ಬೆಂಗಳೂರು : ನಗರದ ಕೆಂಗೇರಿ ಸ್ಯಾಟಲೈಟ್ ಟೌನ ಸಂತ ಫ್ರಾನ್ಸಿಸ್ ಅಸೀಸಿ ಚರ್ಚ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ.
ಚರ್ಚ್ ಒಳಗೆ ನುಗ್ಗಿದ ಕೆಲವು ಕಿಡಿಗೇಡಿಗಳು, ಗಾಜಿನ ಆವರಣವನ್ನು ಪುಡಿಪುಡಿ ಮಾಡಿದ್ದು, ಕೆಲವು ಧಾರ್ಮಿಕ ವಸ್ತುಗಳ ಮೇಲೆ ದಾಳಿ ನಡೆಸಿದ್ದಾರೆ.
ಯಾರು ಯಾವಾಗ ಈ ಘಟನೆ ಮಾಡಿದ್ದಾರೆ ಎಂಬುದು ಇನ್ನು ಬೆಳಕಿಗೆ ಬಂದಿಲ್ಲ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚ್ನ ಗುರು ಫಾ.ಸತೀಶ್ ಅವರಿಂದ ಮಾಹಿತಿ ಪಡೆಯಲಾಗಿದ್ದು, ಚರ್ಚ್ ಸಿಸಿಟಿವಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚರ್ಚ್ ನಲ್ಲಿ ಕಳ್ಳತನಕ್ಕೆ ಯತ್ನಿಸಿ ಈ ಕೃತ್ಯ ನಡೆಸಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ತಡರಾತ್ರಿ ಚರ್ಚ್ಗೆ ಬಾಗಿಲು ಮುರಿದು ಕಳ್ಳರು ಒಳಗೆ ನುಗ್ಗಿದ್ದಾರೆ. ಪ್ರಾರ್ಥನಾ ಮಂದಿರದ ಒಳಗಿರುವ ಎರಡು ಕಪಾಟು ಒಡೆಯಲು ಯತ್ನಿಸಿದ್ದು, ಒಂದು ಕಪಾಟು ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ. ದುಷ್ಕರ್ಮಿಗಳ ಈ ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಚರ್ಚ್ ಮೇಲೆ ದಾಳಿ ನಡೆಸಿದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ಶಾಂತಗೊಳಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ.
Click this button or press Ctrl+G to toggle between Kannada and English