ನವದೆಹಲಿ : ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋದ ನೂತನ ಸ್ವದೇಶಿ ನಿರ್ಮಿತ ಉಪಗ್ರಹ ಜಿಸ್ಯಾಟ್ -30ಯನ್ನು ಫ್ರೆಂಚ್ ಗಯಾನದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ.
ಫ್ರೆಂಚ್ ಗಯಾನದ ಕರೌ ಉಡಾವಣಾ ನೆಲೆಯಿಂದ ‘ಎರಿಯಾನ್-5 ವಿಎ-251’ ರಾಕೆಟ್ ಮೂಲಕ ಶುಕ್ರವಾರ ಮುಂಜಾನೆ ಉಡಾವಣೆ ಮಾಡಲಾಗಿದೆ.
ದೂರದರ್ಶನ ಪ್ರಸಾರ, ಟಿಲಿಕಮ್ಯುನಿಕೇಶನ್ಸ್, ಡಿಟಿಎಚ್ ಮತ್ತು ಇತರ ಪ್ರಸಾರ ಕ್ಷೇತ್ರಗಳ ಗುಣಮಟ್ಟ ಹೆಚ್ಚಿಸಲು ಈ ಉಪಗ್ರಹ ನೆರವಾಗಲಿದೆ.
ಶುಕ್ರವಾರ ನಸುಕಿನ 2.35ರ ಸಮಯದಲ್ಲಿ ಯಶಸ್ವಿ ಉಡಾವಣೆ ಮಾಡಲಾಗಿದ್ದು, ಇಸ್ರೋದ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ.
ಏರಿಯಾನ್ ಸ್ಪೇಸ್ ನ ಏರಿಯಾನ್- 5 ವಾಹನವು ಜಿಸ್ಯಾಟ್ -30 ಜತೆಗೆ ಯೂಟೆಲ್ ಸ್ಯಾಟ್ ಕನೆಕ್ಟ್ ಎಂಬ ಮತ್ತೊಂದು ಉಪಗ್ರಹವನ್ನು ಹೊತ್ತು ಕಕ್ಷೆ ಸಾಗಿದೆ. ಏರಿಯಾನ್ 5 ವಾಹನವು 38 ನಿಮಿಷಗಳಲ್ಲಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ.
Click this button or press Ctrl+G to toggle between Kannada and English