ಟೀಂ ಇಂಡಿಯಾ ಹಿರಿಯ ಅಭಿಮಾನಿ ಚಾರುಲತಾ ಪಟೇಲ್ ವಿಧಿವಶ

2:23 PM, Thursday, January 16th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

charulatha

ನವದೆಹಲಿ : 2019ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದಿದ್ದ ಪುರುಷರ ಕ್ರಿಕೆಟ್ ವಿಶ್ವಕಪ್ ವೇಳೆ ಸಾಕಷ್ಟು ಸುದ್ದಿ ಮಾಡಿದ್ದ ಟೀಂ ಇಂಡಿಯಾ ಹಿರಿಯ ಅಭಿಮಾನಿ ಚಾರುಲತಾ ಪಟೇಲ್ ವಿಧಿವಶರಾಗಿದ್ದಾರೆ.

87 ವರ್ಷದ ಚಾರುಲತಾ ಪಟೇಲ್ ಅವರು ವಿಶ್ವಕಪ್ ಪಂದ್ಯದ ವೇಳೆ ಭಾರಿ ಜನಪ್ರೀಯತೆ ಪಡೆದಿದ್ದ ಸೂಪರ್ ಫ್ಯಾನ್ ಅಜ್ಜಿ ಜನವರಿ 13ರಂದು ಮೃತರಾಗಿದ್ದಾರೆ. ಈ ಬಗ್ಗೆ ಬಿಸಿಸಿಐ ತನ್ನ ಟ್ವಿಟ್ಟರ್ ನಲ್ಲಿ ಪ್ರಕಟಿಸಿದೆ.

ವಿಶ್ವಕಪ್ ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯ ವೀಕ್ಷಣೆಗೆ ಮೈದಾನಕ್ಕೆ ಆಗಮಿಸಿದ್ದ ಅಜ್ಜಿ ಬಹಳ ಹುರುಪಿನಲ್ಲಿ ಪಾಲ್ಗೊಂಡಿದ್ದರು. ಟಿವಿ ಸ್ಕ್ರೀನ್ ನಲ್ಲಿ ಅಜ್ಜಿ ಕಾಣಿಸಿಕೊಳ್ಳುತ್ತಿದ್ದಂತೆ ಭಾರಿ ಪ್ರಸಿದ್ದಿ ಪಡೆದಿದ್ದರು. ಚಾರುಲತಾ ಪಟೇಲ್ ಇಂಟರ್ನೆಟ್ ಸೆನ್ಸೇಶನ್ ಆಗಿದ್ದರು.

ಪಂದ್ಯದ ನಂತರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಅಜ್ಜಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು.

ತ್ರಿವರ್ಣ ಧ್ವಜದೊಂದಿಗೆ ಮೈದಾನಕ್ಕೆ ಆಗಮಿಸಿದ್ದ ಅಜ್ಜಿತುತ್ತೂರಿ ಊದುತ್ತಾ ಸಂಭ್ರಮಿಸುತ್ತಿದ್ದ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಈ ಫೋಟೋವನ್ನು ಪೋಸ್ಟ್ ಮಾಡಿದ್ದ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ‘’ ವಿಶ್ವಕಪ್ ನ ಚಿತ್ರ’’ ಎಂದು ಬಣ್ಣಿಸಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English