ಮಂಗಳೂರು : ಮಂಗಳೂರು ನಗರದ ಪಂಪ್‌ವೆಲ್ ಬಳಿ ಕಾರ್ಯಾಚರಿಸುತ್ತಿರುವ ನ್ಯಾಷನಲ್ ಮಾರುತಿ ಎಕ್ಸೆಲ್ ರೀಕಂಡಿಷನಿಂಗ್ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 12 ವರ್ಷ ಪ್ರಾಯದ ಬಾಲಕ ಪತ್ತೆಯಾಗಿರುತ್ತಾನೆ.
ಅಪ್ರಾಪ್ತ ವಯಸ್ಸಿನ ಬಾಲಕ ಗ್ಯಾರೇಜ್‌ನಲ್ಲಿ ಬಾಲಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಕುರಿತು ಚೈಲ್ಡ್‌ಲೈನ್-1098ಗೆ ದೂರು ಬಂದ ಮಾಹಿತಿಯಂತೆ, ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಬಾಲಕನನ್ನು ರಕ್ಷಣೆ ಮಾಡಲಾಗಿದ್ದು, ಈ ಬಾಲಕನನ್ನು ಬಿಹಾರದಿಂದ ಕೆಲಸಕ್ಕಾಗಿ ಗ್ಯಾರೇಜ್ ಮಾಲಕರು ಇಲ್ಲಿಗೆ ಕರೆತಂದಿದ್ದು, ಹಿಂದಿ ಭಾಷೆ ಮಾತನಾಡುತ್ತಿದ್ದು, ಇಲ್ಲಿಯ ತನಕ ಶಾಲೆಗೆ ಕೂಡ ಸೇರ್ಪಡೆ ಅಗಿರುವುದಿಲ್ಲ.
ಶಿಕ್ಷಣ ವಂಚಿತ ಬಾಲಕನ ಪೋಷಕರೂ ಕೂಡ ಜೊತೆಗೆ ಇರುವುದಿಲ್ಲ. ಬಾಲಕಾರ್ಮಿಕನಾಗಿರುವ ಈತನನ್ನು ರಕ್ಷಿಸಿಸಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿದ್ದು, ಸೂಕ್ತ ಪುನರ್ವಸತಿ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.
ಕಾರ್ಮಿಕ ಇಲಾಖೆಯ ಬಾಲಕಾರ್ಮಿಕ ಯೋಜನೆಯ ನಿರ್ದೇಶಕ ಶ್ರಿನಿವಾಸ್ ನಾಯಕ್, ಕಾರ್ಮಿಕ ಅಧಿಕಾರಿ ಮೇರಿ ಪ್ಯಾಟ್ರಿಕ್ ಡಾಯಸ್, ಚೈಲ್ಡ್‌ಲೈನ್-1098ನ ನಗರ ಸಂಯೋಜಕಿ ಲವೀಟಾ ಡಿ’ಸೋಜ, ಅಸುಂತಾ ಡಿ’ಸೋಜ ಬಾಲ ಕಾರ್ಮಿಕನ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Click this button or press Ctrl+G to toggle between Kannada and English