ಸುರತ್ಕಲ್ : ಬೀಚ್ ಗೆ ಇಳಿದ ನಾಲ್ವರು ನೀರುಪಾಲು, ಯುವತಿಗೆ ಗಂಭೀರ ಗಾಯ

10:15 AM, Tuesday, January 21st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

suratkal

ಮಂಗಳೂರು : ಇಲ್ಲಿಗೆ ಸಮೀಪದ ಎನ್ ಐಟಿಕೆ ಬೀಚಲ್ಲಿ ನೀರಾಟವಾಡುತ್ತಿದ್ದ ವೇಳೆ ನಾಲ್ವರು ನೀರು ಪಾಲಾಗಿದ್ದು ದೋಣಿಯಲ್ಲಿದ್ದ ಮೀನುಗಾರರು ಮೂವರ ರಕ್ಷಣೆ ಮಾಡಿದ್ದು ಈ ವೇಳೆ ಒಬ್ಬ ಯುವತಿ ಗಂಭೀರ ಗಾಯಗೊಂಡ ಘಟನೆ ದಿನಾಂಕ 20.01.2020 ರಂದು ನಡೆದಿದೆ.

ಆಂಧ್ರ ಮೂಲದ ವಿದ್ಯಾರ್ಥಿಗಳ ತಂಡ ವಿಹಾರಕ್ಕೆ ಆಗಮಿಸಿದ್ದು ಈ ವೇಳೆ ಸಮುದ್ರದ ಆಳದ ಅರಿವಿಲ್ಲದೆ ಇಳಿದಿದ್ದು ಅಲೆಗಳ ಹೊಡೆತಕ್ಕೆ ಸಿಲುಕಿ ನಾಲ್ವರು ಕೊಚ್ಚಿಹೋಗಿದ್ದಾರೆ. ಈ ವೇಳೆ ಮೂವರನ್ನು ರಕ್ಷಿಸಿದ್ದು ಯುವತಿ ಗಂಭೀರ ಗಾಯಗೊಂಡಿದ್ದಾಳೆ.

ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಘಟನಾ ಸ್ಥಳಕ್ಕೆ ಸುರತ್ಕಲ್ ಠಾಣಾ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English