ಮೈಸೂರು : ಪೌರತ್ವ ತಿದ್ದುಪಡಿ ಕಾಯ್ದೆ ಬಂದಾಗಿನಿಂದಲೂ ಬಿಜೆಪಿಯವರು ಅನೇಕ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತ ಬರುತ್ತಿದ್ದಾರೆ ಎಂದು ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.
ಅವರಿಂದು ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಬಳ್ಳಾರಿಯ ಸೋಮಶೇಖರ್ ರೆಡ್ಡಿಯವರು ನಾವು ಹಿಂದೂಗಳು 70% ಇದ್ದೇವೆ. ಅಲ್ಪಸಂಖ್ಯಾರು 30% ಮಾತ್ರ ಇದ್ದೀರಿ. ನಾವು ಕತ್ತಿ ಹಿಡಿದರೆ ನಿಮ್ಮ ಕಥೆ ಮುಗಿತ್ತದೆ ಎಂಬ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪೌರತ್ವ ತಿದ್ದುಪಡಿಯನ್ನು ಬೆಂಬಲಿಸಲು ಬಿಜೆಪಿಯವರು ಮಿಸ್ ಕಾಲ್ಡ್ ನಂಬರ್ ಬಳಸಿಕೊಂಡು ಜನರಿಗೆ ಅನೇಕ ಆಮಿಶಗಳನ್ನು ನೀಡುತ್ತಿದ್ದಾರೆ. ನಿನ್ನೆ ರಾತ್ರಿ ಜೆಎನ್ ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ನ ವಕ್ತಾರ ಲಕ್ಷ್ಮಣ್ ಈ ಟೋಲ್ ಫ್ರೀ ನಂಬರ್ ಗಳನ್ನು ಪ್ರಮೋಟ್ ಮಾಡಲು ಇಪ್ಪತ್ತಕ್ಕೂ ಹೆಚ್ಚು ಫೇಕ್ ಅಕೌಂಟ್ ಗಳನ್ನು ಮಾಡಿಕೊಂಡಿದ್ದಾರೆ. ಉದಾಹರಣೆಗೆ ಹಿಂದಿಯ ನಟಿ ಆಲಿಯಾ ಭಟ್ ಅವರ ಫೇಕ್ ಅಕೌಂಟ್ ಮಾಡಿಸಿ ಈ ನಂಬರ್ ಗೆ ನೀವು ಕಾಲ್ ಮಾಡಿದರೆ ನಾನು ನಿಮ್ಮಗೆ ಭೇಟಿಗೆ ಸಿಗುತ್ತೇನೆ ಎಂದು ಹಾಗೂ ನೇಟ್ ಪ್ಲಿಕ್ಸ್ ಅನ್ನು ಆರು ತಿಂಗಳ ಕಾಲ ಉಚಿತವಾಗಿ ಪಡೆಯಲು ಈ ನಂಬರ್ ಗೆ ಮಿಸ್ಡ್ ಕಾಲ್ ನೀಡಿ ಎಂದು ಸಾಮಾಜಿಕ ತಾಣಗಳಲ್ಲಿ ಹೇಳುವ ಮೂಲಕ ಜನರ ದಿಕ್ಕನ್ನು ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಾವು ಮುಂದಿನ ದಿನಗಳಲ್ಲಿ ಎನ್ ಆರ್ ಸಿ ,ಸಿಎಎ,ಇಂದ ಜನರಿಗೆ ಯಾವ ರೀತಿ ಸಮಸ್ಯೆ ಆಗುತ್ತದೆ ಎಂಬ ಮಾಹಿತಿ ಇರುವ ಭಿತ್ತಿ ಪತ್ರಗಳನ್ನು ಜನರಿಗೆ ತಲುಪಿಸುತ್ತೇವೆ ಎಂದು ತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳ ಮಾನಸ, ನಗರಾಧ್ಯಕ್ಷ ಆರ್ .ಮಾರ್ತಿ, ಜಿಲ್ಲಾಧ್ಯಕ್ಷ ಬಿ .ಜೆ ವಿಜಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English