ಭೌತಿಕ ಮಾಲೀನ್ಯದಿಂದಾಗಿ ಭಾರತೀಯ ನದಿಗಳಿಂದ ಸಿಗುವ ಆಧ್ಯಾತ್ಮಿಕ ಲಾಭವು ಕಡಿಮೆಯಾಗುತ್ತಿದೆ

3:18 PM, Friday, January 10th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

kolkatta

ಕೋಲ್ಕತ್ತಾ : ವಿದೇಶಿ ನದಿಗಳ ತುಲನೆಯಲ್ಲಿ ಭಾರತೀಯ ನದಿಗಳಲ್ಲಿನ ಉನ್ನತ ಮಟ್ಟದ ಸಾತ್ತ್ವಿಕತೆ ಇರುತ್ತದೆ, ಇದು ಋಷಿಗಳ ಮತ್ತು ಭಕ್ತರ ಸಾಧನೆಯಿಂದಾಗಿ ಇರುವ ಭಾರತದ ಉನ್ನತ ಸಾತ್ತ್ವಿಕತೆಯ ಸಂಕೇತವಾಗಿದೆ. ಭಾರತೀಯ ನದಿಗಳು ಇಷ್ಟು ಮಾಲಿನ್ಯಕ್ಕೊಳಗಾಗದೇ ಇರುತ್ತಿದ್ದರೆ, ಆ ನದಿಗಳ ಆಧ್ಯಾತ್ಮಿಕ ಲಾಭ ತುಂಬಾ ಹೆಚ್ಚಾಗುತ್ತಿತ್ತು. ಏಕೆಂದರೆ ಭೌತಿಕ ಮಾಲಿನ್ಯವು ಇಂತಹ ಸಾತ್ತ್ವಿಕ ನದಿಗಳ ಮೇಲೆ ಒಂದು ಸೂಕ್ಷ್ಮ ನಕಾರಾತ್ಮಕ ಆವರಣವನ್ನು ನಿರ್ಮಾಣ ಮಾಡುತ್ತದೆ. ಆದ್ದರಿಂದ ಈ ನದಿಗಳಿಂದ ಸಮಾಜಕ್ಕಾಗುವ ಲಾಭವು ತುಂಬಾ ಕಡಿಮೆಯಾಗುತ್ತದೆ. ವಿದೇಶದಲ್ಲಿನ ವಿಕಸಿತ ದೇಶಗಳಿಂದ ‘ಭಾರತದಲ್ಲಿನ ನದಿಗಳನ್ನು ಭೌತಿಕದೃಷ್ಟಿಯಿಂದ ಹೇಗೆ ಶುದ್ಧವಾಗಿಡಬಹುದು’, ಎಂಬುದನ್ನು ನಾವು ಕಲಿತುಕೊಳ್ಳಬೇಕು. ‘ಭಾರತೀಯ ನದಿಗಳಲ್ಲಿನ ಉನ್ನತ ಮಟ್ಟದ ಸಾತ್ತ್ವಿಕತೆ’, ಜಗತ್ತಿಗೆ ಆದರ್ಶವಾಗಿದೆ.

ಇತರ ದೇಶಗಳು ಇದಕ್ಕಾಗಿ ಪ್ರಯತ್ನಿಸಬೇಕು, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ.ಶಂಭು ಗವಾರೆ ಇವರು ಪ್ರತಿಪಾದಿಸಿದರು. ಅವರು 7 ರಿಂದ 8 ಜನವರಿ 2020 ಈ ಅವಧಿಯಲ್ಲಿ ಕೋಲ್ಕತ್ತಾದಲ್ಲಿ ನೆರವೇರಿದ ”ಸಮಾಜ, ಧರ್ಮ ಮತ್ತು ಪರಿಸರ” ಈ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ಜನೆವರಿ 8 ರಂದು ಅವರು ಮಾತನಾಡುತ್ತಿದ್ದರು. ಈ ಪರಿಷತ್ತನ್ನು ಇನ್ಸ್ಟಿಟ್ಯೂಟ್ ಆಫ್ ಕ್ರಾಸ್-ಕಲ್ಚರಲ್ ಸ್ಟಡೀಸ್ & ಅಕಾಡೆಮಿಕ್ ಎಕ್ಸ್ಚೇಂಜ್ ಮತ್ತು ದಿ ಸೊಸೈಟಿ ಫಾರ್ ಇಂಡಿಯನ್ ಫಿಲಾಸಫಿ ಅಂಡ್ ರಿಲಿಜನ್ ಇವರು ಆಯೋಜಿಸಿದ್ದರು.

ಶ್ರೀ.ಶಂಭು ಗವಾರೆ ಇವರು ಈ ಪರಿಷತ್ತಿನಲ್ಲಿ ‘ನದಿಯ ಆಧ್ಯಾತ್ಮಿಕ ವೈಶಿಷ್ಟ್ಯ’ ಎಂಬ ಶೋಧಪ್ರಬಂಧವನ್ನು ಮಂಡಿಸಿದರು.

kolkatta

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಈ ಶೋಧಪ್ರಬಂಧದ ಲೇಖಕರಾಗಿದ್ದು ಶ್ರೀ.ಶಂಭು ಗವಾರೆ ಮತ್ತು ಶ್ರೀ. ಶಾನ್ ಕ್ಲಾರ್ಕ್ ಇವರು ಸಹಲೇಖಕರಾಗಿದ್ದಾರೆ.

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಮೂಲಕ ಮಂಡಿಸಿರುವ 61 ನೇ ಶೋಧಪ್ರಬಂಧ ಇದಾಗಿತ್ತು. ಈ ಹಿಂದೆ 15 ರಾಷ್ಟ್ರೀಯ ಹಾಗೂ 45 ಅಂತರರಾಷ್ಟ್ರೀಯ ವೈಜ್ಞಾನಿಕ ಪರಿಷತ್ತುಗಳಲ್ಲಿ ವಿವಿಧ ಶೋಧಪ್ರಬಂಧಗಳನ್ನು ಮಂಡಿಸಲಾಗಿದೆ. ಅವುಗಳಲ್ಲಿ 4 ಅಂತರರಾಷ್ಟ್ರೀಯ ಪರಿಷತ್ತುಗಳಲ್ಲಿನ ಶೋಧಪ್ರಬಂಧಗಳಿಗೆ ‘ಸರ್ವೋತ್ಕೃಷ್ಟ ಶೋಧಪ್ರಬಂಧ’ವೆಂದು ಪ್ರಶಸ್ತಿಗಳು ಸಿಕ್ಕಿವೆ. ಶ್ರೀ.ಶಂಭು ಗವಾರೆ ಇವರು ತಮ್ಮ ಶೋಧಪ್ರಬಂಧದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಮೂಲಕ ಪರಿಸರದ ಸ್ಥಿತಿಯನ್ನು ಅಧ್ಯಯನ ಮಾಡಲು ಕೈಗೊಂಡಿರುವ ಮಹತ್ವಪೂರ್ಣ ಸಂಶೋಧನೆಯ ವಿಷಯದಲ್ಲಿ ಮಾಹಿತಿ ನೀಡುವಾಗ, ಈ ಅಧ್ಯಯನವು ಕಳೆದ 2ವರ್ಷಗಳಿಂದ ನಿರಂತರ ನಡೆಯುತ್ತಿದೆ. ಇದರಲ್ಲಿ ಜಗತ್ತಿನಾದ್ಯಂತದ ಮಣ್ಣು ಮತ್ತು ನೀರಿನ ಸುಮಾರು 1 ಸಾವಿರ ಮಾದರಿಗಳ ಆಧ್ಯಾತ್ಮಿಕ ವೈಶಿಷ್ಟ್ಯಗಳನ್ನು ಅಧ್ಯಯನ ಮಾಡಲಾಗಿದೆ. ಇದಕ್ಕಾಗಿ ನಗರಗಳ ಹಾಗೂ ಗ್ರಾಮೀಣ ಭಾಗದ ಮಣ್ಣು ಹಾಗೂ ಸಮುದ್ರ, ನದಿಗಳು ಮತ್ತು ನಲ್ಲಿಯ ನೀರಿನ ಮಾದರಿಗಳನ್ನು ಸಂಗ್ರಹಿಸಲಾಗಿದೆ.

ಈ ಅಧ್ಯಯನಕ್ಕಾಗಿ ‘ಯುನಿವರ್ಸಲ್ ಆರಾ ಸ್ಕ್ಯಾನರ್’ (ಯು.ಎ.ಎಸ್) ಈ ಯಂತ್ರವನ್ನು ಹಾಗೂ ಸೂಕ್ಷ್ಮ ಪರೀಕ್ಷಣೆಯನ್ನು ಉಪಯೋಗಿಸಲಾಯಿತು. ಅದಕ್ಕಾಗಿ 14 ಭಾರತದ ಮತ್ತು 31 ವಿದೇಶಗಳಲ್ಲಿನ ನದಿಗಳ ನೀರಿನ ಮಾದರಿಗಳಲ್ಲಿನ ಆಧ್ಯಾತ್ಮಿಕ ಸ್ಪಂದನಗಳ ಅಧ್ಯಯನ ಮಾಡಲಾಗಿದೆ. ಈ ಅಧ್ಯಯನದಲ್ಲಿನ ಫಲಿತಾಂಶವು ವೈಶಿಷ್ಟ್ಯಪೂರ್ಣ ಹಾಗೂ ಭಯಾನಕವೂ ಆಗಿತ್ತು.

* ಮಣ್ಣಿನ ಮಾದರಿಗಳಲ್ಲಿ ಭಾರತದ ಶೇ.65 ರಷ್ಟು ಮಾದರಿಗಳು ಸಕಾರಾತ್ಮಕ ಹಾಗೂ ವಿದೇಶದ ಶೇ. 86 ರಷ್ಟು ಮಾದರಿಗಳು ನಕಾರಾತ್ಮಕವಾಗಿ ಕಂಡುಬಂದಿವೆ.

* ಭಾರತದ ನೀರಿನ ಮಾದರಿಗಳಲ್ಲಿ ಭಾರತದ ಶೇ.67 ರಷ್ಟು ನಮೂನೆಗಳು ಸಕಾರಾತ್ಮಕ ಹಾಗೂ ವಿದೇಶದ ಶೇ. 85 ರಷ್ಟು ಮಾದರಿಗಳು ನಕಾರಾತ್ಮಕವಾಗಿ ಕಂಡುಬಂದಿವೆ.

* ನದಿಗಳಲ್ಲಿ ಮಾತ್ರ ಭಾರತದ ಪ್ರತಿಯೊಂದು ನದಿಯ ನೀರಿನಲ್ಲಿ ಸಕಾರಾತ್ಮಕ ಸ್ಪಂದನ ಹಾಗೂ ವಿದೇಶದ ಪ್ರತಿಯೊಂದು ನದಿಯ ನೀರಿನಲ್ಲಿ ನಕಾರಾತ್ಮಕ ಸ್ಪಂದನವು ಪ್ರಕ್ಷೇಪಣೆಯಾಗುತ್ತಿರುವುದು ಕಂಡುಬಂದಿದೆ. ಅಪವಾದವೆಂದರೆ ಕೇವಲ ಶ್ರೀಲಂಕೆಯಲ್ಲಿನ ಸೀತಾ ಮಂದಿರದ ಹಿಂದೆ ಹರಿಯುತ್ತಿರುವ ಸೀತಾನದಿ !’, ಎಂದರು.

ಅಂತಿಮವಾಗಿ ಶ್ರೀ.ಶಂಭು ಗವಾರೆ ಇವರು, ಈ ಸಂಶೋಧನೆಯು ಎಲ್ಲರಿಗೂ ತಲಪಿದರೆ, ಭಾರತದ ನದಿಗಳ ಸಾತ್ತ್ವಿಕತೆಯನ್ನು ಕಾಪಾಡಲು ಎಲ್ಲರಿಗೂ ಪ್ರೇರಣೆ ಸಿಗಬಹುದು. ಅದರಿಂದ ನಮ್ಮ ಆಧ್ಯಾತ್ಮಿಕ ಪರಂಪರೆಯನ್ನು ಶಾಶ್ವತವಾಗಿ ಕಾಪಾಡಲು ಆ ನದಿಗಳ ಮಾಲಿನ್ಯತೆಯನ್ನು ತಡೆಯಲು ಆವಶ್ಯಕ ಹೆಜ್ಜೆ ಇಡಲಾಗುವುದು, ಎಂದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English