ಮಂಗಳೂರು : ಕರಾವಳಿ ಉತ್ಸವ ಮೈದಾನದಲ್ಲಿ ಜನವರಿ ಹತ್ತರಿಂದ ಇಪ್ಪತ್ತರವರೆಗೆ ನಡೆಯುವ ಕರಾವಳಿ ಉತ್ಸವದ ಸಾಂಸ್ಕತಿಕ ಮೆರವಣಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ನೆಹರೂ ಮೈದಾನದಲ್ಲಿ ಗುರುವಾರ ಉದ್ಘಾಟಿಸಿದರು.
ಮಂಗಳೂರಿನಲ್ಲಿ ನಡೆಯುವ ಕರಾವಳಿ ಉತ್ಸವ ರಾಜ್ಯ ಹೆಮ್ಮೆ ಪಡುವಂತಹ ಕಾರ್ಯಕ್ರಮ ಎಂದು ಅವರು ಹೇಳಿದರು. ಪಣಂಬೂರು ಬೀಚ್ ಉತ್ಸವ, ಸಾಂಸ್ಕತಿಕ ಉತ್ಸವಗಳು ಕರಾವಳಿಯ ಸಾಂಸ್ಕತಿಯನ್ನು ಬಿಂಬಿಸುವ ಉತ್ಸವ ಎಂದು ಅವರು ಬಣ್ಣಿಸಿದರು.
ಸಾಂಸ್ಕತಿಕ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕಲಾ ತಂಡಗಳ ವೈವಿಧ್ಯಮಯ ಕಲಾ ಪ್ರದರ್ಶನ ನಡೆಯಿತು.
ಈ ಸಂಧರ್ಭದಲ್ಲಿ ಮಂಗಳೂರು ನಗರದ ದಕ್ಷಿಣ ಎಂಎಲ್ಎ ವೇದವ್ಯಾಸ್ ಕಾಮತ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ತುಳು ಸಾಹಿತ್ಯ ಪರಿಷತ್ ಅಧ್ಯಕ್ಷ ದಯಾನಂದ್ ಕತ್ತಲ್ ಸಾರ್, ಬ್ಯಾರಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಹೀಮ್ ಉಚ್ಚಿಲ, ಜಿಲ್ಲಾಧಿಕಾರಿ ಸಿಂಧು ರೂಪೇಶ್, ಅಪರ ಜಿಲ್ಲಾಧಿಕಾರಿ ಎಂ ಜಿ ರೂಪ, ತುಳುನಾಡ ರಕ್ಷಣಾ ವೇದಿಕೆಯ ಯೋಗೀಶ್ ಶೆಟ್ಟಿ ಜಪ್ಪು, ಹಿಂದೂ ಯುವ ಸೇನೆಯ ಬಾಸ್ಕರ್ ಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಂಜೆ 5.30ಕ್ಕೆ ವಸ್ತುಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಲಿದ್ದು, 6 ಗಂಟೆಗೆ ಕರಾವಳಿ ಉತ್ಸವವಕ್ಕೆ ಚಿತ್ರನಟ ರಿಷಬ್ ಶೆಟ್ಟಿ ಚಾಲನೆ ನೀಡಲಿದ್ದಾರೆ.
ಕರಾವಳಿ ಉತ್ಸವದ ಅಂಗವಾಗಿ ಜ.11 ರಿಂದ 19ರವರೆಗೆ ಉತ್ಸವ ಮೈದಾನ, ಕದ್ರಿ ಪಾರ್ಕ್‍ನಲ್ಲಿ ನಾಡಿನ ಖ್ಯಾತ ಕಲಾವಿದರು ಹಾಗೂ ಕಲಾತಂಡಗಳಿಂದ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಲಿದೆ. ಜನವರಿ 11ರಂದು ನಗರದ ವಿವಿಧ ಕ್ರೀಡಾಂಗಣಗಳಲ್ಲಿ ಕರಾವಳಿ ಉತ್ಸವ ಕ್ರೀಡೋತ್ಸವ, ಜ.16 ಮತ್ತು 17ರಂದು ಜಿಲ್ಲೆಯ ವಿವಿಧ ಕಾಲೇಜು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ‘ಯುವ ಉತ್ಸವ’ ಕದ್ರಿ ಪಾರ್ಕ್‍ನಲ್ಲಿ ನಡೆಯಲಿವೆ.
ಪಣಂಬೂರು ಬೀಚ್‍ನಲ್ಲಿ ಜನವರಿ 17ರಿಂದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆರಂಭವಾಗಲಿದೆ. ಇದರಲ್ಲಿ ದೇಶ ವಿದೇಶಗಳ ಇದಲ್ಲದೆ ಬೀಚ್ ಕ್ರೀಡಾಕೂಟಗಳು, ಸಂಗೀತ ಕಾರ್ಯಕ್ರಮಗಳೂ ನಡೆಯಲಿದ್ದು, 19ರಂದು ಸಮಾರೋಪ ನಡೆಯಲಿದೆ.
ಕರಾವಳಿ ಉತ್ಸವ ಮೈದಾನದಲ್ಲಿ ವಸ್ತುಪ್ರದರ್ಶನ ಜ.10ರಿಂದ ಫೆಬ್ರವರಿ 10ರರೆಗೆ ಒಂದು ತಿಂಗಳ ಕಾಲ ನಡೆಯಲಿದೆ.
Click this button or press Ctrl+G to toggle between Kannada and English