ಅಥೆನ್ಸ್ : ಗ್ರೀಸ್‌ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹಿಳೆಯನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಬುಧವಾರ ಅಲ್ಲಿನ ಸಂಸತ್‌ನಲ್ಲಿ ನಡೆದ ಮತದಾನದಲ್ಲಿ ಕ್ಯಾಟರಿನಾ ಸಕಲೊರಾಪುಲು (63) 261 ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ.
ಗ್ರೀಸ್‌ನ ಅತ್ಯುನ್ನತ ಆಡಳಿತಾತ್ಮಕ ನ್ಯಾಯಮಂಡಳಿ ಆಗಿರುವ ಕೌನ್ಸಿಲ್ ಆಫ್ ಸ್ಟೇಟ್‌ನ ಮುಖ್ಯಸ್ಥರಾಗಿದ್ದಾರೆ. ಅವರು ಸಾಂವಿಧಾನಿಕ ಕಾನೂನು ಮತ್ತು ಪರಿಸರ ವಿಚಾರದಲ್ಲಿ ಪರಿಣತರು. ನೂತನ ಅಧ್ಯಕ್ಷೆ ಮಾ.13ರಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
Click this button or press Ctrl+G to toggle between Kannada and English