ಮಂಗಳೂರು : ಕರ್ನಾಟಕದ ಮಹಾನ್ ಚೇತನ, ಸರ್ವಶ್ರೇಷ್ಠ ಇತಿಹಾಸಕಾರ, ಶ್ರೇಷ್ಠ ಸಂಶೋಧಕರು ಹಾಗೂ ಹಿಂದೂ ಧರ್ಮದ ರಕ್ಷಣೆಗಾಗಿ ತಮ್ಮ ಜೀವನವನ್ನೇ ಸಮರ್ಪಣೆ ಮಾಡಿದ ನಾಡೋಜ ಪ್ರಶಸ್ತಿ ವಿಜೇತ ನಾಡೋಜಾ ಡಾ. ಚಿದಾನಂದಮೂರ್ತಿಯವರ ಅಗಲಿಕೆಯು ತುಂಬ ನೋವು ತಂದಿದೆ. ಅವರು ಹಿಂದೂ ಸಂಘಟನೆಯ ಮಾರ್ಗದರ್ಶಕರಾಗಿದ್ದಲ್ಲದೇ ವಿಶ್ವ ಪರಂಪರೆಯ ಹಂಪಿಯ ರಕ್ಷಣೆಗಾಗಿಯೂ ಪರಿಶ್ರಮ ವಹಿಸಿದ್ದರು.
ಅದೇ ರೀತಿ ಕ್ರೂರಿ ಟಿಪ್ಪು ಸುಲ್ತಾನನ ಬಗ್ಗೆಗಿನ ಸತ್ಯ ಇತಿಹಾಸವನ್ನು ಬಯಲಿಗೆಳೆದಿದ್ದರು. ಧರ್ಮ ಮತ್ತು ರಾಷ್ಟ್ರದ ಮೇಲಿನ ಆಘಾತಗಳ ಬಗ್ಗೆ ಇಳಿ ವಯಸ್ಸಿನಲ್ಲಿಯೂ ಸದಾ ಖಂಡಿಸಿದ ಅವರು ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತರಲು ಭಗೀರಥ ಪ್ರಯತ್ನ ಮಾಡಿದ್ದರು. ಅವರ ಕೊಡುಗೆಗೆ ಸಮಸ್ತ ಸಮಾಜವೇ ಕೃತಜ್ಞತೆ ವ್ಯಕ್ತಪಡಿಸುತ್ತಿದೆ.
ಅವರು ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ಅಧಿವೇಶನ, ಹಿಂದೂ ರಾಷ್ಟ್ರಜಾಗೃತಿ ಸಭೆ ಮುಂತಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾರ್ಗದರ್ಶನ ಮಾಡಿದ್ದರು. ಅವರ ಜೀವನಾದ್ಯಂತಹ ಹಿಂದೂ ಧರ್ಮ ಜಾಗೃತಿ ಹಾಗೂ ರಾಷ್ಟ್ರದ ರಕ್ಷಣೆಯ ಕಾರ್ಯವು ಸಮಸ್ತ ಹಿಂದೂಗಳಿಗೆ ದಾರಿದೀಪವಾಗಿದೆ.
Click this button or press Ctrl+G to toggle between Kannada and English