ಬೆಂಗಳೂರು : ಕೇಂದ್ರ ಸರ್ಕಾರವು ರಾಜ್ಯಕ್ಕೆ ಎರಡನೇ ಕಂತಿನಲ್ಲಿ ನೆರೆ ಪರಿಹಾರ ಹಣ ಬಿಡುಗಡೆ ಮಾಡಿದ್ದು, ಸಿಎಂ ಬಿಎಸ್.ಯಡಿಯೂರಪ್ಪ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ್ಧಾರೆ. “ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದು ಹೋದ ಕೂಡಲೇ 1869 ಕೋಟಿ ನೆರೆ ಪರಿಹಾರ ಬಿಡುಗಡೆ ಮಾಡಿದ್ಧಾರೆ. ಈ ಮೊದಲು 1200 ಕೋಟಿ ಹಣ ಬಿಡುಗಡೆ ಮಾಡಿದ್ದರು. ಇವಾಗ 1869 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ರಾಜ್ಯದಲ್ಲಿ ಉಂಟಾದ ಪ್ರವಾಹ ಪರಿಹಾರ ಕಾರ್ಯಗಳಿಗೆ ಹಣ ಬಿಡುಗಡೆ ಮಾಡಿದ್ದಾರೆ. ಅದಕ್ಕಾಗಿ ಪ್ರಧಾನಿಯವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ,” ಎಂದರು.
“ಕೇಂದ್ರದಿಂದ ಇನ್ನೂ ಹಂತ ಹಂತವಾಗಿ ಹಣ ಬಿಡುಗಡೆಯಾಗಲಿದೆ. ಮತ್ತಷ್ಟು ಹಣ ಬಿಡುಗಡೆ ಮಾಡುವ ವಿಶ್ವಾಸ ಇದೆ. ಈಗ ಬಿಡುಗಡೆ ಆಗಿರುವ ಹಣ ಸಾಕಾಗುವುದಿಲ್ಲ. ಇವಾಗ ಎರಡು ಕಂತುಗಳಲ್ಲಿ ಹಣ ಬಿಡುಗಡೆ ಮಾಡಿದ್ದಾರೆ,” ಎಂದು ಹೇಳಿದರು.
ಮುಂದುವರೆದ ಅವರು, “ಈಗಾಗಲೇ ಬಜೆಟ್ ಪೂರ್ವ ಭಾವಿ ಸಭೆ ಆರಂಭಿಸಲಾಗಿದೆ. ನಿನ್ನೆ ವಿವಿಧ ತೆರಿಗೆ ಇಲಾಖೆಯ ಜೊತೆ ಸಭೆ ನಡೆಸಿದ್ದೇನೆ. ಮುಂದೆ ಉಳಿದ ಇಲಾಖೆಗಳ ಜೊತೆ ಸಭೆ ಮಾಡುತ್ತೇನೆ. ಇವಾಗ ಇಲಾಖೆಗಳಲ್ಲಿ ಏನೇನು ಆಗಿದೆ? ಮುಂದಿನ ಬಜೆಟ್ ನಲ್ಲಿ ಏನು ಮಾಡಬೇಕು? ಎಂದು ಚರ್ಚೆ ನಡೆಸಲಾಗಿದೆ. ಈ ಸಲ ಅವರ ಸಲಹೆ ಪಡೆದು ಒಳ್ಳೆಯ ಬಜೆಟ್ ಮಂಡನೆ ಮಾಡುತ್ತೇನೆ. ರೈತ ಪರ ಬಜೆಟ್ ಮಂಡನೆ ಬಗ್ಗೆ ಯೋಚನೆ ಮಾಡುತ್ತಿದ್ದೇನೆ,” ಎಂದರು.
ಇದಕ್ಕೂ ಮುನ್ನ ಸಿಎಂ ಬಿಎಸ್ ಯಡಿಯೂರಪ್ಪ ವಿಧಾನಸೌಧದ ಆವರಣದಲ್ಲಿ 20 ನೂತನ ಬಸ್ಗಳನ್ನು ಲೋಕಾರ್ಪಣೆ ಮಾಡಿದರು. ಹಸಿರು ಬಾವುಟ ತೋರಿಸುವ ಮೂಲಕ ಹೊಸ ಬಸ್ಗಳಿಗೆ ಚಾಲನೆ ನೀಡಿದರು. ಇದೇ ಮೊದಲ ಬಾರಿಗೆ ಅಂಬಾರಿ ಡ್ರೀಮ್ಸ್ ಕ್ಲಾಸ್ ಬಸ್ಸುಗಳು ರಸ್ತೆಗಿಳಿಯುತ್ತಿದ್ದು, ಸಿಎಂ ಬಿಎಸ್ವೈ ಈ ಮಾದರಿಯ 5 ಬಸ್ಗಳಿಗೆ ಚಾಲನೆ ನೀಡಿದರು. ಕೆಎಸ್ಆರ್ಟಿಸಿಯ ವಿವಿಧ ಮಾದರಿಯ ಒಟ್ಟು 20 ಬಸ್ಗಳಿಗೆ ಸಿಎಂ ಯಡಿಯೂರಪ್ಪ ಹಸಿರು ನಿಶಾನೆ ತೋರಿದರು.
Click this button or press Ctrl+G to toggle between Kannada and English