ತಿರುವನಂತಪುರಂ : ಕೇರಳ ಪೊಲೀಸ್ ಅಧಿಕಾರಿ ಹತ್ಯೆ ಹಿಂದೆ ಉಗ್ರರ ಕೈವಾಡವಿರುವುದು ಸ್ಪಷ್ಟವಾಗಿದೆ.
ಕೇರಳ ಗಡಿಯ ಕನ್ಯಾಕುಮಾರಿ ವಿಶೇಷ ಸಬ್ ಇನ್‌ಸ್ಪೆಕ್ಟರ್ ನಿಗೂಢವಾಗಿ ಹತ್ಯೆಯಾದ ಎರಡು ದಿನಗಳ ಬಳಿಕ ತನಿಖಾ ತಂಡಕ್ಕೆ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.
ಈ ವಾರ ಬೆಂಗಳೂರಿನಲ್ಲಿ ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು. ಅವರ ಬಂಧನದ ಪ್ರತೀಕಾರಕ್ಕೆ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಲಾಗಿದೆ ಎಂಬ ವಿಷಯ ಬಹಿರಂಗಗೊಂಡಿದೆ.ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳ ಪೈಕಿ ಅಬ್ದುಲ್ ಶಮೀಮ್ ಎಂಬಾತ ಸ್ವಯಂ ಘೋಷಿತ ಜಿಹಾದಿ ಎಂದು ಹೇಳಿಕೊಂಡಿದ್ದಾನೆ ಎಂಬುದು ಸ್ಪಷ್ಟವಾಗಿದೆ.
2014ರಲ್ಲಿ ನಡೆದ ಹಿಂದೂ ಮುಕಂಡನ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ ಶಮೀಮ್ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆತ ಶರಣಾಗುತ್ತಿರಲಿಲ್ಲ. ಅವಕಾಶ ಸಿಕ್ಕಿದರೆ ಸೆರೆ ಸಿಕ್ಕುವ ಬದಲು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ. ವಿಲ್ಸನ್ ಎಂಬ ಸಬ್ ಇನ್‌ಸ್ಪೆಕ್ಟರ್ ಬುಧವಾರ ರಾತ್ರಿ ಕಲಿಯಕ್ಕಾವಿಲೈ ಚೆಕ್‌ಪೋಸ್ಟ್ ಬಳಿ ಹತ್ಯೆಯಾಗಿದ್ದರು. ಅವರ ದೇಹದಲ್ಲಿ ಇರಿತದ ಗಾಯಗಳಿದ್ದವು. ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ ಪೊಲೀಸರು ಶಮೀಮ್ ಮತ್ತು ತೌಫಿಕ್ ಎಂಬುವವರನ್ನು ಬಂಧಿಸಿದ್ದರು. ಬೆಂಗಳೂರಿನಲ್ಲಿ ಇಮ್ರಾನ್ ಖಾನ್, ಹನೀಫ್, ಝಿಯಾದ್ ಎಂಬುವವರನ್ನು ಬಂಧಿಸಿದ ಪ್ರತೀಕಾರವಾಗಿ ಅಧಿಕಾರಿಯನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Click this button or press Ctrl+G to toggle between Kannada and English