ಪುರಾತನ ಶ್ರೀ ಕಾಟೋಳಪ್ಪ ದೇವಾಲಯದ ಪುನರ್ ನಿರ್ಮಾಣ ಕಾರ್ಯ ಆರಂಭ : 25 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ

9:39 AM, Tuesday, January 21st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

temple

ಮಡಿಕೇರಿ : ಮುಕೋಡ್ಲುವಿನ ಆವಂಡಿ ಗ್ರಾಮದಲ್ಲಿ ಸುಮಾರು ಐದು ವರ್ಷಗಳ ಹಿಂದೆ ಮರಬಿದ್ದು ಹಾನಿಗೀಡಾಗಿದ್ದ ಪುರಾತನ ಶ್ರೀಕಾಟೋಳಪ್ಪ ದೇವಾಲಯದ ಪುನರ್ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದ್ದು, ಭೂಮಿಪೂಜೆ ನೆರವೇರಿಸಲಾಗಿದೆ.

ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ ಅವರು ಭೂಮಿ ಪೂಜೆ ನೆರವೇರಿಸಿ ಮಾತನಾಡಿ ದೇವಾಲಯದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಾಣಗೊಳ್ಳಲಿದ್ದು, ಸರ್ಕಾರದಿಂದ ಈಗಾಗಲೇ ರೂ.18 ಲಕ್ಷ ಅನುದಾನ ಬಿಡುಗಡೆಯಾಗಿದೆ. ಅನುದಾನ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ವೀಣಾಅಚ್ಚಯ್ಯ ಅವರ ಪ್ರಯತ್ನದ ಬಗ್ಗೆ ಗ್ರಾಮದ ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಕಳದ ಶಿಲ್ಪಿ ಮಣಿ ಅವರು ದೇವಾಲಯದ ಶಿಲ್ಪಕಾರ್ಯವನ್ನು ಕೈಗೊಂಡಿದ್ದು, ಏಪ್ರಿಲ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.
ತಕ್ಕ ಮುಖ್ಯಸ್ಥರಾದ ಹಂಚೆಟ್ಟಿರ ನಯನ ಚಂಗಪ್ಪ, ತಂಬುಕುತ್ತಿರ ಪೂವಯ್ಯ, ಕಾರ್ಯದರ್ಶಿ ಟಿ.ಎಂ.ಅಯ್ಯಪ್ಪ ಮತ್ತಿತರ ಪ್ರಮುಖರು ಹಾಗೂ ಗ್ರಾಮಸ್ಥರು ಭೂಮಿಪೂಜೆ ಸಂದರ್ಭ ಹಾಜರಿದ್ದರು.

ಹುತ್ತವೇ ದೇವರು
ಯಾವುದೇ ವಿಗ್ರಹಗಳಿಲ್ಲದೆ ದೊಡ್ಡ ಹುತ್ತವನ್ನಷ್ಟೇ ಹೊಂದಿರುವುದು ಶ್ರೀಕಾಟೋಳಪ್ಪ ದೇವಾಲಯದ ವಿಶೇಷವಾಗಿದ್ದು, ಸುಮಾರು ೬೨ ಏಕರೆ ಪ್ರದೇಶದ ದೇವರಕಾಡು ಸುತ್ತುವರೆದಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English