ಇಂದು ಸಂಜೆ 4 ರಿಂದ ಮಂಗಳೂರು ಟೌನ್‌ಹಾಲ್‌ನಲ್ಲಿ11ನೇ ಸೌಹಾರ್ದ ಸಂಗಮ- ನೇರ ಪ್ರಸಾರ –

3:12 PM, Tuesday, January 7th, 2020
Share
1 Star2 Stars3 Stars4 Stars5 Stars
(No Ratings Yet)
Loading...

MPMLA-front ಮಂಗಳೂರು: ಎಂಪಿಎಂಎಲ್‌ಎ ನ್ಯೂಸ್ 11ನೇ ಸೌಹಾರ್ದ ಸಂಗಮವು ಮಂಗಳೂರು ಟೌನ್‌ಹಾಲ್‌ನಲ್ಲಿ ಜನವರಿ 7,2020 ರ ಮಂಗಳವಾರ ಸಂಜೆ 4ರಿಂದ 9ರ ತನಕ ನಡೆಯಲಿದೆ.

ಉಳ್ಳಾಲ ಜುಮಾ ಮಸೀದಿ ಮತ್ತು ಸೈಯ್ಯದ್ ಮದನಿ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅವರು ಸೌಹಾರ್ದ ಸಂಗಮವನ್ನು ಉದ್ಘಾಟಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತ್‌ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದಾರೆ.

ಸಮಾರಂಭದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯು.ಟಿ. ಖಾದರ್, ಡಿ. ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ ವೈ. ಮೊದಲಾದ ಗಣ್ಯರನೇಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಅವರಿಗೆ ವರ್ಷದ ವ್ಯಕ್ತಿ, ಡಾ. ಎಸ್.ಎಂ. ಗೋಪಾಲಕೃಷ್ಣ ಆಚಾರ್ಯ ಮತ್ತು ಗೌತಮ ಶೆಟ್ಟಿ ಅವರಿಗೆ ಸಮಾಜರತ್ನ, ಸುಧೀರ್ ಶೆಟ್ಟಿ ಕಣ್ಣೂರು ಅವರಿಗೆ ಉತ್ತಮ ಜನಪ್ರತಿನಿಧಿ, ಡಾ. ಡಿ. ಶಿವಾನಂದ ಪೈ ಮತ್ತು ಡಾ. ಸದಾನಂದ ಪೂಜಾರಿ ಅವರಿಗೆ ಬೆಸ್ಟ್ ಡಾಕ್ಟರ‍್ಸ್ ಅವಾರ್ಡ್, ಪಿ. ಜಯರಾಮ ರೈ ಅವರಿಗೆ ಬೆಸ್ಟ್ ಲಾಯರ‍್ಸ್ ಅವಾರ್ಡ್, ಜಗನ್ನಾಥ್ ಶೆಟ್ಟಿ ಬಾಳ ಅವರಿಗೆ ಮೀಡಿಯಾ ಅವಾರ್ಡ್ ಸಹಿತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಒಟ್ಟು ೪೫ ಮಂದಿ ಸಾಧಕರಿಗೆ ಪ್ರಶಸ್ತಿ, ಸನ್ಮಾನ, ಪುರಸ್ಕಾರಗಳನ್ನು ನೀಡಲಾಗುವುದು.

ಸೌಹಾರ್ದ ಸಂಗಮದಲ್ಲಿ ಖ್ಯಾತ ಗಾಯಕ-ಗಾಯಕಿಯರಿಂದ ಸಂಗೀತ ರಸಮಂಜರಿ, ದಿನೇಶ್ ಅತ್ತಾವರ್ ಅವರಿಂದ ಮಲ್ಟಿ ಸಾರಿ ಡ್ಯಾನ್ಸ್ (8 ನಿಮಿಷದಲ್ಲಿ26 ರು ಸೀರೆಗಳನ್ನು ಬದಲಾಯಿಸುವ ನೃತ್ಯ) ಹಾಗೂ ಲ| ಕಿಶೋರ್ ಡಿ. ಶೆಟ್ಟಿಯವರ ಲಕುಮಿ ತಂಡದಿಂದ ’ಗುಟ್ಟು ಗೊತ್ತಾಂಡ್’ ಹಾಸ್ಯಮಯ ತುಳು ನಾಟಕದ ಉಚಿತ ಪ್ರದರ್ಶನವಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ‍್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಕಾರ್ಯಕ್ರಮದ ಸಂಘಟಕ ಡಾ| ಅಶೋಕ್ ಶೆಟ್ಟಿ ಬಿ.ಎನ್. ವಿನಂತಿಸಿದ್ದಾರೆ

ಈ ಕಾರ್ಯಕ್ರಮ ಮೆಗಾ ಮೀಡಿಯಾ ನ್ಯೂಸ್ ನ ವೆಬ್ ಸೈಟ್, ಯೌಟ್ಯೂಬ್, ಫೇಸ್ಬುಕ್ ಹಾಗೂ ಟ್ವಿಟ್ಟರ್ ಮೀಡಿಯಾಗಳಲ್ಲಿ ಪ್ರಸಾರವಾಗಲಿದೆ. ಕಾರ್ಯಕ್ರಮ ವೀಕ್ಷಿಸಲು ಈ ಕೆಳಗಿನ ಲಿಂಕ್ ಗಳನ್ನು ಬಳಸಿ 

Website http://megamedianews.com/

YouTube : https://www.youtube.com/c/MegaMediaNews

Facebook Page : https://www.facebook.com/MegaMediaNews

Twitter : https://twitter.com/megamedianews10

ಸೌಹಾರ್ದ ಸಂಗಮದ ವಿಶೇಷ ಸಂಚಿಕೆ 

mpmla newsmpmla news
mpmla news

mpmla news

mpmla news

mpmla news

mpmla news

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English