ಜನವರಿ 17 ರಂದು ಮಂಗಳೂರಿನಲ್ಲಿ Be Good Do Good ಅಭಿಯಾನಕ್ಕೆ ಚಾಲನೆ.

4:48 PM, Wednesday, January 15th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Begood do good ಮಂಗಳೂರು : ಯುವಜನರಲ್ಲಿ ಸಾಮಾಜಿಕ ಸೇವಾ ಪ್ರಜ್ಞೆಯನ್ನು ಘೋಷಿಸುವ ’ಉತ್ತಮನಾಗುಉಪಕಾರಿಯಾಗು’ ಎಂಬ ಸ್ವಾಮಿ ವಿವೇಕಾನಂದರಜೀವನ ಸಂದೇಶವನ್ನು ಸಾರುವ ಬೃಹತ್‌ಯುವಅಭಿಯಾನಕ್ಕೆ‘Be Good Do Good-2020’ ಇದೇ ಬರುವಜನವರಿ 17 ರಂದು, ಮಂಗಳೂರಿನಲ್ಲಿ, ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೋ. ಪಿ.ಎಸ್‌ಯಡಪಡಿತ್ತಾಯರು ಚಾಲನೆ ನೀಡಲಿದ್ದಾರೆ.

ಸ್ವಾಮಿ ವಿವೇಕಾನಂದರ 157 ನೇ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನದ ಅಂಗವಾಗಿ ‘Be Good Do Good-2020’ಅಭಿಯಾನಕ್ಕೆ ಚಾಲನೆ ದೊರೆಯಲಿದೆ.ಯುವಕ-ಯುವತಿಯರು ಸ್ವಾಮಿ ವಿವೇಕಾನಂದರುಯುವಜನರಿಗೆ ನೀಡಿದ ’ಉತ್ತಮನಾಗು-ಉಪಕಾರಿಯಾಗು’ (Be Good Do Good) ಎಂಬ ಸಂದೇಶವನ್ನುತಾವು ಪಾಲನೆ ಮಾಡುವ ಸಂಕಲ್ಪತೊಡಲಿದ್ದಾರೆ.ಜನವರಿ 12, 2020  ರಿಂದ 26 ಜನವರಿ 2020 ರವರೆಗೆ 2 ವಾರ ನಡೆಯಲಿರುವ ಈ ಬೃಹತ್‌ಯುವಅಭಿಯಾನದಲ್ಲಿ ಸುಮಾರು 6 ಲಕ್ಷ ಯುವಕ-ಯುವತಿಯರು ಭಾಗವಹಿಸಲಿದ್ದಾರೆ.

ಸಾಮಾಜಿಕ ಸಂಸ್ಥೆ ’ಸಮರ್ಥ ಭಾರತ’ ಈ ಯುವಅಭಿಯಾನವನ್ನು ಆಯೋಜಿಸಿದೆ.

ಕಾಲೇಜು ವಿದ್ಯಾರ್ಥಿಗಳು, ಯುವ ಉದ್ಯೋಗಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ತಮ್ಮ ವೈಯಕ್ತಿಕಜೀವನದಲ್ಲಿ ಉತ್ತಮಗುಣ ಸ್ವಾಭಾವಗಳನ್ನು ಮೈಗೂಡಿಸುವುದರ ಜತೆಗೆ ಸಾಮಾಜಿಕವಾಗಿ ಉಪಯೋಗವಾಗುವ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು ಈ ಅಭಿಯಾನದಉದ್ದೇಶ. ಹೆಚ್ಚಿನ ಯುವ ಜನತೆಯನ್ನು ಸ್ಪೂರ್ತಿದಾಯಕ ಕಾರ್ಯಗಳಿಗೆ ಪ್ರೇರೇಪಿಸಿ ಈ ಮೂಲಕ ಅನೇಕ ಇತರರಿಗೆ ಆದರ್ಶ ವ್ಯಕ್ತಿಗಳಾಗುವ ಮೂಲಕ ಉತ್ತಮ-ಉಪಕಾರಿಯಾಗು ಎಂಬ ಪರಂಪರೆಯನ್ನು ನಿರ್ಮಿಸುವ ಆಶಯವನ್ನು ಈ ಅಭಿಯಾನ ಹೊಂದಿದೆ. ಈ ಸಂದೇಶವು ಹೆಚ್ಚಿನ ಯುವ ಜನತೆಗೆ ತಲುಪಲು ತಂತ್ರಜ್ಞಾನಾಧಾರಿತ ವೇದಿಕೆಗಳಾದ ಸಮರ್ಥ ಭಾರತ ವೆಬ್‌ಸೈಟ್, ಸಾಮಾಜಿಕ ಜಾಲತಾಣಗಳು, ವಾಟ್ಸಪ್ ಮತ್ತುಎಸ್‌ಎಮ್‌ಎಸ್ ಗಳನ್ನು ಬಳಸುವ ಮೂಲಕ #BeGoodDoGood ಅಭಿಯಾನದ ಪ್ರಚಾರ ನಡೆಸಲಾಗುತ್ತಿದೆ. ಇದಲ್ಲದೇ ಈ ವೇದಿಕೆಗಳು ಸ್ಪೂರ್ತಿದಾಯಕ ಅನುಭವಗಳನ್ನು ಹಂಚಿಕೊಳ್ಳಲೂ ಲಭ್ಯವಿರುತ್ತದೆ.

ಈ ವರ್ಷಅಭಿಯಾನವು ವೈಯಕ್ತಿಕ ಹಾಗೂ ಸಾಮಾಜಿಕ ಜೀವನಕ್ಕೆ ಸಂಬಂಧಪಟ್ಟ ಮೂರು ವಿಷಯಗಳ ಕುರಿತುಜಾಗೃತಿಯನ್ನು ಮೂಡಿಸಿ, ಯುವಜನರು ಸಾಮಾಜಿಕವಾಗಿ ಉಪಯೋಗವಾಗುವ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದೆ.

೧. ಜಲ ಸಂರಕ್ಷಣೆ-Save Water
೨. ಆರೋಗ್ಯಕರಆಹಾರ ಪದ್ಧತಿ-Eat Healthy
೩. ಎಲ್ಲರನ್ನೂ ಗೌರವಿಸಿ – Respect Everyone

ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ:

ವಿಷಯ:-
೧. 21ನೇ ಶತಮಾನದಯುವಜನತೆಗೆ ಸ್ವಾಮಿ ವಿವೇಕಾನಂದರ ಸಂದೇಶ
Message of Swami Vivekananda for 21st Century Youth
೨. ಸ್ವಾಮಿ ವಿವೇಕಾನಂದರ ವಿಚಾರ ಹಾಗೂ ರಾಷ್ಟ್ರೀಯತೆ
Swami Vivekananda’s thoughts and Nationalism
೩. ಮಹಿಳೆ: ಸ್ವಾಮಿ ವಿವೇಕಾನಂದರ ಪರಿಕಲ್ಪನೆ
Women: Perspective of Swami Vivekananda

ಪದವಿ ಯಾತತ್ಸಮಾನ, ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಬಹುಮಾನ
ಪ್ರಥಮ: ರೂ. 10,000 ಮತ್ತು ಪ್ರಮಾಣ ಪತ್ರ
ದ್ವಿತೀಯ: ರೂ. 7,500 ಮತ್ತು ಪ್ರಮಾಣ ಪತ್ರ
ತೃತೀಯ: ರೂ. 5,000 ಮತ್ತು ಪ್ರಮಾಣ ಪತ್ರ
ಮತ್ತುತಲಾರೂ. 1,000 ದಂತೆ 20 ಸಮಾಧಾನಕರ ಬಹುಮಾನಗಳು
ಬ ಮೇಲೆ ತಿಳಿಸಿದ ವಿಷಯಗಳ ಪೈಕಿ ಯಾವುದಾದರೂಒಂದು ವಿಷಯದಕುರಿತುಕನ್ನಡಅಥವಾಇಂಗ್ಲೀಷ್ ಭಾಷೆಯಲ್ಲಿ 2500 ಪದಗಳ ಮಿತಿಯಲ್ಲಿ ಪ್ರಬಂಧವನ್ನು ಸ್ವಹಸ್ತಾಕ್ಷರದಲ್ಲಿ ಬರೆದು ಈ ಕೆಳಗಿನ ವಿಳಾಸಕ್ಕೆ ಜನವರಿ 21,2020 ರ ಒಳಗಾಗಿ ಕಳುಹಿಸಿ ಕೊಡಬೇಕಾಗಿ ವಿನಂತಿ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English