ಕಾಂಗ್ರೆಸ್ಸಿನ ಸ್ವಾ. ಸಾವರ್ಕರ್ ದ್ವೇಷವು ಇಡೀ ಕ್ರಾಂತಿಕಾರಿ ಚಳುವಳಿಯ ದ್ವೇಷವಾಗಿದೆ !

11:41 AM, Tuesday, January 7th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

veera-savarkar

ಮಂಗಳೂರು : ಭೋಪಾಲದಲ್ಲಿ ಕಾಂಗ್ರೆಸ್ಸಿನ ಸೇವಾದಲದ ತರಬೇತಿ ಶಿಬಿರದಲ್ಲಿ ‘ವೀರ ಸಾವರ್ಕರ್ ರ-ಕಿತನೆ ‘ವೀರ’ ?’ (ವೀರ ಸಾವರ್ಕರ್ ಎಷ್ಟು ವೀರರು?) ಹೆಸರಿನಲ್ಲಿ ವಿತರಿಸಿದ್ದ ಪುಸ್ತಕದಲ್ಲಿ ಅತ್ಯಂತ ತುಚ್ಛ, ಸ್ವಾ. ಸಾವರ್ಕರ್ ದ್ವೇಷ ಹಾಗೂ ಕಟ್ಟುಕಥೆಗಳನ್ನು ಬರೆಯಲಾಗಿದೆ.

ಇದರಿಂದ ಕಾಂಗ್ರೆಸ್‌ನವರು ಸ್ವಾತಂತ್ರ್ಯವೀರರನ್ನು ಅವಮಾನಿಸಲು ಎಷ್ಟು ಕೀಳ್ಮಟ್ಟಕ್ಕೆ ಹೋಗಬಹುದು, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ. ಸ್ವಾ. ಸಾವರ್ಕರ್ ರಷ್ಟೇ ಅಲ್ಲದೇ ಯಾವುದೇ ರಾಷ್ಟ್ರಪುರುಷರ ಹಾಗೂ ಕ್ರಾಂತಿಕಾರರ ಅವಮಾನವು ಯಾರಿಂದಲೂ ಆಗದಿರಲಿ, ಅದಕ್ಕಾಗಿ ಕೇಂದ್ರ ಸರಕಾರವು ಇದರ ಬಗ್ಗೆ ಕೂಡಲೇ ಕಾನೂನನ್ನು ರೂಪಿಸುವ ಆವಶ್ಯಕತೆ ಇದೆ.

ಕಾಂಗ್ರೆಸ್‌ನವರು ವಿತರಿಸಿದ ಪುಸ್ತಕದಿಂದ ದೇಶದಲ್ಲಿ ಕೋಮು ಹಾಗೂ ಜಾತಿಯ ಒತ್ತಡವನ್ನು ನಿರ್ಮಿಸಿ ಸಮಾಜದಲ್ಲಿ ಅಶಾಂತಿಯನ್ನು ನಿರ್ಮಿಸುವ ಸಂಚಿರುವುದು ಗಮನಕ್ಕೆ ಬರುತ್ತದೆ. ಕಾಂಗ್ರೆಸ್ಸಿನ ಸ್ವಾ. ಸಾವರ್ಕರ್ ದ್ವೇಷ, ಇದು ಸಂಪೂರ್ಣ ಕ್ರಾಂತಿಕಾರಿ ಚಳುವಳಿಯ ದ್ವೇಷವಾಗಿದ್ದು ಈ ಅಕ್ಷೇಪಾರ್ಹ ಪುಸ್ತಕವನ್ನು ಕೂಡಲೇ ನಿಷೇಧಿಸಬೇಕು, ಅದರ ಲೇಖಕರು ಹಾಗೂ ಪ್ರಕಾಶಕರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರು ಆಗ್ರಹಿಸಿದ್ದಾರೆ. ಇದನ್ನು ಆಗ್ರಹಿಸಿ ಸಮಿತಿ ವತಿಯಿಂದ ಮಹಾರಾಷ್ಟ್ರದ ಪುಣೆ ಮತ್ತು ಸಾವಂತವಾಡಿಯಲ್ಲಿ ರಾಷ್ಟ್ರೀಯ ಹಿಂದೂ ಆಂದೋಲನ ಮಾಡಲಾಯಿತು. ದೇಶದ ಇತರೆಡೆಯೂ ಸಮಿತಿಯಿಂದ ಇಂತಹ ಆಂದೋಲನಗಳನ್ನು ಮಾಡಲಾಗುತ್ತಿದೆ.

ಕಾಂಗ್ರೆಸ್ಸಿನ ಶಿಬಿರದಲ್ಲಿ ದೇಶದ ಕ್ರಾಂತಿಕಾರರು ಸಲಿಂಗ ಸಂಬಂಧವನ್ನು ಇಟ್ಟುಕೊಳ್ಳುವ, ಮಸೀದಿಯ ಮೇಲೆ ಕಲ್ಲೆಸೆಯುವ, ಅದೇರೀತಿ ಅಲ್ಪಸಂಖ್ಯಾತ ಮಹಿಳೆಯರ ಬಲಾತ್ಕಾರ ಮಾಡುವವರಿದ್ದರು, ಎಂದು ಹೇಳುವ ಅತ್ಯಂತ ಕೀಳ್ಮಟ್ಟದ ಪುಸ್ತಕವನ್ನು ವಿತರಿಸಿ ಏನು ಹೇಳಿಕೊಡಲಿದ್ದಾರೆ ? ಇದರಿಂದ ಕಾಂಗ್ರೆಸ್ಸಿನ ಶಿಬಿರಗಳು ಸಾಮಾಜಿಕ ಸಾಮರಸ್ಯವನ್ನು ಹೇಗೆ ಹಾಳು ಮಾಡಬಹುದು, ಇದರ ತರಬೇತಿ ಕೇಂದ್ರ ಆಗಿದೆ, ಎಂಬುದೇ ಸಾಬೀತಾಗುತ್ತದೆ. ಸ್ವಾ. ಸಾವರ್ಕರ್ ರಂತಹ ಮಹಾನ ರಾಷ್ಟ್ರಭಕ್ತರ ಅವಮಾನ ಸಾರ್ವಜನಿಕವಾಗಿ ಹಾಗೂ ಸತತವಾಗಿ ಆಗುತ್ತಿದೆ. ಯಾರು ಬೇಕಾದರೂ ಎದ್ದು ಅವರ ಚಾರಿತ್ಯವನ್ನು ಟೀಕಿಸುತ್ತಾರೆ, ಇದು ಅಕ್ಷಮ್ಯ ಹಾಗೂ ಅಸಹನೀಯವಾಗಿದೆ. ಪದೇ ಪದೇ ಘಟಿಸುವಂತಹ ಇಂತಹ ಘಟನೆಗಳಿಂದ ರಾಷ್ಟ್ರಭಕ್ತ ನಾಗರಿಕರ ಸಹನಶೀಲತೆಯ ಅಂತ್ಯವು ಸರಕಾರವು ಕಾಣದಿರಲಿ. ದೋಷಿಗಳ ಮೇಲೆ ಅತ್ಯಂತ ಕಠಿಣ ಹಾಗೂ ಕೂಡಲೇ ಕ್ರಮ ಕೈಗೊಳ್ಳಬೇಕು, ಅದೇರೀತಿ ಇಲ್ಲಿಯ ವರೆಗೆ ಆದಂತಹ ಸ್ವಾ. ಸಾವರ್ಕರ್ ರ ಅವಮಾನವನ್ನು ಹೋಗಲಾಡಿಸಲು ಒಂದು ಪ್ರಯತ್ನವೆಂಬಂತೆ ಸ್ವಾ. ಸಾವರ್ಕರ್ ರಿಗೆ ‘ಭಾರತರತ್ನ’ ಈ ಸರ್ವೋಚ್ಚ ಪ್ರಶಸ್ತಿಯನ್ನು ಕೂಡಲೇ ಘೋಷಿಸಬೇಕು, ಎಂದು ಸಹ ಈ ಸಮಯದಲ್ಲಿ ಶ್ರೀ. ಗೌಡ ಇವರು ಆಗ್ರಹಿಸಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English