ಇದರಿಂದಾಗಿ ಕೂಲಿ ಕಾರ್ಮಿಕರ ಸಮಸ್ಯೆ ನಿವಾರಣೆಯಾಗುವುದಲ್ಲದೆ ತಿಂಗಳಿಗೆ 7೦,೦೦೦ರೂ. ಉಳಿತಾಯವಾಗುತ್ತದೆ ಎಂದು ಹೇಳಿದರು.

ಪ್ರಸಕ್ತದೋಂಟಿಯ ಬೆಲೆ 8೦,೦೦೦ರೂ.ಆಗಿದ್ದು ಮುಂದೆರೈತರಿಗೆಕೈಗೆಟಕುವ ಮಿತದರದಲ್ಲಿ ಸಾಧಾರಣ ಹತ್ತು ಸಾವಿರರೂ.ಗೆದೊರಕುವಂತೆ ಮಾಡಲಾಗುವುದುಎಂದು ಬಾಲಸುಬ್ರಹ್ಮಣ್ಯ ಭರವಸೆ ನೀಡಿದರು.

ದೋಂಟಿಯ ವಿಶೇಷತೆಗಳು:
ಅಡಿಕೆ ಮರ ಏರದೆ ಕೊಯ್ಲು ಹಾಗೂ ಔಷಧಿ ಸಿಂಪಡಣೆ ಮಾಡಬಹುದು.
6೦ ರಿಂದ80 ಅಡಿ ಎತ್ತರದ ದೋಂಟಿ ಅಗತ್ಯಕ್ಕೆ ಬೇಕಾದಷ್ಟು ಎತ್ತರಿಸಿ ಲಾಕ್ ಮಾಡುವ ವ್ಯವಸ್ಥೆ.
ನಿಂತಲ್ಲೆ 360 ಡಿಗ್ರಿ ಸುತ್ತಮುತ್ತ ಹತ್ತು ಮರಗಳಿಗೆ ಔಷಧಿ ಸಿಂಡಣೆ ಸಾಧ್ಯ.
ಫೈಬರ್‌ ತಂತ್ರಜ್ಞಾನ ಬಳಕೆ. 20 ವರ್ಷ ಬಾಳಿಕೆ.

dharmastala

ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಮತ್ತುಕೃಷಿ ವಿಭಾಗದಮುಖ್ಯಸ್ಥ ಬಿ. ಬಾಲಕೃಷ್ಣ ಪೂಜಾರಿ ಉಪಸ್ಥಿತರಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English