ವಾಷಿಂಗ್ಟನ್ : ಕಳೆದ ತಿಂಗಳು ಕಾಣೆಯಾಗಿದ್ದ ಭಾರತದ ಮೂಲದ ಅಮೆರಿಕದಲ್ಲಿ ತನ್ನದೇ ಕಾರಿನಲ್ಲಿ ಶವವಾಗಿ ಪತ್ತೆಯಾದ ಘಟನೆ ಅಮೆರಿಕದಲ್ಲಿ ನಡೆದಿದೆ.
ಸುರೀಲ್ ದಾಬಾವಾಲಾ(34) ಕಾಣೆಯಾದ ಯುವತಿ. ಚಿಕಾಗೋದ ಲೊಯೊಲಾ ವಿಶ್ವವಿದ್ಯಾಲಯದಲ್ಲಿ ಎಂಬಿಎ ಓದುತ್ತಿದ್ದ ಸುರೀಲ್ 2019, ಡಿ.30ರಂದು ಕಾಣೆಯಾಗಿದ್ದಳು. ಆಕೆಗಾಗಿ ಪೋಷಕರು ಹುಡುಕಾಟ ನಡೆಸಲು ಶುರು ಮಾಡಿದ್ದರು.
ಹಲವು ದಿನ ಹುಡುಕಾಟ ನಡೆಸಿದ ನಂತರ ಸುರೀಲ್‍ಳ ಮೃತದೇಹ ಬೆಡ್‍ಶೀಟ್‍ನಲ್ಲಿ ಸುತ್ತ ಸ್ಥಿತಿಯಲ್ಲಿ ಆಕೆಯ ಕಾರಿನಲ್ಲಿ ಪತ್ತೆಯಾಗಿತ್ತು. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾರನ್ನು ಬಂಧಿಸಿಲ್ಲ. ಸುರೀಲ್ ತಂದೆ ಮೂಲತಃ ಗುಜರಾತಿನವರಾಗಿದ್ದು, ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಸುರೀಲ್ ಕಾಣೆಯಾಗಿದ್ದಾಗ ಅವರ ಕುಟುಂಬದವರು ಹುಡುಕಿ ಕೊಟ್ಟವರಿಗೆ ಅಥವಾ ಮಾಹಿತಿ ನೀಡಿದವರಿಗೆ 7 ಲಕ್ಷ (10,000 ಡಾಲರ್) ನೀಡುವುದಾಗಿ ಘೋಷಿಸಿದ್ದರು.
ಸುರೀಲ್ ಸಾವಿಗೆ ಕಾರಣ ಏನೂ ಎಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ನಾವು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
Click this button or press Ctrl+G to toggle between Kannada and English