ಮಂಗಳೂರು : ಶ್ರೀ ಅಷ್ಟ ಪವಿತ್ರ ನಾಗ ಮಂಡಲ ಪುಣ್ಯೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರ ನಾಣ್ಯ ಇಲ್ಲಿ ಜನವರಿ 16 ರಂದು ಬೆಳಿಗ್ಗೆ 6 ರಿಂದ ವೇದಮೂರ್ತಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಸಾನಿಧ್ಯ ವೃದ್ಧಿ ಹಾಗೂ ಬ್ರಹ್ಮಕಲಶಾಭಿಷೇಕ ಮಹೋತ್ಸವ ನಡೆಯಲಿದೆ. ರಾತ್ರಿ 9.30 ನಾಗಬನದಲ್ಲಿ ಹಾಲಿಟ್ಟು ಬಳಿಕ ರಾತ್ರಿ 11.30 ರಿಂದ ನಾಗಪಾತ್ರಿಗಳಾದ ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗ ಮತ್ತು ಮುದ್ದೂರು ಶ್ರೀ ಕೃಷ್ಣಪ್ರಸಾದ್ ವೈದ್ಯ ಮತ್ತು ಬಳಗದವರಿಂದ ಅಷ್ಟ ಪವಿತ್ರ ನಾಗಮಂಡಲ ಪುಣ್ಯೋತ್ಸವ ನಡೆಯಲಿದೆ.
ಜನವರಿ 17 ರಂದು ಸಂಜೆ 7 ಗಂಟೆಗೆ ಶ್ರೀ ರಕ್ತೇಶ್ವರಿ ನೇಮೋತ್ಸವ, ಗುಳಿಗದೈವದ ನರ್ತನ ಸೇವೆ ನಡೆಯಲಿದೆ
ಶ್ರೀ ಅಷ್ಟ ಪವಿತ್ರ ನಾಗ ಮಂಡಲ ಪುಣ್ಯೋತ್ಸವ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಅಷ್ಟ ಪವಿತ್ರ ನಾಗ ಮಂಡಲೋತ್ಸವ ಕಾರ್ಯಕ್ರಮಗಳಿಗೆ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ ದಾಮ ಮಾಣಿಲ ಇವರು ಸೋಮವಾರ ನಡೆದ ಸಾಮೂಹಿಕ ಪ್ರಾರ್ಥನೆ , ತೋರಣ ಮುಹೂರ್ತ , ಅಥರ್ವಶೀರ್ಷ ಮಹಾ ಗಣಪತಿಹೋಮ ಸಂಜೀವಿನಿ ಮೃತ್ಯುಂಜಯ ಶಾಂತಿ ಹೋಮ ,” ಕಲ್ಪದ್ರುವ ” ಉಗ್ರಾಣ ಮುಹೂರ್ತ ,” ಸೌಭಾಗ್ಯದಾಯಿಣಿ ಅನ್ನ ಛತ್ರ” ,” ಶ್ರೀ ವಾಸುಕಿ ನಳ ಪಾಕ ಶಾಲೆ” , ಗಳಿಗೆ ಚಾಲನೆ ನೀಡಿ “ಅನಂತ ಮಂಟಪ” ಸಭಾಂಗಣ ದಲ್ಲಿ “ಫಣಾಮಣಿ” ವೇದಿಕೆ ಯನ್ನು ಉದ್ಘಾಟಿಸಿ ಧಾರ್ಮಿಕ ಸಭೆ ಯಲ್ಲಿ ಆಶೀರ್ವಚನ ನೀಡಿದರು.
ಈ ಸಂಧರ್ಭ ದಲ್ಲಿ ಡಾ ಮಂಜಯ್ಯ ಶೆಟ್ಟಿ ಅಮ್ಮುಂಜೆ ಗುತ್ತು, ವೇದಮೂರ್ತಿ ಪೊಳಲಿ ಶ್ರೀ ಸುಬ್ರಮಣ್ಯ ತಂತ್ರಿ , ಶ್ರೀ ಗೋಪಾಲ ಆಚಾರ್ಯ ಮಾರ್ನಬೈಲು , ಕೊಡ್ಮಾಣ್ ವಿವೇಶ್ ಆಳ್ವ , ಶ್ರೀ ಅಷ್ಟ ಪವಿತ್ರ ನಾಗ ಮಂಡಲ ಪುಣ್ಯೋತ್ಸವ ಸಮಿತಿ , ಅಧ್ಯಕ್ಷರಾದ ಪ್ರಕಾಶ್ಚಂದ್ರ ರೈ ದೇವಸ್ಯ , ಕಾರ್ಯಾಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ರಂಗೋಲಿ, ಆಡಳಿತ ಸಮಿತಿ ಅಧ್ಯಕ್ಷರಾದ ಪೂವಪ್ಪ ಬಂಗೇರ ನಾಣ್ಯ , ಪ್ರದಾನ ಸಂಚಾಲಕರಾದ ತೇವು ತಾರಾನಾಥ ಕೊಟ್ಟಾರಿ , ಪ್ರದಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ , ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪುಂಚಮೆ , ವೇದಿಕೆಯಲ್ಲಿದ್ದರು ಗೌರಾವಾಧ್ಯಕ್ಷರು ಐತಪ್ಪ ಆಳ್ವ ಸುಜೀರ್ ಗುತ್ತು ಸ್ವಾಗತಿಸಿದರು, ಕಾರ್ಯಾಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ರಂಗೋಲಿಯವರು ಪ್ರಾಸ್ತಾವಿಕ ಭಾಷಣ ಮಾಡಿದರು ಜಗದೀಶ್ ಕಡೆಗೋಳಿ ಕಾರ್ಯಕ್ರಮ ನಿರೂಪಿಸಿದರು , ಆಡಳಿತ ಸಮಿತಿ ಕಾರ್ಯದರ್ಶಿ ಮಾದವ ನಾಣ್ಯ ವಂದಿಸಿದರು.
Click this button or press Ctrl+G to toggle between Kannada and English