ಮಂಗಳೂರು : ದೇಶವನ್ನು ಆಳುತ್ತಿರುವ ಜನವಿರೋಧಿ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರವು ದಲಿತ ಆದಿವಾಸಿ ಸಮುದಾಯದ ಬದುಕಿನ ಮೇಲೆ ನಿರಂತರ ಕುದುರೆ ಸವಾರಿ ಮಾಡುತ್ತಿದ್ದು ಪ್ರಸ್ತುತ ಪೌರತ್ವ ತಿದ್ದುಪಡಿ ಮಸೂದೆಯಿಂದ ಈ ದೇಶದ ಮೂಲನಿವಾಸಿಗಳಾದ ದಲಿತ ಆದಿವಾಸಿ ಬುಡಕಟ್ಟು ಸಮುದಾಯಗಳ ಬದುಕು ಅತಂತ್ರವಾದಂತೆ ಎಂದು ರವಿಚಂದ್ರ ಕೊಪ್ಪಲಕಾಡು ಹೇಳಿದರು. ಅವರು ದಲಿತ ಹುಕ್ಕುಗಳ ಸಮಿತಿಯ ಕೊಂಚಾಡಿ ಘಟಕ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರು.
ಸರ್ವ ಜನಾಂಗದ ಶಾಂತಿಯ ತೋಟ ಆಗಿರುವ ಭಾರತವನ್ನು ಮತ ಧರ್ಮಗಳ ಆಧಾರದ ಮೇಲೆ ವಿಘಟನೆ ಮಾಡುವ ಸಂಘ ಪರಿವಾರದ ಕುತಂತ್ರವನ್ನು ಈ ಮಣ್ಣಿನ ಮೂಲನಿವಾಸಿಗಳಾದ ದಲಿತರು ಆದಿವಾಸಿಗಳು ಸೋಲಿಸಬೇಕೆಂದು ಕರೆನೀಡಿದರು. ಬಿಜೆಪಿ ಆಳ್ವಿಕೆ ಪ್ರಾರಂಭವಾದ ಮೇಲೆ ದಲಿತರ ಮೇಲೆ ದೌರ್ಜನ್ಯದ ಘಟನೆಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷರಾದ ತಿಮ್ಮಯ್ಯ ಕೊಂಚಾಡಿ, ನಗರ ಕಾರ್ಯದರ್ಶಿ ಕೃಷ್ಣ ತಣ್ಣೀರುಬಾವಿ, ಡಿವೈಎಫ್‌ಐ ನಗರಾಧ್ಯಕ್ಷರಾದ ನವೀನ್ ಬೊಲ್ಪುಗುಡ್ಡೆ, ಕಟ್ಟಡ ಕಾರ್ಮಿಕರ ಮುಂದಾಳುಗಳಾದ ಚಂದ್ರಹಾಸ್, ದಯಾನಂದ ಶೆಟ್ಟಿಗಾರ್, ಶಶಿಕುಮಾರ್ ಗುಂಡಳಿಕೆ ಮಾತನಾಡಿದರು.
ಗತ ವರ್ಷದ ವರದಿಯನ್ನು ಡಿಎಚ್‌ಎಸ್ ನಗರ ಸಮಿತಿ ಸದಸ್ಯರಾದ ಪ್ರವೀಣ್ ಕೊಂಚಾಡಿ ಮಂಡಿಸಿದರು. ಸಭೆಯ ಅಧ್ಯಕ್ಷತೆಯನ್ನು ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ನಾರಾಯಣ ಕೊಂಚಾಡಿ ವಹಿಸಿದರು. ಪ್ರಾರಂಭದಲ್ಲಿ ಪಾಂಡುರಂಗ ಕೆ. ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ನೂತನ ಕಾರ್ಯದರ್ಶಿ ದೊಂಬಯ್ಯ ಕೆ. ವಂದಿಸಿದರು.
Click this button or press Ctrl+G to toggle between Kannada and English