ಮಂಗಳೂರು : ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಅಪರಾಧ ಪ್ರಕರಣಗಳು ಹೆಚ್ಚು ನಡೆಯುತ್ತದೆ. ಮುಂಚೆ ಇಷ್ಟೊಂದು ಅಪರಾಧ ಪ್ರಕರಣಗಳು ನಡೆಯುತ್ತಿರಲಿಲ್ಲ. ಈ ಅಪರಾಧ ಪ್ರಕರಣಗಳನ್ನ ತಡೆಹಿಡಿಯಲು ಇದೀಗ ದೇಶದಲ್ಲಿ ಅನೇಕ ಕಾನೂನುಗಳಿವೆ. ನಮ್ಮನ್ನು ನಾವು ಶಿಸ್ತಿಗೆ ಒಳಪಡಿಸುವುದಕ್ಕೆ ಒಂದು ಕಾನೂನು ಅದನ್ನು ಜಾರಿಗೆ ತರಲು ಇನ್ನೊಂದು ಕಾನೂನು. ಅದನ್ನ ಸರಿಪಡಿಸಲು ಇನ್ನೊಂದು ಆಯೋಗ. ಒಟ್ಟಿನಲ್ಲಿ ಏನಾಗುತ್ತಿದೆಯೆಂದರೆ ಮಾನವೀಯ ಮೌಲ್ಯಗಳ ಅಧಪತನವಾಗುತ್ತಿದೆ. ಮೌಲ್ಯಗಳೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಸ ಕಡ್ಲೂರು ಸತ್ಯನಾರಾಯಣಾಚಾರ್ಯ ಖೇದ ವ್ಯಕ್ತ ಪಡಿಸಿದರು.
ಅವರು ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಸಾರಥ್ಯದಲ್ಲಿ ಹಾಗೂ ದ.ಕ.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ಮಂಗಳೂರು ವಿಶ್ವ ವಿಧ್ಯಾನಿಲಯ, ಮಾನವ ಹಕ್ಕುಗಳ ಸಂಘ, ಮಾಧ್ಯಮ ವೇದಿಕೆ, ಮಾನವಿಕ ಸಂಘ, ಮತ್ತು ಎನ್.ಎಸ್.ಎಸ್., ಇವುಗಳ ಸಂಯುಕ್ತಾಶ್ರಯದಲ್ಲಿ ಹದಿಹರೆಯ, ಮಾದಕ ವ್ಯಸನ ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಗ್ಸ್ ಗಾಂಜ ಮಾಫಿಯಗಳು ತಮ್ಮ ಮಾರುಕಟ್ಟೆಗೋಸ್ಕರ ಮುಗ್ಧ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಮಕ್ಕಳೂ, ಮತ್ತವರ ಹೆತ್ತವರೂ ಮಾನಸಿಕ ನೋವು ಅನುಭವಿಸುವಂತಾಗುತ್ತಿದೆ. ಆದುದರಿಂದ ತಾವು ತಮ್ಮ ಸಹಪಾಠಿಗಳೊಂದಿಗೆ ಯಾವ ರೀತಿ ಇರಬೇಕು ಯಾರ ಸ್ನೇಹದಿಂದಿರಬೇಕು ಎಂದು ಯೋಚಿಸಿ ಮುನ್ನಡೆಯಬೇಕಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನದ ಬಳಕೆ ಮತ್ತು ಮಾದಕ ವ್ಯಸನದ ಬಗ್ಗೆ ಅರಿವು ಮೂಡಿಸುವ ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಕಾರ್ಯ ಸ್ತುತ್ಯರ್ಹ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ ಉದಯಕುಮಾರ್ ಎಂ.ಎ ಮಾತನಾಡಿ ದೇವರು ನಿಮಗೆ ವರವನ್ನು ಕೊಡುತ್ತಾನೋ ಇಲ್ಲವೊ ಗೊತ್ತಿಲ್ಲ . ಆದರೆ ಯಾರು ಜ್ಞಾನವನ್ನು ಪಡೆಯುತ್ತಾನೋ ಅವನು ಭೂಮಿ ಮೇಲೆ ಸ್ವರ್ಗವನ್ನು ಸೃಷ್ಟಿಸ ಬಲ್ಲನು.. ಈ ಕಾಲೇಜಿನಲ್ಲಿ ಓದಿದವರು ಮುಖ್ಯಮಂತ್ರಿಗಳಾಗಿದ್ದಾರೆ, ರಿಸರ್ವ ಬ್ಯಾಂಕ್ ಗವರ್ನರಾಗಿದ್ದಾರೆ, ವಿಜ್ಞಾನಿಗಳಾಗಿದ್ದಾರೆ, ಭಾರತ ಸರಕಾರದ ಲೋಕಸಭೆಯ ಅಧ್ಯಕ್ಷರಾಗಿದ್ದಾರೆ, ಸಮಾಜ ಸೇವಕರಾಗಿದ್ದಾರೆ ಇದೆಲ್ಲ ಸಾಧ್ಯವಾಗಿದ್ದು ಇಲ್ಲಿ ಸಿಕ್ಕಿರುವ ವಿದ್ಯೆಯಿಂದ. ಹಾಗಾಗಿ ಜ್ಞಾನ ಸಂಪಾದನೆಯೆ ನಿಮ್ಮ ಗುರಿಯಾಗಿರಲಿ, ಈ ಸಂದರ್ಭದಲ್ಲಿ ಯಾವುದೇ ವ್ಯಸನಕ್ಕೆ ದಾಸರಾಗಬೇಡಿ ಎಂದು ಹೇಳಿದರು.
ಹಿರಿಯ ನ್ಯಾಯವಾದಿ ಉದಯಾನಂದ ಎ. ರವರು ಮಕ್ಕಳೊಂದಿಗೆ ಸಂವಾದ ನಡೆಸಿದರು. ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಜಿ. ಗಂಗಾಧರ್, ಮತ್ತು NSCDF ಅಧ್ಯಕ್ಷ ಗಂಗಾಧರ್ ಗಾಂಧಿ, ಕಾಲೇಜಿನ ಪ್ರಾಧ್ಯಾಪಕರುಗಳಾದ ಡಾ| ಲತಾ ಎ.ಪಂಡಿತ್, ಡಾ ಶಾನಿ ಕೆ.ಆರ್, ಡಾ. ಕುಮಾರಸ್ವಾಮಿ, ಡಾ. ಗಾಯತ್ರಿ ಎನ್., ಡಾ. ಸುರೇಶ್ ರವರು ಉಪಸ್ಥಿತರಿದ್ದರು. ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಸ್ವಾಗತಿಸಿ ಪಾಸ್ತಾವನೆಗೈದರು. ಮಲ್ಲಿಕಾ ಶೆಟ್ಟಿ ವಂದಿಸಿದರು.
Click this button or press Ctrl+G to toggle between Kannada and English