ವಾಟ್ಸಾಪ್​ ವಿಡಿಯೋ ಕಾಲ್ ಬಳಸಿ ದರೋಡೆ ಮಾಡುತ್ತಿದ್ದ ಬೆಂಗಳೂರಿನ ಹೈಟೆಕ್ ಕಳ್ಳನ ಬಂಧನ

12:01 PM, Tuesday, January 28th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

bengaluru

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಪರಾಧಗಳನ್ನು ತಡೆಗಟ್ಟಲು ಪೊಲೀಸರು ಎಷ್ಟೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಅದಕ್ಕೆ ಪರ್ಯಾಯವಾಗಿ ದರೋಡೆಕೋರರು ಹೊಸ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಅದೇರೀತಿ, ಮೊಬೈಲ್ ತಂತ್ರಜ್ಞಾನವನ್ನು ದರೋಡೆಗೆ ಬಳಕೆ ಮಾಡಿಕೊಳ್ಳುತ್ತಿದ್ದ ಕಳ್ಳರ ಜಾಲವೊಂದನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ.

ಕಳ್ಳತನ ಮಾಡಲು ಹೋಗಬೇಕಾದ ಮನೆಯಲ್ಲಿ ಯಾರಾದರೂ ಇದ್ದಾರಾ? ಎಂದು ನೋಡಲು ನಾನಾ ಉಪಾಯಗಳನ್ನು ಕಂಡುಕೊಂಡಿದ್ದ ಮಹಾನಗರಗಳ ಕಳ್ಳರು ಈಗ ಹೊಸ ಮಾರ್ಗ ಕಂಡುಕೊಂಡಿದ್ದಾರೆ. ತಡರಾತ್ರಿ ವಿಡಿಯೋ ಕಾಲ್ ಮುಖಾಂತರ ಅಂಗಡಿ, ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಕಳ್ಳರು ಈಗ ಪೊಲೀಸರ ವಶದಲ್ಲಿದ್ದಾರೆ.

ಮೊಬೈಲ್ನಲ್ಲಿ ವಿಡಿಯೋ ಕಾಲ್ ಮಾಡಿ ಅಂಗಡಿಯನ್ನು ತೋರಿಸುತ್ತಿದ್ದ ಒಬ್ಬ ಕಳ್ಳ ಆ ಅಂಗಡಿಯನ್ನು ಲೂಟಿ ಮಾಡಲು ಸೂಚಿಸುತ್ತಿದ್ದ. ವಿಡಿಯೋ ಕಾಲ್ ಮೂಲಕ ನೋಡಿಕೊಂಡ ಅಂಗಡಿಯ ಬೀಗ ಮುರಿದು ಕನ್ನ ಹಾಕುತ್ತಿದ್ದ ಇನ್ನೊಬ್ಬ ಕಳ್ಳ ತಡರಾತ್ರಿ ದರೋಡೆ ಮಾಡುತ್ತಿದ್ದ. ಈ ಗುಂಪು ಈಗ ಪೊಲೀಸರ ಅತಿಥಿಯಾಗಿದೆ.

ಸೈಯದ್ ಮಹಮದ್ ಫೈಸಲ್ ಎಂಬ 23 ವರ್ಷದ ಆರೋಪಿಯನ್ನು ಬಂಧಿಸಲಾಗಿದ್ದು, ಆತ ಬಾಯಿಬಿಟ್ಟ ವಿಡಿಯೋ ಕಾಲ್ ಡೀಲ್ ಕೇಳಿ ಪೊಲೀಸರು ಅಚ್ಚರಿಪಟ್ಟಿದ್ದಾರೆ. ನಾಗವಾರದ ನಿವಾಸಿಯಾದ ಈ ಯುವಕನಿಗೆ ಲೈವ್ ಬ್ಯಾಂಡ್ ಶೋಕಿ. ಶೋಕಿಗೆ ಬಿದ್ದ ಈತ ಸರಣಿ ಅಂಗಡಿಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ. ಈಗಾಗಲೇ ಬೆಂಗಳೂರಿನಲ್ಲಿ ಈತನ ವಿರುದ್ಧ 9ಕ್ಕೂ ಅಧಿಕ ಪ್ರಕರಣ ದಾಖಲಾಗಿದೆ.

ಅಶೋಕನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಿಂದ ಈತ ಸಿಕ್ಕಿಬಿದ್ದಿದ್ದಾನೆ. ಅಶೋಕ ನಗರ, ಶಾಂತಿನಗರ, ವಿಲ್ಸನ್ ಗಾರ್ಡನ್ ಸೇರಿದಂತೆ ಹಲವು ಕಡೆ ಕೃತ್ಯ ಎಸಗಿದ್ದ ಸೈಯದ್ ಮಹಮದ್ ಫೈಸಲ್ ಮಧ್ಯರಾತ್ರಿ ಒಂಟಿಯಾಗಿ ಬಂದು ಸರಣಿ ಅಂಗಡಿಗಳ ಬೀಗ ಒಡೆದು ಕಳ್ಳತನ ಮಾಡುತ್ತಿದ್ದ. ಬಳಿಕ ಕದ್ದ ಮಾಲನ್ನು ಮಾರಿ ಲೈವ್ ಬ್ಯಾಂಡ್ಗೆ ತೆರಳುತ್ತಿದ್ದ.

ಮತ್ತೊಂದು ನಿರ್ಭಯಾ ಪ್ರಕರಣ; ಅತ್ಯಾಚಾರ ಮಾಡಿ ಗುಪ್ತಾಂಗಕ್ಕೆ ಕಬ್ಬಿಣದ ಸಲಾಕೆ ಚುಚ್ಚಿದ ಕಾಮುಕಕಳ್ಳತನ ಮಾಡಲು ವಾಟ್ಸಾಪ್ ವಿಡಿಯೋ ಕಾಲ್ ಬಳಸುತ್ತಿದ್ದ ಸೈಯದ್ಗೆ ಇನ್ನೋರ್ವ ಆರೋಪಿ ವಿಕ್ರಂ ಸಾಥ್ ನೀಡುತ್ತಿದ್ದ. ಆತ ಮನೆಯಲ್ಲೇ ಕುಳಿತುಕೊಂಡು ವಿಡಿಯೋ ಕಾಲ್ ಮೂಲಕ ಸೈಯದ್ಗೆ ಸೂಚನೆ ನೀಡುತ್ತಿದ್ದ. ಸೈಯದ್ ಕದಿಯೋದನ್ನು ವಿಡಿಯೋ ಕಾನ್ಫರೆನ್ಸ್ನಲ್ಲಿ ವಿಕ್ರಂ ನೋಡುತ್ತಿದ್ದ.

ಕಳ್ಳರ ಈ ಮಾಸ್ಟರ್ ಮೈಂಡ್ ಗೇಮ್ನ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ವಿಡಿಯೋ ಕಾಲ್ನ ಮಾತು, ಕೆಲಸ ಎಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೆರೆಯಾದ ಸಿಸಿಟಿವಿ ದೃಶ್ಯವನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನಿಂದ ಲಕ್ಷಾಂತರ ಮೌಲ್ಯದ ಬ್ರ್ಯಾಂಡೆಡ್ ವಾಚ್ಗಳು, ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಪರಾರಿಯಾದ ವಿಕ್ರಂಗಾಗಿ ಅಶೋಕನಗರ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English