ಕುಳಾಯಿಯಲ್ಲಿ ಹಿಂದೂ ರಾಷ್ಟ್ರದ ರಣಕಹಳೆ ಮೊಳಗಿಸಿದ ಹಿಂದೂ ಜನಜಾಗೃತಿ ಸಮಿತಿ

1:57 PM, Monday, January 27th, 2020
Share
1 Star2 Stars3 Stars4 Stars5 Stars
(No Ratings Yet)
Loading...

Hindurastraಕುಳಾಯಿ : ಶ್ರೀ‌ ವಿಷ್ಣು ಮೂರ್ತಿ ದೇವಸ್ಥಾನ ಕುಳಾಯಿ ಇದರ ಸಭಾಗೃಹದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ರಾಷ್ಟ್ರ ಜಾಗೃತಿ ಸಭೆಯು ಭಾವಪೂರ್ಣ ವಾತಾವರಣದಲ್ಲಿ ಜರುಗಿತು.

ಸಭೆಯನ್ನು ಹಿಂದುತ್ವವಾದಿಗಳಾದ ಶ್ರೀ. ಮಂಜುನಾಥ್ ಮಾನ್ಯ್ ಇವರು ದೀಪಪಲಪ್ರಜ್ವಲನೆ ಮಾಡಿ ಸಭೆಗೆ ಚಾಲನೆ ನೀಡಿದರು. ಈ‌ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸೌ. ಲಕ್ಷ್ಮೀ ಪೈ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ.ಚಂದ್ರ ಮೊಗೇರ್ ಇವರು ಸಭೆಯ ಮುಖ್ಯ ವಕ್ತಾರರಾಗಿ ಪಾಲ್ಗೊಂಡರು.

ಶ್ರೀ ಮಂಜುನಾಥ ಇವರು ‘ಹಿಂದೂ ರಾಷ್ಟ್ರದ ಜೊತೆ ಬೆಳಗಬೇಕಾದರೆ ಪ್ರತಿಯೊಬ್ಬ ಹಿಂದೂ ಬದಲಾಗಬೇಕು’ ಎಂದು ತಮ್ಮ ವಿಚಾರವನ್ನು ವ್ಯಕ್ತ ಪಡಿಸಿದರು.

ಸನಾತನ ಸಂಸ್ಥೆಯ ಸೌ. ಲಕ್ಷ್ಮೀ ಪೈ ಸಭೆಗೆ ಆಗಮಣನಿಸಿದ ಧರ್ಮಪ್ರೇಮಿಗಳಿಗೆ ಧರ್ಮಾಚರಣೆಯ ಮಹತ್ವವನ್ನು ಬಿಂಬಿಸು ಮಾತುಗಳನ್ನಾಡಿದರು ಮತ್ತು ದೇವಸ್ಥಾನ ಸರ್ಕಾರಿ ಕರಣದಿಂದ ಆಗುತ್ತಿರುವ ಧರ್ಮಹಾನಿಯ ವಿಷಯದಲ್ಲಿ ಮಾರ್ಗದರ್ಶನವನ್ನು ಮಾಡಿ- ಧರ್ಮರಕ್ಷಣೆ ಕಾರ್ಯದಲ್ಲಿ ಸಹಭಾಗಿಯಾಗಲು ಕರೆಯನ್ನು ನೀಡಿದರು.

Hindurastraಸಭೆಯಲ್ಲಿ ರಾಷ್ಟ್ರ ಮತ್ತು ಧರ್ಮಜಾಗೃತಿಗೆ ಸಂಬಂಧಿಸಿದಂತಹ ಫ್ಲೆಕ್ಸ್ ಪ್ರದರ್ಶನವನ್ನು ಏರ್ಪಡಿಸಲಾಯಿತು.

ಸನಾತನ ಸಂಸ್ಥೆಯ ಸಾತ್ವಿಕ ಉತ್ಪಾದನೆ ಮತ್ತು ಆಧ್ಯಾತ್ಮಿಕ ಗ್ರಂಥಗಳ ಪ್ರದರ್ಶನ ಮತ್ತು ವಿತರಣೆ ಮಳಿಗೆಯನ್ನು ಕೂಡ ಹಮ್ಮಿಕೊಳ್ಳಲಾಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English