ಮಂಗಳೂರು :ಖಾಸಗಿ ರಂಗದ ಬ್ಯಾಂಕ್ ಗಳಲ್ಲಿ ಮುಂಚೂಣಿಯಲ್ಲಿರುವ ಕರ್ಣಾಟಕ ಬ್ಯಾಂಕ್ ತನ್ನ ನೂತನ 511ನೇ ಶಾಖೆಯನ್ನು ಕುಲಶೇಖರದಲ್ಲಿ ಆರಂಭಿಸಿತು, ಪ್ಲಾಮಾ ಡೆವಲಪರ್ಸ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಿ.ಎಂ.ಎ.ರಜಾಕ್ ನೂತನ ಶಾಖೆಯನ್ನು ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಮ ಭಟ್ ಮಾತನಾಡಿ, ಬ್ಯಾಂಕ್ ನಲ್ಲಿ ಲಭ್ಯವಿರುವ 25 ಲಕ್ಷದೊಳಗಿನ ಗೃಹ ಸಾಲದ ಬಡ್ಡಿ ದರವನ್ನು ಶೀಘ್ರವೇ ಶೇ.10.75ಕ್ಕೆ ಇಳಿಸಲಿದೆ. ಮುಂದಿನ ದಿನಗಳಲ್ಲಿ ಬ್ಯಾಂಕ್ ಶಾಖೆಯ ಸಂಖ್ಯೆಯನ್ನು 550ಕ್ಕೂ, ಎಟಿಎಂಗಳ ಸಂಖ್ಯೆಯನ್ನೂ 450ಕ್ಕೂ ಏರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಕುಲಶೇಖರ ಚರ್ಚ್ ನ ಧರ್ಮಗುರು ರೆ.ಫಾ.ವೆಲೆರೀಯನ್ ಪಿಂಟೊ ಮಾತನಾಡಿ, ಕರ್ಣಾಟಕ ಬ್ಯಾಂಕ್ ಖಾಸಗಿ ರಂಗದ ಬ್ಯಾಂಕ್ ಗಳಲ್ಲಿ ಮುಂಚೂಣಿಯಲ್ಲಿರುವ ಬ್ಯಾಂಕ್ ಆಗಿರುವುದರಿಂದ ಬಡಜನರಿಗೆ ಹೆಚ್ಚಿನ ಸಾಲ ಸೌಲಭ್ಯವನ್ನು ಒದಗಿಸಬೇಕು ಎಂದರು.
ಬ್ಯಾಂಕಿನ ಮಹಾ ಪ್ರಬಂಧಕ ಎಂ.ಎಸ್.ಮಹಾಬಲೇಶ್ವರ ಭಟ್, ಬ್ಯಾಂಕಿನ ನೌಕರ ಸಂಘದ ಅಧ್ಯಕ್ಷ ಶರತ್ ಹೊಳ್ಳ, ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ಫಾದರ್ ರಿಚರ್ಡ್ ಕುವೆಲ್ಲೋ, ಪ್ರಧಾನ ಕಾರ್ಯದರ್ಶಿ ಪಿ.ಆರ್.ಕಾರಂತ್, ಬ್ಯಾಂಕ್ ಅಧಿಕಾರಿಗಳ ಸಂಘದ ಕಾರ್ಯದರ್ಶಿ ರಾಘವ, ಉಪ ಮಹಾಪ್ರಬಂಧಕ ಕೆ.ಜಿ.ರಮೇಶ್ ರಾವ್, ಸಹಾಯಕ ಮಹಾಪ್ರಬಂಧಕ ಎನ್.ಆರ್.ರವಿಶಂಕರ್ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English