ತುಳುವೆರೆ ಪಾರಂಪರಿಕ ಜ್ಞಾನ : ವಿಚಾರ ಸಂಕಿರಣ; ತುಳು ಭಾಷೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕು

5:44 PM, Thursday, January 23rd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

ujire

ಉಜಿರೆ : ಪ್ರಾಚೀನ ಮತ್ತು ಆಧುನಿಕತೆಯ ಸಂಗಮ ಕಾಲದಲ್ಲಿರುವ ನಾವು ಭವ್ಯ ಇತಿಹಾಸ, ಪರಂಪರೆ ಮತ್ತು ವೈವಿಧ್ಯಮಯ ಹಿನ್ನೆಲೆ ಹೊಂದಿರುವ ತುಳುಭಾಷೆ ಮತ್ತು ಸಂಸ್ಕೃತಿ ಬಗ್ಯೆ ಕೇಳರಿಮೆ ಹೊಂದದೆ ಅಭಿಮಾನ, ಗೌರವದೊಂದಿಗೆ ಉಳಿಸಿಕೊಳ್ಳಬೇಕು ಎಂದು ಧರ್ಮಸ್ಥಳದ ಹೇಮಾವತಿ ವೀ ಹೆಗ್ಗಡೆಯವರು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಎಸ್.ಡಿ.ಎಂ.ತುಳುಪೀಠ ಮತ್ತು ಉಜಿರೆಯ ಎಸ್.ಡಿ.ಎಂ.ಕಾಲೇಜಿನ ಕನ್ನಡ ವಿಭಾಗದ ತುಳು ಸಂಘದ ಜಂಟಿ ಆಶ್ರಯದಲ್ಲಿ ಉಜಿರೆಯಲ್ಲಿ ಎಸ್.ಡಿ.ಎಂ.ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ ತುಳುವೆರೆ ಪಾರಂಪರಿ ಕಜ್ಞಾನ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ujire

ತುಳುನಾಡಿನ ನಂಬಿಕೆ-ನಡವಳಿಕೆಗಳು, ಆಚಾರ-ವಿಚಾರಗಳು, ಸಂದಿ-ಪಾಡ್ದನಗಳು, ತಾಳ ಮದ್ದಳೆ, ಯಕ್ಷಗಾನ, ಜಾನಪದ ಕಲೆಗಳು, ಬಲೀಂದ್ರ ಪೂಜೆ, ಭೂತಾರಾಧನೆ, ನಾಗಾರಾಧನೆ, ಕೃಷಿ ಸಂಸ್ಕೃತಿ ನಮ್ಮ ಸಾರ್ಥಕ ಬದುಕಿಗೆ ಪ್ರೇರಕವಾಗಿವೆ. ಸರ್ವಧರ್ಮೀಯರೊಂದಿಗೆ ಸಾಮರಸ್ಯದ ಸಾರ್ಥಕ ಬದುಕಿಗೆ ಮಾರ್ಗದರ್ಶಕವಾಗಿದೆ.

ತನ್ನ ಬಾಲ್ಯದಲ್ಲಿ ಪೆರಾಡಿ ಬೀಡಿನಲ್ಲಿ ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಸವಿದ ಮಧುರ ಕ್ಷಣಗಳನ್ನು ಧನ್ಯತೆಯಿಂದ ಸ್ಮರಿಸಿದ ಅವರು, ಕಂಬಳ, ಒನಕೆಯಿಂದ ಭತ್ತ ಕುಟ್ಟುವುದು, ದೀಪಾವಳಿ ಸಂದರ್ಭದಲ್ಲಿ ಗೋ ಪೂಜೆ, ಬಲೀಂದ್ರ ಪೂಜೆ, ನೊಗ-ನೇಗಿಲು, ಹಾರೆ-ಪಿಕ್ಕಸು ಮೊದಲಾದ ಕೃಷಿ ಪರಿಕರಗಳಿಗೆ ಪೂಜೆ, ನೀಜಿ ನೆಡುವುದು, ಕೃಷಿಯಲ್ಲಿ ಮಹಿಳೆಯರು ರಾಗದಿಂದ ಸರಾಗವಾಗಿ ಹಾಡುತ್ತಿದ್ದ ಸಂದಿ-ಪಾಡ್ದನಗಳ ಸೊಬಗನ್ನು ಅವರು ವಿವರಿಸಿದರು.

ಧಣಿ-ಒಕ್ಕಲು ಸಂಬಂಧ, ಅಜ್ಜನ ಬಿಸಿ ನೀರಿನ ಸ್ನಾನ, ಕಾಟು ಮಾವಿನ ಮಿಡಿ ತಿಂದ ಅನುಭವ, ಉಪ್ಪಿನಕಾಯಿ, ಪತ್ರೊಡೆಯ ಔಷಧಿಯಗುಣ ಹಾಗೂ ರೋಗ ನಿರೀಧಕ ಶಕ್ತಿಯ ಮಹತ್ವವನ್ನು ಅವರು ವಿವರಿಸಿದರು. ತನ್ನ ಅಮ್ಮನ ಕಾವ್ಯ ವಾಚನಕ್ಕೆ ಮನೆಯ ಕೂಲಿ ಕೆಲಸದವರೇ ಶ್ರೋತೃಗಳು ಆಗಿದ್ದರು.

ujire

ತುಳು ಭಾಷೆ ನಮ್ಮ ಮನೆಯ ಮಾತಾಗಬೇಕು.ನಿತ್ಯವೂ ಆಡು ಭಾಷೆಯಾಗಬೇಕು.ನಾಗಾರಾಧನೆ, ಭೂತಾರಾಧನೆಯೊಂದಿಗೆ ವನಸಿರಿ ಹಾಗೂ ಜಲ ಸಂಪತ್ತು ಕಾಪಾಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಅವರು ಹೇಳಿದರು.

ಎಸ್.ಡಿ.ಎಂ.ಕಾಲೇಜಿನಐಚ್ಛಿಕಕನ್ನಡ ವಿದ್ಯಾರ್ಥಿಗಳು ರಚಿಸಿದ ಅರಿವು ಡಿಜಿಟಲ್ ಪತ್ರಿಕೆಯನ್ನುಡಾ. ಬಿ. ಯಶೋವರ್ಮ ಬಿಡುಗಡೆಗೊಳಿಸಿ ಶುಭ ಹಾರೈಸಿದರು.ಯುವಜನತೆ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದುಅವರು ಸಲಹೆ ನೀಡಿದರು.

ತುಳು ನಾಡಿನ ನಂಬಿಕೆಗಳು ಮೂಡ ನಂಬಿಕೆಗಳಲ್ಲ, ಮೂಲ ನಂಬಿಕೆಗಳು :
ಅಧ್ಯಕ್ಷತೆ ವಹಿಸಿದ ಮಂಗಳೂರು ವಿ.ವಿ. ಕುಲಪತಿಡಾ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ, ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ವೈವಿದ್ಯಮಯ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಮರೆತರೂ, ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. ನಮ್ಮ ನಂಬಿಕೆ-ನಡವಳಿಕೆಗಳು, ಆಚಾರ-ವಿಚಾರಗಳು ವೈಜ್ಞಾನಿಕ ಹಿನ್ನಲೆ ಹೊಂದಿದ್ದುಗೊಡ್ಡು ಸಂಪ್ರಾಯಗಳಲ್ಲ. ತುಳುನಾಡಿನ ನಂಬಿಕೆಗಳು ಮೂಡ ನಂಬಿಕೆಗಳಲ್ಲ, ಮೂಲ ನಂಬಿಕೆಗಳು ಎಂದುಅವರು ಸ್ಪಷ್ಟ ಪಡಿಸಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಸರ್ಕಾರದ ಸಹಯೋಗದೊಂದಿಗೆ ತುಳುವನ್ನು ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ಸೇರಿಸುವ ಬಗ್ಯೆ ಪ್ರಯತ್ನ ನಡೆಸಲಾಗುತ್ತಿದೆಎಂದರು.

ಉಜಿರೆಯಲ್ಲಿ ನಡೆದ ವಿಶ್ವ ತುಳ ಸಮ್ಮೇಳನದ ಸವಿ ನೆನಪನ್ನುಅವರು ಸ್ಮರಿಸಿದರು.ತುಳು ಭಾಷೆ, ಸಂಸ್ಕೃತಿ ಸಂರಕ್ಷಣೆಗೆ ಯುವಜನತೆ ಕಟಿಬದ್ಧರಾಗಬೇಕು ಎಂದು ಅವರು ಸಲಹೆ ನೀಡಿದರು.

ಮಂಗಳೂರು ವಿ.ವಿ. ತುಳು ಪೀಠದ ಸಂಯೋಜಕಡಾ.ಮಾಧವ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಡಿ.ಎಂ.ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಸತೀಶ್ಚಂದ್ರ ಸ್ವಾಗತಿಸಿದರು.ಡಾ. ಸನ್ಮತಿ ಕುಮಾರ್‌ ಧನ್ಯವಾದವಿತ್ತರು.ಡಾ. ದಿವಾಕರ ಕೆ.ಕಾರ್ಯಕ್ರಮ ನಿರ್ವಹಿಸಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English