ಮೈಸೂರು : ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮೈಸೂರು ವಿಭಾಗ ಮಟ್ಟದ ಕಛೇರಿಯ ಉದ್ಘಾಟನೆಯನ್ನು ಜಿಲ್ಲಾಧಿಕಾರಿಗಳ ಕಛೇರಿ ವಿನೋಬ ರಸ್ತೆ, ಕೊಠಡಿ ಸಂಖ್ಯೆ-2ರಲ್ಲಿ ಮಕ್ಕಳ ಕೈನಲ್ಲೇ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಡಾ.ಅಂಥೋಣಿ ಸೆಬಾಸ್ಟಿಯನ್ ನೆರವೇರಿಸಿದರು.
ಈ ಸಂದರ್ಭ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕುರಿತು ಡಾ.ಅಂಥೋಣಿ ಸೆಬಾಸ್ಟಿಯನ್ ಮಾಹಿತಿ ನೀಡಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮಕ್ಕಳ ನ್ಯಾಯ ಕಾಯ್ದೆ-2015ರ ಹಾಗೂ ಶಿಕ್ಷಣ ಹಕ್ಕಿಗೆ ಪೂರಕವಾಗಿ ಉಸ್ತುವಾರಿಯನ್ನು ಮಾಡುತ್ತಾ ಸಮಗ್ರ ಬದಲಾವಣೆಯನ್ನು ಸಮಾಜದೊಳಗೆ ತರುತ್ತಾ ಮಕ್ಕಳನ್ನೊಳಗೊಂಡಂತೆ ಮಾನವೀಯ ತುಡಿತದಿಂದ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಕುಟುಂಬ ಮಕ್ಕಳೊಡನೆ ಕೆಲಸ ಮಾಡುವ ಸಂಸ್ಥೆಗಳು ವಿವಿಧ ಹಿನ್ನೆಲೆಯ ಮಕ್ಕಳ ಪೋಷಣೆ, ಹಾರೈಕೆ, ರಕ್ಷಣೆ, ಅಗತ್ಯ ಅವಶ್ಯಕತೆಗಳ ಪೂರೈಕೆ, ಮನೆಯನ್ನು ತೊರೆದವರು, ಭಿಕ್ಷಾಟನೆಗೆ ನೂಕಲ್ಪಟ್ಟವರು, ಹಿಂಸೆಗೆ ಒಳಪಟ್ಟವರು, ಅವರೆಲ್ಲರ ರಕ್ಷಣೆಯೇ ಈ ಕಾಯ್ದೆಯ ಮೂಲ ತತ್ವಗಳಲ್ಲಿ ಪ್ರಮುಖವಾದದ್ದು. ಅಂತೆಯೇ ಮಕ್ಕಳ ನ್ಯಾಯ ಈಗ ಹಿಂದಿನದಕ್ಕಿಂತ ಪ್ರಸ್ತುತವಾಗಿದೆ.
ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ, ಭಾರತ ಸಂವಿಧಾನ, ರಾಷ್ಟ್ರೀಯ ಮಕ್ಕಳ ನೀತಿ-2013, ಮಕ್ಕಳ ಕಾರ್ಯಕ್ರಮಗಳು, ಯೋಜನೆಗಳು ಇವೆಲ್ಲಾವುಗಳ ವಿಚಾರವನ್ನು ಅಂತಃಕರಣ ಪೂರಿತವಾಗಿ ವ್ಯವಸ್ಥೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಮಕ್ಕಳ ಹಕ್ಕುಗಳ ಆಯೋಗವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಶೋಷಿತ ಜಗತ್ತಿನಲ್ಲಿ ಮಕ್ಕಳನ್ನು ಮಾರುವುದು, ಕೊಳ್ಳುವುದು, ಮಕ್ಕಳ ಮೇಲೆ ವಿವಿಧ ರೀತಿಯ ಹೊಡೆತ ಶೋಷಣೆ, ಅತ್ಯಾಚಾರ, ಮೋಸ, ವಂಚನೆ ಇವುಗಳನ್ನು ಬುಡಮಟ್ಟದಲ್ಲಿಯೇ ಅಲುಗಾಡಿಸುವ ನಿಟ್ಟಿನಲ್ಲಿ ಆಯೋಗವು ಸಮಸ್ತ ಜನರನ್ನು ಒಳಗೊಂಡಂತೆ ಕಾರ್ಯನಿರ್ವಹಿಸುತ್ತದೆ. ಮಕ್ಕಳ ಸ್ನೇಹಿ ಮಕ್ಕಳ ರಕ್ಷಣೆಗೆ ಪೂರಕವಾದಂತಹ ಸಹಾಯವಾಣಿಗಳು ದತ್ತು ಪ್ರಕ್ರಿಯೆಗಳು, ಮಾದಕ ವಸ್ತುಗಳಿಂದ ದೂರವಿರುವಿಕೆ, ಬಾಲ್ಯವಿವಾಹ ಇವುಗಳನ್ನೆಲ್ಲ ತಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವ ಪ್ರವೃತವಾಗಿದೆ ಎಂದರು.
Click this button or press Ctrl+G to toggle between Kannada and English