ಬೆಂಗಳೂರು : ಕರ್ನಾಟಕದ ಮಾಜಿ ರಾಜ್ಯಪಾಲ ತ್ರಿಲೋಕ ನಾಥ ಚತುರ್ವೇದಿ(90) ನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಟಿ. ಎನ್ ಚತುರ್ವೇದಿ ಭಾನುವಾರ ರಾತ್ರಿ ಉತ್ತರಪ್ರದೇಶದ ನೋಯ್ಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ ಎನ್ನುತ್ತಿವೆ ವೈದ್ಯಕೀಯ ಮೂಲಗಳು.
ನಿವೃತ್ತ ಐಎಎಸ್ ಆಧಿಕಾರಿಯಾಗಿದ್ದ ತ್ರಿಲೋಕ ನಾಥ ಚತುರ್ವೇದಿ 1991ರಲ್ಲಿ ಭಾರತದ ಎರಡನೇ ಅತಿ ದೊಡ್ಡ ನಾಗರಿಕ ಪ್ರಶಸ್ತಿ ಪದ್ಮ ವಿಭೂಷಣ ಗೌರವಕ್ಕೂ ಪಾತ್ರರಾಗಿದ್ದರು. ಅಲ್ಲದೇ ಆಗಸ್ಟ್ 2002-2007ವರೆಗೂ ರಾಜ್ಯಪಾಲರಾಗಿದ್ದರು.
ಜನವರಿ 18, 1929ರಂದು ಜನಿಸಿದ ಟಿ.ಎನ್ ಚತುರ್ವೇದಿ ಭಾರತದ ಮಹಾಲೇಖಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. 2017ರಲ್ಲಿ ಭಾರತದ ರಾಷ್ಟ್ರಪತಿ ಹುದ್ದೆಗೆ ಚತುರ್ವೇದಿ ಹೆಸರು ಕೇಳಿ ಬಂದಿತ್ತು.
Click this button or press Ctrl+G to toggle between Kannada and English