ಕೃಷ್ಣರಾಜ ಕ್ಷೇತ್ರದ 270 ಬೂತ್‍ಗಳಲ್ಲೂ ಪೋಸ್ಟ್ ಕಾರ್ಡ್ ಅಭಿಯಾನ

12:45 PM, Monday, January 13th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

mysuru

ಮೈಸೂರು : ಕೇಂದ್ರ ಸರ್ಕಾರ ಇತ್ತೀಚಿಗೆ ಜಾರಿಗೆ ತಂದ ಪೌರತ್ವ ಕಾಯ್ದೆ-2019 ವಿಷಯವಾಗಿ ಮುಸ್ಲಿಮರ ಮನಸ್ಸಿನಲ್ಲಿರುವ ಆತಂಕವನ್ನು ಹೋಗಲಾಡಿಸುವ ದೃಷ್ಟಿಯಿಂದ ಪೋಸ್ಟ್ ಕಾರ್ಡ್ ಅಭಿಯಾನವನ್ನು ವಿವೇಕಾನಂದ ವೃತ್ತದಲ್ಲಿ ಆಯೋಜಿಸಲಾಗಿತ್ತು.

ನಿನ್ನೆ ನಡೆದ ಕಾರ್ಯಕ್ರಮಕ್ಕೆ ಶಾಸಕ ಎಸ್.ಎ. ರಾಮರಾಸ್ ಚಾಲನೆ ನೀಡಿದರು. ಕೃಷ್ಣರಾಜ ಕ್ಷೇತ್ರದ 270 ಬೂತ್‍ಗಳಲ್ಲೂ ಪೋಸ್ಟ್ ಕಾರ್ಡ್ ಅಭಿಯಾನವನ್ನು ಆಯೋಜಿಸಲಾಗಿದ್ದು ಒಂದು ಲಕ್ಷ ಅಂಚೆ ಪತ್ರಗಳನ್ನು ಸಾರ್ವಜನಿಕರಿಂದ ಸಿ.ಎ.ಎ. ಗೆ ಬೆಂಬಲ ವ್ಯಕ್ತಪಡಿಸಿ ಹಾಕಲಾಯಿತು.

mysuru

ಎಲ್ಲರಿಗೂ ಪೌರತ್ವ ತಿದ್ದುಪಡಿ ಕಾಯ್ದೆಯ ತಿದುಪ್ದಡಿಯಿಂದ ಯಾವುದೇ ಧರ್ಮದ, ವಿಶೇಷವಾಗಿ ಮುಸಲ್ಮಾನ ಬಂಧುಗಳ ಪೌರತ್ವಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ ಮತ್ತು ಉಂಟಾಗುವುದಿಲ್ಲವೆಂದು ಶಾಸಕರು ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯ ಹಲವು ಮುಖ್ಯವಾದ ವಿಚಾರಗಳನ್ನು ನೆರದಿದ್ದ ಎಲ್ಲಾ ಧರ್ಮದವರಿಗೂ ತಿಳಿಸಿಕೊಟ್ಟರು. ಮುಸಲ್ಮಾನ ಬಂಧುಗಳಲ್ಲಿ ವಿನಾಕಾರಣ ಹಲವು ಗೊಂದಲಗಳನ್ನು ಮೂಡಿಸಿ ಪ್ರಚೋದನೆಯನ್ನು ಮಾಡಿ ರಾಜಕಾರಣವನ್ನಾಗಿಸಿ ಗಲಭೆಗಳನ್ನು ಉಂಟುಮಾಡಲು ಪ್ರಯತ್ನಿಸುತ್ತಿರುವವರ ಮನಸ್ಥಿತಿಯನ್ನು ಖಂಡಿಸಿ ಇಂತವರ ಗೊಂದಲ ಮತ್ತು ಪ್ರಚೋದನೆಗಳಿಗೆ ಒಳಗಾಗದೇ ಮತ್ತು ಕಿವಿಕೊಡದೇ ನಾವೆಲ್ಲರೂ ಭಾವೈಕತ್ಯೆಯಿಂದ ಮತ್ತು ಸಹೋದರತ್ವದಿಂದ ಬದುಕನ್ನು ನಡೆಸುವುದರ ಮೂಲಕ ದೇಶದ ಐಕ್ಯತೆಯನ್ನು ಮತ್ತು ಸಾರ್ವಭೌಮತ್ವವನ್ನು ಎತ್ತಿ ಹಿಡಿದು ವಿವಿಧತೆಯಲ್ಲಿ ಏಕತೆ ಎಂಬ ಸಂದೇಶವನ್ನು ಸಾರೋಣವೆಂದು ಕರೆ ಕೊಟ್ಟರು.

 

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English