ರಾಸಾಯನಿಕ ದ್ರವ ರೂಪದ ವೈನ್ ಮಾರಾಟ : ಸೂಕ್ತ ಕ್ರಮಕ್ಕೆ ಮಡಿಕೇರಿ ರಕ್ಷಣಾ ವೇದಿಕೆ ಆಗ್ರಹ

4:40 PM, Thursday, January 16th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

pavan

ಮಡಿಕೇರಿ : ಇತ್ತೀಚೆಗೆ ನಡೆದ ಜಿಲ್ಲಾ ಅಭಿವೃದ್ಧಿ ಮತ್ತು ಅಧಿಕಾರಿಗಳ ಸಮನ್ವಯ ಸಭೆಯಲ್ಲಿ ನಕಲಿ ಚಾಕಲೇಟ್ ದಂಧೆಯನ್ನು ತಕ್ಷಣ ಮಟ್ಟ ಹಾಕುವ ಕುರಿತು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ವ್ಯಕ್ತಪಡಿಸಿದ ನಿಲುವನ್ನು ಮಡಿಕೇರಿ ರಕ್ಷಣಾ ವೇದಿಕೆ ಸ್ವಾಗತಿಸುತ್ತದೆ ಮತ್ತು ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಶಾಸಕರು ತೆಗೆದುಕೊಂಡ ನಿಲುವನ್ನು ಅಭಿನಂದಿಸುತ್ತದೆ ಎಂದು ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹೊರರಾಜ್ಯದವರು ಕೊಡಗಿನಲ್ಲಿ ತಂದು ಮಾರಾಟ ಮಾಡುತ್ತಿರುವ ನಕಲಿ ಚಾಕಲೇಟ್ ದಂಧೆಯಿಂದಾಗಿ ರಾಷ್ಟ್ರಮಟ್ಟದಲ್ಲಿ ಕೊಡಗಿನ ಹೆಸರು ಹಾಳಾಗುತ್ತಿದ್ದು, ಕೊಡಗಿನಲ್ಲಿರುವ ನೈಜ ಹೋಂ ಮೇಡ್ ತಿನಿಸುಗಳ ತಯಾರಕರಿಗೆ ತೀವ್ರ ಹೊಡೆತ ಬಿದ್ದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ಕಡೆ ಮಾರಾಟವಾಗುತ್ತಿರುವ ಹೋಂ ಮೇಡ್ ವೈನ್ ಹೆಸರಿನ ರಾಸಾಯನಿಕ ದ್ರವದ ಕುರಿತು ಕೂಡ ಸಮಗ್ರ ತನಿಖೆ ಕೈಗೊಂಡು ಇವುಗಳ ಮೂಲ, ಇದನ್ನು ಕೊಡಗಿನಲ್ಲಿ ಮಾರಾಟ ಮಾಡುತ್ತಿರುವ ಜಾಲಗಳು ಯಾವುದು ಮತ್ತು ಇಲ್ಲಿಂದ ಬಂದ ಆದಾಯವನ್ನು ತೆರಿಗೆ ತಪ್ಪಿಸಿ ಯಾವ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎನ್ನುವ ಕುರಿತು ತನಿಖೆಯಾಗಬೇಕು ಎಂದು ಪವನ್ ಪೆಮ್ಮಯ್ಯ ಒತ್ತಾಯಿಸಿದ್ದಾರೆ.

ಇಲ್ಲಿಯವರೆಗೆ ನಡೆದಿರುವ ದಂಧೆಯ ಕುರಿತು ಎಲ್ಲಾ ಮಾಹಿತಿಗಳನ್ನು ಸಂಬಂಧಪಟ್ಟ ಇಲಾಖೆಗೆ ಮಡಿಕೇರಿ ರಕ್ಷಣಾ ವೇದಿಕೆ ನೀಡಿದ್ದರೂ ಎನೂ ಕ್ರಮ ಕೈಗೊಳ್ಳದೆ ಜನರ ಆರೋಗ್ಯದ ಜೊತೆಯಲ್ಲಿ ಚೆಲ್ಲಾಟವಾಡುತ್ತಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಸರಕಾರವನ್ನು ಆಗ್ರಹಿಸಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English