ಚಿಕ್ಕಬಳ್ಳಾಪುರ : ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಇಂದು ಪೊಲೀಸರಿಗೆ ಶರಣಾಗಿರುವ ಆದಿತ್ಯ ರಾವ್ ಒಬ್ಬ ಭಯೋತ್ಪಾದಕನಾಗಿದ್ದು ಸರ್ಕಾರ ಆತನ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಬುಧವಾರ ಅರ್ಚಕರ ಹಾಗೂ ಆಗಮಿಕರ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಆರೋಪಿ ಈಗಾಗಲೇ ಪೊಲೀಸರಿಗೆ ಶರಣಾಗಿದ್ದು ಆತನ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಜಾತಿ-ಧರ್ಮ ನೋಡುವುದಿಲ್ಲ. ಆತ ಒಬ್ಬ ಭಯೋತ್ಪಾದಕ ಎಂದರು. ವಿಮಾನ ನಿಲ್ದಾಣದಲ್ಲಿ ಇಟ್ಟ ಬಾಂಬನ್ನು ಮಂಗಳೂರು ಪೊಲೀಸರು ಅತ್ಯಂತ ಚಾಣಕ್ಯತನಿಂದ ಭೇದಿಸಿ ಅದನ್ನು ನಿಷ್ಕ್ರಿಯಗೊಳಿಸಿದ್ದಾರೆ. ಇಲ್ಲದೇ ಹೋಗಿದ್ದರೆ ಸಾಕಷ್ಟು ಅನಾಹುತ ಆಗುತ್ತಿತ್ತು ಎಂದರು.
ಮಂಗಳೂರಿನಲ್ಲಿ ನಡೆಯುತ್ತಿರುವ ಹಲವು ದುಷ್ಕೃತ್ಯಗಳ ಹಿಂದೆ ಹೊರ ರಾಜ್ಯಗಳ ಕೈವಾಡ ಇರುವ ಶಂಕೆ ಇದೆ. ಈ ಬಗ್ಗೆ ಪೊಲೀಸರು ಎಲ್ಲ ದೃಷ್ಟಿಕೋನದಿಂದ ತನಿಖೆ ನಡೆಸುತ್ತಿದ್ದಾರೆ ಎಂದರು.
ಮಂಗಳೂರು ಬಾಂಬ್ ಪ್ರಕರಣವನ್ನು ಪೊಲೀಸರ ಅಣಕು ಪ್ರರ್ದಶನ, ಪಟಾಕಿ ಎಂದೆಲ್ಲಾ ಟೀಕೆ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಯನ್ನು ಟೀಕಿಸಿದ ಅವರು, ಬಾಂಬ್ ಇಟ್ಟವರನ್ನು ಮುಗ್ದರ ಸಾಲಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದರು. ರಾಜ್ಯ ಸರ್ಕಾರ ಬದಲಾಗಿರಬಹುದು. ಆದರೆ ಆಡಳಿತ ವರ್ಗ ಬದಲಾಗಿಲ್ಲ. ಇತಂಹ ಕೃತ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಣಿಸಲಿದೆ ಎಂದರು. ವಿರೋಧ ಪಕ್ಷಗಳು ಇತಂಹ ವಿಚಾರದಲ್ಲಿ ರಚನಾತ್ಮಕವಾಗಿ ಟೀಕೆ ಮಾಡಬೇಕು. ಅದು ಪೊಲೀಸರು, ಗಂಭೀರ ಪ್ರಕರಣಗಳನ್ನು ಅಪಹಾಸ್ಯ ಮಾಡಬಾರದು ಎಂದರು.
Click this button or press Ctrl+G to toggle between Kannada and English