ಮಂಗಳೂರು : ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಬುಧವಾರ ಇಂದು ಮಧ್ಯಾಹ್ನ ಮಹಾಪೂಜೆಯ ನಂತರ ದೇವರು ರಥಾವಹಾರಣಗೊಂಡು ಸಂಜೆ ಮನ್ಮಹಾರಥೋತ್ಸವ ನಡೆಯಲಿದೆ.
ಜನವರಿ 15,2020 ರಂದು ಆರಂಭ ಗೊಂಡ ವಾರ್ಷಿಕ ಜಾತ್ರಾಮಹೋತ್ಸವ ಜನವರಿ 25 ರಂದು ಕೊನೆಗೊಳ್ಳಲಿದೆ.
ಬುಧವಾರ ಮಧ್ಯಾಹ್ನ 12ಗಂಟೆಗೆ ಮಹಾಪೂಜೆ ನಡೆದು, ಮಧ್ಯಾಹ್ನ 1.30ಕ್ಕೆ ದೇವರ ಉತ್ಸವಮೂರ್ತಿ ರಥಾರೋಹಣ ಗೊಳ್ಳಲಿದೆ
ಸಂಜೆ 6.30ಕ್ಕೆ ಮನ್ಮಹಾರಥೋತ್ಸವ, ಬೆಳ್ಳಿ ರಥೋತ್ಸವ ಇದಾದ ಬಳಿಕ ಚಂದ್ರಮಂಡಲ ಉತ್ಸವ, ಮಹಾಪೂಜೆ, ಭೂತಬಲಿ ಮತ್ತು ಕವಾಟ ಬಂಧನ ನಡೆ ಯಲಿದೆ.
ಗುರುವಾರ ಅವಭೃತಸ್ನಾನ: ದೇವಳದಲ್ಲಿ ಜ.23ರಂದು ಅವಭೃತಸ್ನಾನ ನಡೆಯಲಿದೆ. ಬೆಳಗ್ಗೆ 7ಕ್ಕೆ ಮಂಜುನಾಥ ದೇವರ ಕವಾಟೋದ್ಘಾಟನೆ ಮತ್ತು ಮಹಾಪೂಜೆ, ತುಲಾಭಾರ ಸೇವೆ, ಮಧ್ಯಾಹ್ನ 1ಕ್ಕೆ ಮಹಾಪೂಜೆ, ತ್ರಿಶೂಲ ಸ್ನಾನ ನಡೆಯಲಿದೆ. ರಾತ್ರಿ 7.30ಕ್ಕೆ ಉತ್ಸವ ಬಲಿ, ಚಂದ್ರಮಂಡಲ ಉತ್ಸವ, ರಾತ್ರಿ 10.30ಕ್ಕೆ ಅವಭೃತ ಸ್ನಾನ, ಧ್ವಜಾವರೋಹಣ ನಡೆಯಲಿದೆ.
ತಾ.25ರಂದು ಬೆಳಗ್ಗೆ 10ಗಂಟೆಗೆ ದೇಳವದಿಂದ ಮಲರಾಯ ದೈವದ ಭಂಡಾರ ಹೊರಡುವುದು, ಮಧ್ಯಾಹ್ನ 12ಕ್ಕೆ ಸಂಪ್ರೋಕ್ಷಣೆ, ಶ್ರೀ ಅಣ್ಣಪ್ಪ ದೈವಕ್ಕೆ ವಾರ್ಷಿಕ ಪರ್ವ, 9ಕ್ಕೆ ಮಲರಾಯ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ .
Click this button or press Ctrl+G to toggle between Kannada and English