ಉಡುಪಿಯ ಖ್ಯಾತ ಉದ್ಯಮಿ ಅಲೆಕ್ಸ್ ಲೂವಿಸ್ ಬೆಂಗಳೂರಿನಲ್ಲಿ ಆತ್ಮಹತ್ಯೆ

12:05 PM, Thursday, January 23rd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Alex-Lewis

ಉಡುಪಿ : ಖ್ಯಾತ ಉದ್ಯಮಿ, ಕ್ರಿಕೆಟ್ ಪಟು ಮತ್ತು ಸಂಘಟಕ ಅಲೆಕ್ಸ್ ಲೂವಿಸ್ (45) ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿರುವ ಘಟನೆ ನಡೆದಿದೆ.

ಉದ್ಯಾವರದ ಬೋಳಾರ್ ಗುಡ್ಡೆ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದು ಡಿಎನ್ಎ ಹೋಂ ಥಿಯೇಟರ್ ಉದ್ಯಮವನ್ನು ನಡೆಸುತ್ತಿದ್ದರು. ಕಳೆದ ಹಲವಾರು ದಿನಗಳಿಂದ ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿದ್ದ, ಅಲೆಕ್ಸ್ ಲುವಿಸ್ ಇಂದು ಸಂಜೆ ಆತ್ಮಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಖ್ಯಾತ ಕ್ರಿಕೆಟ್ ಪಟು ಆಗಿದ್ದ ಇವರು, ಹಲವಾರು ಕ್ರಿಕೆಟ್ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ್ದರು. ಕೆಲವು ವರ್ಷಗಳ ಹಿಂದೆಯಷ್ಟೇ ಉದ್ಯಾವರದಲ್ಲಿ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯ ಕೂಟದ ನೇತೃತ್ವವನ್ನು ವಹಿಸಿದ್ದರು. ಕ್ರಿಕೆಟ್ ಜೊತೆಗೆ ತನ್ನ ಉದ್ಯಮವನ್ನು ಬೆಳೆಸಿ ಹಲವಾರು ಜನರಿಗೆ ಉದ್ಯೋಗವನ್ನು ಕೂಡ ನೀಡಿದ್ದರು.

ಸರಳ ಸ್ವಭಾವದ ಇವರು ಎಲ್ಲರೊಂದಿಗೂ ಹೊಂದಿಕೊಂಡು ಜೀವನವನ್ನು ನಡೆಸುತ್ತಿದ್ದರು. ಪತ್ನಿ ಸೀಮಾ, ಮಕ್ಕಳಾದ ಅ್ಯರನ್, ಅ್ಯಲ್ಡನ್ ಮತ್ತು ಡ್ಯಾರನ್ ಅವರನ್ನು ಅಗಲಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English