ಮಂಗಳೂರು : ಪರ್ಯಾಯ ಪೂರೈಸಿ ಪ್ರಥಮ ಬಾರಿಗೆ ಮಂಗಳೂರಿಗೆ ಆಗಮಿಸಿದ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಯವರು ಇಂದು ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಸಂದರ್ಶನ ಗೈದರು.
ಪೂಜ್ಯ ಸ್ವಾಮೀಜಿಯವರನ್ನು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ. ಜೆ. ಶೆಟ್ಟಿಯವರು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಈ ಸಂದರ್ಭ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ಥಳೀಯ ಕಾರ್ಪೋರೇಟರ್ಗಳಾದ ಶ್ರೀಮತಿ ಶಕಿಲಾ ಕಾವ ಹಾಗೂ ಮನೋಹರ ಶೆಟ್ಟಿ, ಅಲ್ಲದೆ ದೇವಳದ ಕಾರ್ಯನಿರ್ವಹಣಾಧಿಕಾರಿ ಶ್ರಿಮತಿ ಜಯಮ್ಮ ಪಿ., ರತ್ನಾಕರ ಜೈನ್,ಅರ್ಚಕರಾದ ರಾಮಣ್ಣ ಅಡಿಗ, ಪ್ರಭಾಕರ ಅಡಿಗ, ರಾಘವೇಂದ್ರ ಅಡಿಗ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರಂಜನ್ ಕುಮಾರ್, ಪುಷ್ಪಲತಾ ಶೆಟ್ಟಿ, ಸುರೇಶ್ ಕುಮಾರ್ ಕದ್ರಿ ಅಲ್ಲದೆ ಕೃಷ್ಣ ಭಟ್ ಕದ್ರಿ, ಉಜಿರೆ ವಾಸುದೇವ ಭಟ್, ಪ್ರಭಾಕರ ರಾವ್ ಪೇಜಾವರ, ಸುಧಾಕರರಾವ್ ಪೇಜಾವರ, ಕ್ಷೇತ್ರದ ಸಿಬ್ಬಂದಿ ಅರುಣ್ ಕದ್ರಿ, ಮೊದಲಾದವರು ಉಪಸ್ಥಿತರಿದ್ದರು.
ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದ ಪಲಿಮಾರು ಶ್ರೀಗಳು ಸಂತಸ ವ್ಯಕ್ತಪಡಿಸಿದರು.
Click this button or press Ctrl+G to toggle between Kannada and English