ವಿಟ್ಲ : ಕೆಟ್ಟು ನಿಂತಿದ್ದ ಲಾರಿ ಇದ್ದಕ್ಕಿದ್ದ ಹಾಗೇ ಚಲಿಸಿ ಎದುರಿಗೆ ನಿಂತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ ಸಮೀಪದ ಸೂರಿಕುಮೇರಿನಲ್ಲಿ ಸಂಭವಿಸಿದೆ.
ಅದೃಷ್ಟವಶಾತ್ ಆಟೋ ರಿಕ್ಷಾದಲ್ಲಿ ಯಾರೂ ಇಲ್ಲದ ಕಾರಣ ಅಪಾಯ ಸಂಭವಿಸಲಿಲ್ಲ. ಅಲ್ಲದೆ, ಲಾರಿ ರಿಪೇರಿ ಮಾಡುತ್ತಿದ್ದ ಮೆಕ್ಯಾನಿಕ್ ಸಹ ಅಪಾಯದಿಂದ ಪಾರಾಗಿದ್ದಾರೆ.
ನಿನ್ನೆ ರಾತ್ರಿ ಲಾರಿ ಕೆಟ್ಟು ಹೋದ ಕಾರಣ ರಸ್ತೆ ಬದಿಯಲ್ಲಿ ಲಾರಿಯನ್ನು ನಿಲ್ಲಿಸಲಾಗಿತ್ತು. ಇಂದು ಬೆಳಿಗ್ಗೆ ಆಟೋ ರಿಕ್ಷಾದಲ್ಲಿ ಬಂದ ಮೆಕ್ಯಾನಿಕ್ ಲಾರಿ ಮುಂಭಾಗದಲ್ಲಿ ರಿಕ್ಷಾ ನಿಲ್ಲಿಸಿ, ದುರಸ್ತಿ ಕಾರ್ಯ ಆರಂಭಿಸಿದ್ದರು. ಈ ವೇಳೆ ಲಾರಿ ಗೇರ್ ನ್ಯೂಟ್ರಲ್ ಗೆ ಬಿದ್ದ ಪರಿಣಾಮ ಎದುರುಗಡೆ ಇದ್ದ ರಿಕ್ಷಾಕ್ಕೆ ಗುದ್ದಿದ್ದಲ್ಲದೆ ಅದನ್ನು ದೂಡಿಕೊಂಡು ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದೆ.
Click this button or press Ctrl+G to toggle between Kannada and English