ಹುಬ್ಬಳ್ಳಿ : ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದಲ್ಲಿ ಜ. 18ರಂದು ನಡೆಯಲಿರುವ ಬೃಹತ್ ಸಭೆಗೆ ಹುಬ್ಬಳ್ಳಿ ಸಂಪೂರ್ಣ ಕೇಸರಿಮಯಗೊಳ್ಳಲಿದೆ.
ಈಗಾಗಲೇ ಐ ಸಪೋರ್ಟ್ ಸಿಎಎ ಎಂದು ಬರೆದಿರುವ 50 ಸಾವಿರ ಕೇಸರಿ ಟೊಪ್ಪಿಗಳು ಸಿದ್ಧಗೊಂಡಿದ್ದು, 20 ಸಾವಿರ ಬಿಜೆಪಿ ಧ್ವಜಗಳು ತಯಾರಾಗಿವೆ. ಈ ಧ್ವಜಗಳನ್ನು ಕಟ್ಟುವುದಕ್ಕಾಗಿ ಕಟ್ಟಿಗೆ ಬಡಿಗೆ ಸಿದ್ಧಗೊಳ್ಳುತ್ತಿವೆ.
ವಿಮಾನ ನಿಲ್ದಾಣದಿಂದ ಅಂಬೇಡ್ಕರ ವೃತ್ತದವರೆಗಿನ ಮಾರ್ಗದುದ್ದಕ್ಕೂ ಬಿಜೆಪಿ ಧ್ವಜ, ಹೋರ್ಡಿಂಗ್ಗಳು ರಾರಾಜಿಸಲಿವೆ.
ನೆಹರು ಮೈದಾನದಲ್ಲಿ 40 ಅಡಿ ಉದ್ದ ಹಾಗೂ 60 ಅಡಿ ಅಗಲದ ಮುಖ್ಯ ವೇದಿಕೆ ಹಾಕಲಾಗಿದ್ದು, ಅದರ ಪಕ್ಕ ಮತ್ತೊಂದು ಚಿಕ್ಕದಾದ ವೇದಿಕೆ ಸಿದ್ಧಪಡಿಸಲಾಗಿದೆ. ಮಧ್ಯಾಹ್ನ 2.30 ರಿಂದ 4.30ರವರೆಗೆ ಚಿಕ್ಕ ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ನಂತರ ಈ ವೇದಿಕೆಯಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಪಕ್ಷದ ಮುಖಂಡರು ಆಸೀನರಾಗಲಿದ್ದಾರೆ.
ಮುಖ್ಯ ವೇದಿಕೆಯಲ್ಲಿ ಆಸೀನರಾಗುವುದಕ್ಕೆ 30 ಗಣ್ಯರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಹಾಗೂ ರಾಜ್ಯ ಸಚಿವರು ವೇದಿಕೆಯಲ್ಲಿ ಆಸೀನರಾಗಲಿದ್ದಾರೆ.
ಮೈದಾನದಲ್ಲಿ ಮಹಿಳೆಯರಿಗೆ, ಸಾಮಾನ್ಯ ಜನರಿಗೆ ಹಾಗೂ ಗಣ್ಯರಿಗೆ ಪ್ರತ್ಯೇಕ ಆಸನಗಳನ್ನು ಹಾಕಲಾಗುತ್ತಿದೆ.
ಮೈದಾನದಲ್ಲಿ 4 ಎಲ್ಇಡಿ ಪ್ರೊಜೆಕ್ಟ್ಗಳನ್ನು ಅಳವಡಿಸಲಾಗುತ್ತಿದ್ದು, ಮುಖ್ಯ ವೇದಿಕೆಯಲ್ಲಿಯೂ ದೊಡ್ಡ ಪ್ರೊಜೆಕ್ಟರ್ ಅಳವಡಿಸುವ ಸಾಧ್ಯತೆ ಇದೆ. ಪಕ್ಕದ ಕೃಷ್ಣ ಭವನ ಹಾಗೂ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಬಳಿಯೂ ಎಲ್ಇಡಿ ಪ್ರೊಜೆಕ್ಟರ್ಗಳನ್ನು ಅಳವಡಿಸುವ ಸಿದ್ಧತೆ ನಡೆದಿದೆ.
ಜನಜಾಗೃತಿ ಸಭೆಯ ಪ್ರಚಾರಕ್ಕಾಗಿ ಪ್ರತಿ ಮಂಡಳ ವ್ಯಾಪ್ತಿಯಲ್ಲಿ ತಲಾ 2 ಆಟೊಗಳನ್ನು ಪ್ರಚಾರಕ್ಕೆ ಮೀಸಲಿರಿಸಲಾಗಿದೆ.
* ಸಿಆರ್ಪಿಎಫ್ ಆಗಮನ: ಅಮಿತ್ ಷಾ ಆಗಮಿಸುತ್ತಿರುವುದರಿಂದ ವಿಶೇಷ ಭದ್ರತೆಗಾಗಿ ಸಿಆರ್ಪಿಎಫ್ನ ಒಂದು ತಂಡ ಗುರುವಾರ ಸಂಜೆ ಹುಬ್ಬಳ್ಳಿಗೆ ಆಗಮಿಸಿದೆ. ಶುಕ್ರವಾರ ಇನ್ನೂ ಹೆಚ್ಚಿನ ಭದ್ರತಾ ಸಿಬ್ಬಂದಿ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.
Click this button or press Ctrl+G to toggle between Kannada and English