ಮುಡಿಪು: ರಾಜಧಾನಿ ಜುವೆಲ್ಲರ್ ಶಾಪ್ ಗೆ ನುಗ್ಗಿದ ಕಳ್ಳರು ಸಾವಿರಾರು ಮೌಲ್ಯದ ಆಭರಣಗಳ ಕಳವು

12:37 PM, Monday, November 5th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Rajadani Jewellersಕೊಣಾಜೆ :ಮುಡಿಪು ಜಂಕ್ಷನ್‌ನಲ್ಲಿರುವ ನವಾಝ್ ಎಂಬವರಿಗೆ ಸೇರಿದ ‘ರಾಜಧಾನಿ ಜುವೆಲ್ಲರ್ ಶಾಪ್ ಗೆ ನುಗ್ಗಿರುವ ಕಳ್ಳರು ಸುಮಾರು ಎರಡು ಕೆ.ಜಿ. ಬೆಳ್ಳಿಯ ಆಭರಣಗಳನ್ನು ಕಳವುಗೈದ ಘಟನೆ ರವಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಶಾಪ್ ನ ಕಬ್ಬಿಣದ ಕಿಟಕಿಯ ಸರಳುಗಳನ್ನು ಕಳ್ಳರು ಎಕ್ಸೆಲ್ಬ್ಲೇಡ್ ಮೂಲಕ ಮುರಿದು ಒಳನುಗ್ಗಿದ್ದಾರೆ ಎನ್ನಲಾಗಿದೆ. ಚಿನ್ನಾಭರಣವನ್ನೇ ಗುರಿಯಾಗಿಟ್ಟುಕೊಂಡು ಕಳ್ಳತನಕ್ಕೆ ಯತ್ನಿಸಿದ್ದ ಇವರಿಗೆ ಅಲ್ಲಿ ಯಾವುದೇ ಚಿನ್ನದ ಅಭರಣಗಳು ಸಿಗದೇ ಇದ್ದಾಗ ಅಲ್ಲಿದ್ದ ಸುಮಾರು ಎರಡು ಕೆಜಿಯಷ್ಟು ಬೆಳ್ಳಿಯ ಆಭರಣಗಳನ್ನು ಕಳವುಗೈದಿದ್ದಾರೆ. ಕಳವಾದ ಬೆಳ್ಳಿಯ ಆಭರಣಗಳ ಮೊತ್ತ 80 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ಘಟನಾ ಸ್ಥಳಕ್ಕೆ ಕೊಣಾಜೆ ಠಾಣಾಧಿಕಾರಿ ಶಿವಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ಬೋಳಿಯಾರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ಈ ಬಗ್ಗೆ ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು, ಕೊಣಾಜೆ, ದೇರಳಕಟ್ಟೆ ಪರಿಸರದಲ್ಲಿ ಕಳೆದ ಮೂರು ತಿಂಗಳಿನಿಂದ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ನಾಗರಿಕರನ್ನು ಆತಂಕಕ್ಕೀಡು ಮಾಡಿದೆ.

ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮುಡಿಪು ಚೆಕ್‌ಪೋಸ್ಟ್ ಹಿಂಭಾಗದಲ್ಲಿರುವ ಉಮರ್ ಕುಂಞಿ ಎಂಬವರ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ್ದ ಕಳ್ಳರು30 ಸಾವಿರ ನಗದು ಹಾಗೂ 45 ಪವನ್ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದರು. ಬಳಿಕ ಸೆ.28ರಂದು ರಾತ್ರಿ ಮುಡಿಪುವಿನ ಸಾಂಬಾರ್‌ತೋಟದ ಸಂಶುದ್ದೀನ್, ಮುಹಮ್ಮದ್, ಮೋಹನ್ ಗಟ್ಟಿ, ಇಬ್ರಾಹೀಂ, ಮೂಸಾ, ಎಸ್.ಕೆ.ಖಾದರ್ ಹಾಜಿ ಹಾಗೂ ಹಾಜಿ ಇಬ್ರಾಹೀಂ ಎಂಬವರ ಮನೆಗಳಿಗೆ ಒಂದೇ ದಿನ ನುಗ್ಗಿ ಕಳ್ಳತನ ನಡೆಸಲಾಗಿತ್ತು. ಬಳಿಕ ದೇರಳಕಟ್ಟೆಯ ಕಣಚೂರು ಮೋನು ಎಂಬವರ ಮನೆಗೆ ರಾತ್ರಿ ನುಗ್ಗಿದ ಕಳ್ಳರು ಅಲ್ಲಿಂದ ನಗದು ಹಾಗೂ ಎರಡು ವಜ್ರದುಂಗುರಗಳನ್ನು ಕಳವು ಮಾಡಿದ್ದರು.

ಇಷ್ಟೆಲ್ಲಾ ಪ್ರಕರಣಗಳು ನಡೆದರೂ, ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ವಿಫಲವಾಗಿದ್ದು, ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English