ಮಂಗಳೂರು : ಮಹಿಳಾ ಉದ್ಯಮಿಗಳ ವೇದಿಕೆ ಪವರ್ ಸಂಸ್ಥೆಯ ವತಿಯಿಂದ ಬೀಡಿನ ಗುಡ್ಡೆಯ ಮಹಾತ್ಮಾಗಾಂಧಿ ಬಯಲು ರಂಗಮಂದಿರದಲ್ಲಿ ಮೂರು ದಿವಸಗಳು ಜರುಗಿದ ಪವರ್ ಪರ್ಬ-2020 ಉದ್ಘಾಟನೆ ಕಾರ್ಯಕ್ರಮದಲ್ಲಿ ವಿಶ್ವ ಕೊಂಕಣಿ ಸ್ತ್ರೀ ಶಕ್ತಿ ಮಿಶನ್ ಕರಕುಶಲ ವಸ್ತು ಪ್ರದರ್ಶಿನಿ ಸ್ಟಾಲಗಳನ್ನು ಕೂಡಾ ದಿ. 10-01-2020 ರಂದು ಪವರ ಪರ್ಬ ಮಹಿಳಾ ಸಶಕ್ತೀಕರಣ ಮುಖ್ಯಸ್ಥೆ ಶ್ರೀಮತಿ ರೇಣುಕಾ ಜಯರಾಮ ದೀಪ ಬೆಳಗಿಸಿ ಉದ್ಘಾಟಿಸಿದರು.
ಕರಕುಶಲ ವಸ್ತು ಪ್ರದರ್ಶನದಿಂದ ಹಲವಾರು ಮಹಿಳೆಯರಿಗೆ ತಮ್ಮ ಪ್ರತಿಭೆಯನ್ನು ಹಾಗೂ ಕರಕುಶಲ ವಸ್ತುಗಳನ್ನು ಪ್ರದರ್ಶಿಸಲು ಸಹಾಯವಾಗಿದೆ ಎಂದು ಹೇಳಿದರು.
ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷ ಶ್ರೀ ಬಸ್ತಿ ವಾಮನ ಶೆಣೈ ಮಾತನಾಡಿ ಕೊಂಕಣಿ ಭಾಷಿಕ ಸ್ತ್ರೀಯರು ಮುಖ್ಯವಾಗಿ ಯುವತಿಯರಿಗೆ ವಿಶ್ವ ಕೊಂಕಣಿ ಕೇಂದ್ರದಲ್ಲಿ ಹೊಲಿಗೆ ಹಾಗೂ ಕರಕುಶಲ ಕಲೆಗಳಲ್ಲಿ ತರಬೇತಿಯನ್ನಿತ್ತು ಅವರು ಸ್ವಾವಲಂಬಿಗಳಾಗಿ ಸ್ವಶಕ್ತಿಯಿಂದ ಜೀವನದಲ್ಲಿ ಆರ್ಥಿಕವಾಗಿ ಮುಂದೆ ಬರಲು ವಿಶ್ವ ಕೊಂಕಣಿ ಕೇಂದ್ರ ದಿಂದ ಹೊಲಿಗೆ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ಮತ್ತು ತರಬೇತಿ ಪಡೆದ ಅನೇಕ ಸ್ತ್ರೀ ಹಾಗೂ ಯುವತಿಯರಿಗೆ ಸ್ವ ಉದ್ಯೋಗ ಕೈಗೊಂಡಿರುವುದು ಹೆಮ್ಮೆಯೆನಿಸುತ್ತದೆ ಎಂದು ಹೇಳಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ರಿಜಿಸ್ಟ್ರಾರ್ ಡಾ. ಬಿ. ದೇವದಾಸ ಪೈ, ವಿಶ್ವ ಕೊಂಕಣಿ ಸ್ತ್ರೀ ಶಕ್ತಿ ಮಿಶನ ಸಂಚಾಲಕಿ ಶ್ರೀಮತಿ ಗೀತಾ ಸಿ. ಕಿಣಿ, ವಿಶ್ವ ಕೊಂಕಣಿ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯೆ ಶ್ರೀಮತಿ ಮೀನಾಕ್ಷಿ ಎನ್. ಪೈ, ಶ್ರೀಮತಿ ರೇಖಾ ಪಿ. ಕಾಮತ್, ಶ್ರೀಮತಿ ಸುಗುಣಾ ಕಾಮತ, ವಿಶ್ವ ಕೊಂಕಣಿ ಸ್ತ್ರೀ ಶಕ್ತಿ ಮಿಶನ್ ಹೊಲಿಗೆ ತರಬೇತಿ ಶಿಬಿರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English