ಬೆಂಗಳೂರು : ಮುಂದಿನ ಆಯವ್ಯದಲ್ಲಿ ಶಿಕ್ಷಣ, ನೀರಾವರಿ, ಗಂಗಾಕಲ್ಯಾಣ, ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುವುದು ಹಾಗೂ ಪರಿಶಿಷ್ಟರನ್ನು ಸ್ವಾವಲಂಬಿ ಮಾಡುವಂತಹ ಯೋಜನೆಗಳನ್ನು ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಹೇಳಿದ್ದಾರೆ.
ಆದಿ ಜಾಂಬವ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿ ಹಾಗೂ ವೆಬ್ಸೈಟ್ ಉದ್ಘಾಟಿಸಿ ಮಾತನಾಡಿ, ನಿಗಮದಿಂದ 2018-19 ಹಾಗೂ 2019-20 ನೇ ಸಾಲಿನಲ್ಲಿ ಸಮಗ್ರ ಗಂಗಾ ಕಲ್ಯಾಣ ಯೋಜನೆಯಡಿ 4540 ಫಲಾನುಭವಿಗಳಿಗೆ 187.25 ಕೋಟಿ ರೂ. ವೆಚ್ಚದಲ್ಲಿ ನೀರಾವರಿ ಸೌಲಭ್ಯ ಒದಗಿಸಲಾಗಿದೆ.
ಭೂ ಒಡೆತನ ಯೋಜನೆಯಡಿ 54 ಕೋಟಿ ರೂ. ವೆಚ್ಚದಲ್ಲಿ 285 ಫಲಾನುಭವಿಗಳಿಗೆ ಜಮೀನು ಖರೀದಿಸಿ ನೀಡಲಾಗಿದೆ ಎಂದರು. ಸಮೃದ್ಧಿ ಯೋಜನೆಯಡಿ 118 ಕೋಟಿ ರೂ. ವೆಚ್ಚದಲ್ಲಿ 1134 ಫಲಾನುಭವಿಗಳಿಗೆ ನೆರವು ನೀಡಲಾಗಿದೆ. ಐರಾವತ ಯೋಜನೆಯಡಿ 86 ಕೋಟಿ ರೂ. ವೆಚ್ಚದಲ್ಲಿ 1640 ಫಲಾನುಭವಿಗಳಿಗೆ ವಾಹನಗಳನ್ನು ವಿತರಿಸಲಾಗಿದೆ. ಸ್ವಯಂ ಉದ್ಯೋಗ ಯೋಜನೆಯಡಿ 54 ಕೋಟಿ ರೂ. ವೆಚ್ಚದಲ್ಲಿ 1310 ಫಲಾನುಭವಿಗಳಿಗೆ, ಮೈಕ್ರೋ ಕ್ರೆಡಿಟ್ ಯೋಜನೆಯಲ್ಲಿ 24.53 ಕೋಟಿ ರೂ. ವೆಚ್ಚದಲ್ಲಿ 10000 ಫಲಾನು ಭವಿಗಳಿಗೆ, ಪ್ರಾರಂಭಿಕ ಷೇರು ಬಂಡವಾಳ ಯೋಜನೆಯಡಿ 10 ಕೋಟಿ ರೂ. ವಿನಿಯೋಗಿ ಸಲಾಗುತ್ತಿದೆ. ಫಲಾನುಭವಿಗಳು ಈ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕು ಎಂದು ಕರೆ ನೀಡಿದರು.
Click this button or press Ctrl+G to toggle between Kannada and English